ಶಿವಮೊಗ್ಗ: ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಿಂದುಳಿದ ವರ್ಗದ ದೀಮಂತ ನಾಯಕರು ಹಾಗೂ ನನ್ನ ನಾಯಕರು ಆದ ಶ್ರೀ ಮಧು ಬಂಗಾರಪ್ಪನವರ ಜನ್ಮದಿನದ ಅಂಗವಾಗಿ ಯುವ ಮುಖಂಡ ಶರತ್ ಮರಿಯಪ್ಪ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಅವರು ಪಾಲಿಕೆಯಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಶರತ್, ಸಚಿವ ಮಧು ಬಂಗಾರಪ್ಪ ಅವರು ಶಾಸಕರಾಗಿ ಜನಾನುರಾಗಿಯಾಗಿದ್ದಾರೆ. ಯುವಕರ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಅವರು ಗ್ಯಾರಂಟಿಗಳ ಅನುಷ್ಠಾನಕ್ಕಾಗಿಯೂ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರು ನಮ್ಮ ಕಣ್ಮಣಿಯಾಗಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ನಾವು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮಹಿಳಾ ಪೌರ ನೌಕರರಿಗೆ ಸೀರೆಯನ್ನು ಹಂಚಿದೆವು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ವಿಧಾನಪರಿ?ತ್ ಸದಸ್ಯರಾದ ಬಲ್ಕಿಶ್ ಬಾನು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಕಲಗೋಡು ರತ್ನಾಕರ್, ರಂಗನಾಥ್, ಜಿ.ಡಿ. ಮಂಜುನಾಥ್, ಭದ್ರಾವತಿಯ ಶಿವಣ್ಣ, ಗುಂಡಣ್ಣ, ಪ್ರವೀಣ್ ಕುಮಾರ್, ವಿನಯ್ ತಾಂಡ್ಲೆ, ವಿನೋದ್, ಗಿರೀಶ್, ದೇವಿಕುಮಾರ್, ಕೇಶವ, ಲೋಕೇಶ್, ಪ್ರದೀಪ್, ರಘು, ಶಿವುಕುಮಾರ್, ಮಲ್ಲಿಕಾ ಇದ್ದರು.