ಶಿವಮೊಗ್ಗ,ಮಾ.10: ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘ, ಶಿವಮೊಗ್ಗ ಜಿಲ್ಲಾ ಮೊಗವೀರ ಮಹಾಜನ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 23 ರಂದು ಶಿವಮೊಗ್ಗ ನಗರದ ಮಾಧವ ಮಂಗಲ ಸಭಾ ಭವನದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘದ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ನೆಲೆಸಿರುವ ಗಂಗಾಮತ, ಬೆಸ್ತ, ಮೊಗವೀರ, ಸುಣಗಾರ, ಕೋಲಿ, ಕಬ್ಬಲಿಗ, ಜಾಲಗಾರ, ಬಾರ್ಕಿ ಇತರೆ ಪರ್ಯಾಯ ಹೆಸರುಗಳಿಂದ ಕರೆಯಲ್ಪಡುವ ಉಪಜಾತಿಗಳ ಅನುಕೂಲಕ್ಕಾಗಿ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಸೂಕ್ತ ವಧು-ವರರನ್ನು ಆಯ್ಕೆ ಮಾಡಿಕೊಳ್ಳುವ ಈ ಸದಾವಕಾಶದ ಉಪಯೋಗ

ಪಡೆದುಕೊಳ್ಳಬೇಕೆಂದು ಕೋರಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ತಮ್ಮ ಇತ್ತೀಚಿನ 2 (4×6) ಪೋಸ್ಟ್ ಕಾರ್ಡ್ ಅಳತೆಯ ಪೂರ್ಣ ಭಾವಚಿತ್ರದೊಂದಿಗೆ ಬಯೋಡಾಟಾ (ವಧು-ವರರ ಮಾಹಿತಿ ನಮೂನೆ) ಭರ್ತಿ ಮಾಡಿ ಸಂಘದ ಕಛೇರಿಯ ವಿಳಾಸಕ್ಕೆ ದಿನಾಂಕ 15-03-2025ರ ಒಳಗಾಗಿ ತಲುಪಿಸಬೇಕೆಂದು ಕಾರ್ಯದರ್ಶಿ ತಿಳಿಸಿದ್ದಾರೆ.