ಪಾಲಿಕೆ ಹುಡುಕಾಟದ ವರದಿ_5
ಶಿವಮೊಗ್ಗ, ಫೆ.26:
ಶಿವಮೊಗ್ಗ ನಗರ ಫ್ಲಕ್ಸಿಗಳ ಸಾಮ್ರಾಜ್ಯವಾಗಿದೆ. ನಗರ ಪಾಲಿಕೆಯ ಅನುಮತಿಯನ್ನೇ ಪಡೆಯದೇ ಹಾದಿ ಬೀದಿಯಲ್ಲಿ, ಸರ್ಕಲ್ ಗಳಲ್ಲಿ ನೂರಾರು ಫ್ಲಕ್ಸಿಗಳು ಈಗಲೂ ನಿತ್ಯ ನಿರಂತರ ಕಾಣುತ್ತಿವೆ. ದಂಡ ಹಾಕಬೇಕಾದ, ಕಿತ್ತು ಹಾಕಬೇಕಾದ, ತೆರಿಗೆ ಕಟ್ಟಿಸಿಕೊಳ್ಳಬೇಕಾದ ಮಹಾ ನಗರ ಪಾಲಿಕೆ ಮಾತ್ರ ಭಯಂಕರ ನಿದ್ದೆಯಲ್ಲಿ ಮಗ್ನವಾಗಿದೆ ಎಂಬುದೇ ದುರಂತ.

ನಗರದ ನೆಹರು ರಸ್ತೆ, ಬಾಲರಾಜ್ ಅರಸ್ ರಸ್ತೆ, ಬಿ ಎಚ್ ರಸ್ತೆ ಹಾಗೂ ನೂರು ಅಡಿ ರಸ್ತೆಯ ಬೀದಿಗಳಲ್ಲಿ ಇರುವ ಮರಗಳಿಗೆ, ಮದ್ಯದ ಲೈಟ್ ಕಂಬಗಳಿಗೆ ನಿರಂತರ ಪ್ಲೆಕ್ಸಿಗಳು ಬದಲಾವಣೆಯಾಗುತ್ತಿವೆ. ಅಲ್ಲಿ ಯಾವುದಾದರೂ ಪ್ಲೆಕ್ಸಿಗಳನ್ನು ಹಾಕುತ್ತಿದ್ದಾರೆ.
ಆದರೆ ಅವುಗಳಿಗೆ ಸಂಬಂಧಪಟ್ಟಂತೆ ನಗರಪಾಲಿಕೆಯಿಂದ ತೆರಿಗೆ ಪಡೆದ ಯಾವುದೇ ನಿದರ್ಶನಗಳು, ದಾಖಲೆಗಳು ಕಾಣುವುದಿಲ್ಲ. ಇಡೀ ಶಿವಮೊಗ್ಗ ನಗರಗಳಲ್ಲಿ ಸುತ್ತಾಡಿದಾಗ ಎಲ್ಲೋ ಒಂದೆರಡು ಪೆಕ್ಸಿಗಳಿಗೆ ನಗರ ಪಾಲಿಕೆಯ ಫ್ಲೆಕ್ಸಿ ಅನುಮತಿ ನಂಬರ್ ಕಾಣುತ್ತದೆ. ಯಾರದೋ ಹುಟ್ಟಿದಬ್ಬಕ್ಕೆ ಇನ್ನೊಬ್ಬ ಯಾರೋ ತನ್ನದೇ ದೊಡ್ಡ ಫೋಟೋ ತೋರಿಸಿ ಶುಭಾಶಯ ಹಾಕಿಸಿಕೊಳ್ಳುವ, ಅತ್ಯಂತ ಕಡಿಮೆ ದರದ ಪುಕ್ಕಟ್ಟೆ ಪ್ರಚಾರ ಪಡೆಯುವ ಕಾಯಕ ಹೆಚ್ಚುತ್ತಿದೆ.

