
ಶಿವಮೊಗ್ಗ: ಎಲ್ಲಾ ಸೈಬರ್ಗಳಿಗೆ ಲೇಬರ್ ಕಾರ್ಡ್ ಮಾಡಿಕೊಡುವ ಅಧಿಕಾರವನ್ನು ರದ್ದುಪಡಿಸಿ ಹಳೆ ಮಾದರಿಯಲ್ಲಿ ಲೇಬರ್ ಕಾರ್ಡ್ ಆಫೀಸಿನಿಂದಲೇ ಕಾರ್ಡ್ ಮಾಡಿಕೊಡಬೇಕು ಎಂದು ಕರ್ನಾಟಕ ಕನ್ಸ್ ಟ್ರಕ್ಷನ್ ವರ್ಕಸ್೯ ಯೂನಿಯನ್ ಅಧ್ಯಕ್ಷ ಆರ್. ವಾಸುದೇವ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನೋಂದಣಿಗೆ 30ರೂ. ಪಡೆಯುತ್ತಿದ್ದರು. ಈಗ ನೂರು ರೂಪಾಯಿ ಪಡೆದು ಅದೇ ರೀತಿಯಲ್ಲಿ ನೊಂದಣಿ ಮಾಡಕೊಬೇಕು. ಹಳೆ ಮಾದರಿಯಲ್ಲಿ ಲೇಬರ್ ಕಾರ್ಡ್ ಆಫೀಸಿನಿಂದಲೇ ಕಾರ್ಡು ನೋಂದಣಿ ಮಾಡಿಕೊಡುತ್ತಿದ್ದರು. ಈಗ 100ರೂ ಪಡೆದು ಅದೇ ಮಾದರಿಯಲ್ಲಿ ನೊಂದಣಿ ಮಾಡಿಕೊಂಡು ಲೇಬರ್ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರಿಗೆ ನೀಡುತ್ತಿರುವ ಕಿಟ್ಟುಗಳು ನಿಜವಾದ ಕಾರ್ಮಿಕರಿಗೆ ಸಿಗುತ್ತಿಲ್ಲ. ಆದ್ದರಿಂದ ಅದನ್ನು ರದ್ದುಪಡಿಸಿ ಕಾರ್ಮಿಕರ ಕುಟುಂಬದ ಒಳತಿಗಾಗಿ ಬೋನಸ್ ರೀತಿಯಲ್ಲಿ ಹದಿನೈದು ಸಾವಿರ ರೂ ನೋಂದಣಿ ಮಾಡಿಸಿಕೊಂಡಂತಹ ಕಾರ್ಮಿಕರಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಮಕ್ಕಳಿಗೆ ಆದಷ್ಟು ಬೇಗ ಸ್ಕಾಲರ್ಶಿಪ್ ಹಣವನ್ನು ಬಿಡುಗಡೆಗೊಳಿಸಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು. ಮದುವೆಯ ಸಹಾಯಧನ 60,000ರೂ. ನೀಡುತ್ತಿದ್ದು ಅದನ್ನು 1.5ಲಕ್ಷ ರೂ.ಗಳಿಗೆ ಏರಿಸಬೇಕು. ವೈದ್ಯಕೀಯ ಸಹಾಯಧನ, ಮೆಡಿಕಲ್ ಬಿಲ್ಲುಗಳಿಗೆ ಚಿಕಿತ್ಸೆಗೆ ಒಳಪಟ್ಟಂತಹ ಕಾರ್ಮಿಕರು ಎಷ್ಟು ಬಿಲ್ ಪಾವತಿ ಮಾಡಿರುತ್ತಾರೋ ಅದನ್ನು ಕಡಿತಗೊಳಿಸದೆ ನೂರರಷ್ಟು ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ಪಿಂಚಣಿಯನ್ನು 6,000 ಹೆಚ್ಚಿಸಿ ಕಳೆದ ಐದು ತಿಂಗಳಿನಿಂದ ಬಿಡುಗಡೆಯಾಗದ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಕಾರ್ಮಿಕರಿಗೆ ಸ್ವಂತ ನಿವೇಶನವಿದ್ದರೂ ಅವರಿಗೆ ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ ನೀಡಬೇಕು ಅಥವಾ ನಿವೇಶನ ಖರೀದಿಗೆ 3,00,000 ಮಂಡಳಿಯಿಂದ ನೀಡಬೇಕು. ಹೆರಿಗೆ ಬತ್ತೆ ರೂ.30,000ರೂ. ದಿಂದ 60,000 ರೂ.ಗೆ ಹೆಚ್ಚಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಭಾಸ್ಕರ್, ಜೆ.ಶ್ರೀಧರ್, ಮುರುಗನ್, ಟಿ.ಮೋಹನ್, ಕುಮಾರ್, ಅರುಣ್, ಜಯಪ್ಪ ಮೊದಲಾದವರಿದ್ದರು.