
ಶಿವಮೊಗ್ಗ:
ಉತ್ತಮ ಶಿಕ್ಷಣದಿಂದ ಮಹಿಳೆಯರ ಪ್ರಗತಿ ಸಾಧ್ಯ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ ಪಲ್ಲವಿ ಅಭಿಪ್ರಾಯಪಟ್ಟರು,
ಅವರು ಶನಿವಾರ ಸೆಕ್ರೆಡ್ ಹಾರ್ಟ್ ಚರ್ಚ್ ಆಭರಣದಲ್ಲಿರುವ ಸ್ನೇಹ ಭವನದಲ್ಲಿ ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಮಹಿಳೆಯರು ಸಬಲರಾಗಿದ್ದು ಅವರ ಪ್ರಗತಿಗೆ ಶಿಕ್ಷಣ ಅತ್ಯವಶ್ಯಕ, ಶಿಕ್ಷಣವೇ ಶಕ್ತಿ ಈ ಶಕ್ತಿಯಿಂದ ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬಹುದು ಅಲ್ಲದೆ ತನ್ನ ಚಾಪನ್ನು ಮೂಡಿಸಬಹುದು ಎಂದು ಅಭಿಪ್ರಾಯಪಟ್ಟರು,

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದರು, ಅವರ ಮಾರ್ಗದರ್ಶನವೇ ನಮಗೆಲ್ಲ ಪ್ರೇರಣೆಯಾಗಿದೆ ಎಂದರು,
ಈ ನಿಟ್ಟಿನಲ್ಲಿ ಮಾನಿನಿ ರಾಜ್ಯ ಮಹಿಳಾ ಒಕ್ಕೂಟವು ಮಹಿಳೆಯರನ್ನು ಸಂಘಟಿಸುವ ಮೂಲಕ ಮುಖ್ಯ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡುತ್ತಿರುವುದು ಸಂತಸದ ವಿ?ಯ ಎಂದರು,
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ, ಎಸ್. ಜೆ, ಭದ್ರಾವತಿ ಧರ್ಮ ಕ್ಷೇತ್ರದ ಧರ್ಮ ಅಧ್ಯಕ್ಷರಾದ ಜೋಸೆಫ್ ಅರಮಚಡತ್, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಸದಸ್ಯರಾದ ಶಾರದಾ ಪೂರ್ಯನಾಯ್ಕ್, ವಿಧಾನ ಪರಿ?ತ್ ಸದಸ್ಯರಾದ ಬಲ್ಕಿಶ್ ಬಾನು, ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮಂಜುಳಾ ಜಾನ್, ಮಾನಿನಿ ಒಕ್ಕೂಟದ ಗೌರವಾಧ್ಯಕ್ಷರಾದ ಸಿ. ನ್ಯಾನ್ಸಿ ಲೋಬೋ, ನಿರ್ದೇಶಕರಾದ ರೀಟಾ ನರೋನ, ಮಾಜಿ ಸೂಡಾ ಅಧ್ಯಕ್ಷರಾದ ಎನ್. ರಮೇಶ್, ಫಾದರ್ ರಿಚರ್ಡ್ ಪಯ್ಸ್, ಗೀತಾ ರವೀಂದ್ರ ಸೇರಿದಂತೆ ಉಮ್ಮತ್ತಿ ತರದ ಉಪಸ್ಥಿತರಿದ್ದರು.