
ಶಿವಮೊಗ್ಗ, ಫೆ,25:
ನಗರದ ಶಂಕರ ಮಠ ರಸ್ತೆಯಲ್ಲಿರುವ ‘ಮೈತ್ರಿ’ ಹೀರೋ ಶೋ ರೂಮಿನ ಮೊದಲನೇ ಮಹಡಿಯಲ್ಲಿ ಸ್ವಾಸ್ಥ ಪರಿವಾರ ಸೆಟಲೈಟ್ ಕ್ಲಿನಿಕ್ ಶುಭಾರಂಭಗೊಂಡಿತು.
ಶಾಹಿ ಕಂಪನಿಯಿ ಶಿವಮೊಗ್ಗ ನಗರದ ಕುಟುಂಬ ಕಲ್ಯಾಣ ಯೋಜನೆ (FPAI) ಬ್ರಾಂಚಿನ ಆಡಳಿತ ಮೇಲ್ವಿಚಾರಣೆಯಲ್ಲಿ ಈ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಈ ಕ್ಲಿನಿಕ್ ನಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ಔಷಧೋಪಚಾರ, ಸುಸಜ್ಜಿತ ಲ್ಯಾಬೋರೇಟರಿ ಸೇವೆ ಹೀಗೆ ಒಂದೇ ಸೂರಿನಡಿಯಲ್ಲಿ ಎಲ್ಲಾ ವ್ಯವಸ್ಥೆಗಳು ಅತ್ಯಂತ ಕನಿಷ್ಠ ದರದಲ್ಲಿ ದೊರೆಯಲಿದೆ.

ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ವೈಧ್ಯಾಧಿಕಾರಿಗಳಾದ ಡಾ. ನಟರಾಜ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮುಂಬೈನ ಹೆಡ್ ಕ್ವಾರ್ಟರ್ ನಿಂದ ಆಗಮಿಸಿದ್ದ ಡೈರೆಕ್ಟರ್ ಜನರಲ್ ಡಾ/ ಕಲ್ಪನಾ ಅಪ್ಟೆ, ಉಪ ನಿರ್ದೇಶಕರಾದ ಅಮಿತಾ ಧನು ಹಾಗೂ ಶಾಹಿ ಕಂಪನಿಯ ಮುಖ್ಯ ಅಧಿಕಾರಿಗಳಾದ ಅಳಗಪ್ಪನ್, ಸುಕ್ವಂತ್ ಸಿಂಗ್, ಲಕ್ಷ್ಮಣ್ ಧರ್ಮಟ್ಟಿ, ತಾಲೂಕು ವೈದ್ಯಾಧಿಕಾರಿಗಳಾದ ಚಂದ್ರಶೇಖರ್, ಬ್ರಾಂಚಿನ ಅಧ್ಯಕ್ಷರಾದ ಡಾ. ಸಾತ್ವಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Fpai ನ ಪೂರ್ವಾಧ್ಯಕ್ಷರುಗಳಾದ ಉಮೇಶ್ ಆರಾಧ್ಯ, ಡಾ. ಬಿರಾದಾರ್, ಚಂದ್ರಶೇಖರ್, ಪುಷ್ಪ ಶೆಟ್ಟಿ, ವಿಜಯಾ ಶ್ರೀಧರ್, ಉಪಾಧ್ಯಕ್ಷರಾದ. ಭಾರತಿ ಶೇಖರ್, ಖಜಾಂಚಿ ಸುರೇಖಾ ಮುರಳೀಧರ್, ಸದಸ್ಯರಾದ ಶಶಿಕಲಾ, ಮಂಜುನಾಥ ಅಪ್ಪಾಜಿ, ಡಾ/ ಪಲ್ಲವಿ, ಮ್ಯಾನೇಜರ್ ಉಮೇಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.