
ಶಿವಮೊಗ್ಗ : ಪ್ರೋ. ಬಿ.ಕೃಷ್ಣಪ್ಪಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ.ನಂ.೪೭/೭೪-೭೫)ಗೆ ಎಂ. ಗುರುಮೂರ್ತಿ ಅವರೇ ನಿಜವಾದ ಪದಾಧಿಕಾರಿಯಾಗಿದ್ದು, ಈ ಸಂಘಟನೆಯ ಹೆಸರನ್ನು ಅವರನ್ನು ಹೊರತುಪಡಿಸಿ ಬೇರೆ ಯಾರು ಬಳಸಿಕೊಳ್ಳಬಾರದೆಂದು ನ್ಯಾಯಾಲಯವು ಆದೇಶಿಸಿದೆ. ಇ?ಗಿಯೂ ಮುಂದೆ ಯಾರೇ ತಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಎಚ್ಚರಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ನೀಡಿದ ಕಾನೂನು ವ್ಯವಸ್ಥೆಯನ್ನು ಯಾವುದೇ ದಲಿತ ಮುಖಂಡರು ಗೌರವಿಸುವುದೇ ಆಗಿದ್ದಲ್ಲಿ ಮುಂದೆ ಯಾರು ಕೂಡ ತಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಹಾಗೊಂದು ವೇಳೆ ಬಳಸಿದ್ದೇ ಆದಲ್ಲಿ ರಾಜ್ಯಾದ್ಯಂತ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. ಹೈಕೋರ್ಟ್ ನಲ್ಲಿ ಕೆವಿಟ್ ಹಾಕಲಾಗುವುದು ಎಂದರು.

ಹಿರಿಯ ವಕೀಲ ಸೀತರಾಮ್ ಮಾತನಾಡಿ, ದಲಿತ ಸಂಘ? ಸಮಿತಿ ಹೆಸರನ್ನು ಪ್ರೊ.ಕೃ?ಪ್ಪ ೭೪/೭೫ ಎಂದು ನೋಂದಣಿ ಮಾಡಿಸಲಾಗಿತ್ತು. ಗುರುಮೂರ್ತಿ ೨೦೦೮ ರವರೆಗೆ ಆಡಿಟ್ ಮಾಡಿಸುತ್ತಿದ್ದರು. ಸತ್ಯಮತ್ತು ಇತರರು ಡಿಆರ್ ಗೆ ಪತ್ರ ಬರೆದು ತಕರಾರು ಮಾಡಿದ್ದರು. ತಕರಾರಿಗೆ ಸಮಿತಿ ರಚಿಸಲಾಗಿತ್ತು. ಸಮಿತಿಯು ಸಾಧ್ಯವಿಲ್ಲದ ಪ್ರಕರಣ ಎಂದು ಬರೆದು, ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸೂಚಿಸಿತ್ತು. ಗುರುಮೂರ್ತಿ ಅವರು ಭದ್ರಾವತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಭದ್ರಾವತಿಯ ನ್ಯಾಯಾಲಯ ಗುರುಮೂರ್ತಿ ಪರ ನ್ಯಾಯ ಪ್ರಕಟಿಸಿತ್ತು ಎಂದರು.
ಇದಾದ ಮೇಲೆದಲಿತ ಮುಖಂಡ ಸತ್ಯ ಅವರು ಕೆಳನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅಲ್ಲಿ ನ್ಯಾಯಾಲಯವು ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹಾಗಾಗಿ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿ ನ್ಯಾಯಾಲಯ ತಡೆ ನೀಡಿತ್ತಲ್ಲದೆ, ?ರತ್ತುಗಳ ಪ್ರಕಾರ ಪ್ರೋ. ಬಿ.ಕೃ?ಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘ? ಸಮಿತಿ ಯನ್ನು ಎಂ. ಗುರುಮೂರ್ತಿ ಅವರೇ ಬಳಸಿಕೊಳ್ಳಲು ಸೂಚಿಸಿತ್ತು.ಆನಂತರ ಹೈಕೋರ್ಟ್ ವಿಚಾರಣೆ ನಡೆಸಿ ಕೆಳನ್ಯಾಯಾಲಯದ ಆದೇಶವನ್ನ ಎತ್ತಿಹಿಡಿದಿದೆ ಎಂದು ತಿಳಿಸಿದರು.

ಪ್ರೋ.ಬಿ.ಕೃ?ಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘ? ಸಮಿತಿ ಹೆಸರಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಹಿಂದೆ ಕೆಲವರು ಭದ್ರಾವತಿಯಲ್ಲಿ ಸಂವಿಧಾನ ಸಮಾವೇಶ ಆಯೋಜಿಸಿದ್ದ ಸಂದರ್ಭದಲ್ಲಿ ನ್ಯಾಯಾಲಯವು, ಕಾರ್ಯಕ್ರಮ ನಡೆಸದಂತೆ ನೋಡಿಕೊಳ್ಳಲು ಡಿವೈಎಸ್ ಪಿ ಅವರಿಗೆ ಸೂಚನೆ ನೀಡಿತ್ತು. ಆದರೂ ಅಲ್ಲಿ ಕಾರ್ಯಕ್ರಮ ನಡೆಯಿತು. ಇದಕ್ಕೆ ಡಿವೈಎಸ್ ಪಿ ಅವರೇ ಸಂಪೂರ್ಣ ಹೊಣೆಗಾರರು. ಅವರ ವಿರುದ್ದ ಯಾವ ರೀತಿಯ ಹೋರಾಟ ನಡೆಸಬೇಕೆನ್ನುವುದರ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಶಿವಕುಮಾರ್ ಭದ್ರಾವತಿ, ದಸಂಸ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ಬೊಮ್ಮನ್ ಕಟ್ಟೆ ಕೃ?ಪ್ಪ, ಮೂಗೂರು ಪರಶುರಾಮ್, ಚಿಕ್ಕಮರಡಿ ರಮೇಶ್, ಶಿವಬಸಪ್ಪ, ನಾಗರಾಜ್, ದೌರ್ಜನ್ಯ ಸಮಿತಿ ಸದಸ್ಯ ಹನುಮಂತಪ್ಪ ಯಡವಾಲ, ಹರಿಗೆ ರವಿ, ತಮ್ಮಯ್ಯ, ಹನುಮಂತಪ್ಪ ಉಪಸ್ಥಿತರಿದ್ದರು.