ರಸ್ತೆ ಬದಿಗಳಲ್ಲಿ, ರಸ್ತೆ ಮಧ್ಯದಲ್ಲಿ ಹಾಗೂ ವಿಶೇಷವಾಗಿ ಸರ್ಕಲ್ ಗಳಲ್ಲಿ ಹಾಕುವ ಪ್ಲಕ್ಷಿಗಳು ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿ ಮಾಡುತ್ತಿವೆ. ಅಷ್ಟೇ ಲಕ್ಷ್ಮಿ ಮೊನ್ನೆಯಷ್ಟೇ ಲಕ್ಷ್ಮೀ ಚಿತ್ರಮಂದಿರದ ಬಳಿಯ ಸರ್ಕಲ್ ನಲ್ಲಿ ಹಾಕಿದ್ದ ರಸ್ತೆ ಮಧ್ಯದ ಉದ್ದನೆಯ ಫ್ಲಕ್ಸಿ ಒಂದು ಕೆಳಗೆ ಬಿದ್ದಿತ್ತು. ಅರ್ಧ ಕಂಬಕ್ಕೆ ಸಿಲುಕಿಕೊಂಡಿತ್ತು. ವಾಹನ ಸವಾರ ಅಷ್ಟು ಜಾಗ ಬಿಟ್ಟು ಹೋಗಬೇಕಿತ್ತು. ಸುಮಾರು 2 ಗಂಟೆಗಳ ನಂತರ ಅದನ್ನು ಯಾರೋ ಪುಣ್ಯಾತ್ಮರು ಬಂದು ಸರಿ ಮಾಡಿದರೇ ಹೊರತು ಕಿತ್ತು ಹಾಕಲಿಲ್ಲ.

ಇದರ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲದ ಪಾಲಿಕೆ ವ್ಯವಸ್ಥೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ. ಏಕೆಂದರೆ ಸರ್ಕಲ್ ಗಳಲ್ಲಿ ಸಿಗ್ನಲ್ ಇರುವುದರಿಂದ ಅದೇ ಸ್ಥಳದಲ್ಲಿ ಮಧ್ಯದ ಕಂಬಗಳಿಗೆ ಫ್ಲಕ್ಸಿ ಹಾಕಿದರೆ ಹೇಗೆ ತಾನೇ ಸಿಗ್ನಲ್ ಬಿದ್ದಾಕ್ಷಣ ಸಲೀಸಾಗಿ ಹೋಗಲು ಸಾಧ್ಯ? ಇತ್ತೀಚೆಗೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಲ್ ಗಳಲ್ಲಾದರು ಫ್ಲಕ್ಷಿಗಳನ್ನು ಹಾಕಿಸದೆ ಇರುವುದು ಒಳ್ಳೆಯದಲ್ಲವೇ?
ಈ ಫ್ಲಕ್ಸಿಗಳು ಎಷ್ಟು ವಿಚಿತ್ರವಾಗಿದೆ ಎಂದರೆ ಕಾಂಗ್ರೆಸ್ನ ಕಳೆದ ಮೂರು ನಾಲ್ಕು ತಿಂಗಳ ಎಲ್ಲಾ ಕಾರ್ಯಕ್ರಮಗಳ ಕುರಿತು ಕುರಿತು ಹಾಕಿದ್ದ ಬಹಳಷ್ಟು ಪ್ಲೆಕ್ಷಿಗಳಲ್ಲಿ ಕಾಂಗ್ರೆಸ್ ನ ಜಿಲ್ಲೆಯ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪರೇ ಮರೆಯಾಗಿದ್ದರು. ತಾವು ಮಿಂಚಬೇಕು, ನಮ್ಮನ್ನು ಜನ ನೋಡಬೇಕು ಎಂದು ಜಿದ್ದಿಗೆ ಬಿದ್ದವರಂತೆ ಫ್ಲಕ್ಸಿ ಹಾಕಿಕೊಳ್ಳುವ ಇಂತಹ ಕಾಯಕಕ್ಕೆ ಶಾಶ್ವತ ತಿಲಾಂಜಲಿ ಇಡಬೇಕು.
ಹಾಕುವುದಾದರೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ, ಪಾಲಿಕೆಯ ಅನುಮತಿ ಪಡೆದು ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಪಾಲಿಕೆಯ ಅತಿ ದೊಡ್ಡ ಜವಾಬ್ದಾರಿ ಅಲ್ಲವೇ?