
ಶಿವಮೊಗ್ಗ, ಮಾ.13 : ಶಿವಮೊಗ್ಗ ಕಾಂಗ್ರೆಸ್ ಮಹಿಳಾ ಘಟಕ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ

ಮಹಿಳೆಯರಿಗಾಗಿ ಮಾರ್ಚ್ 15 ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಆಟೋಟ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಉತ್ತರ


ಬ್ಲಾಕ್ ಅಧ್ಯಕ್ಷರಾದ ಭಾರತಿರಾಮಕೃಷ್ಣ ಹಾಗೂ ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಸುವರ್ಣನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನಪದ ಗೀತೆ, ಜನ, ರಂಗೋಲಿ ಸ್ಪರ್ಧೆ ಪ್ಯಾಷನ್ ಶೋ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಜಾನಪದ ಗೀತೆಗೆ ನಾಲ್ಕರಿಂದ ಐದು ಜನ, ರಂಗೋಲಿ ಸ್ಪರ್ಧೆ ಯಲ್ಲಿ ಭಾಗವಹಿಸುವವರು ಬಣ್ಣ ಮತ್ತು ರಂಗೋಲಿ ತರಬೇಕೆಂದು ತಿಳಿಸಿದ್ದಾರೆ.