ಸಾಗರ(ಶಿವಮೊಗ್ಗ),ಫೆ.15 :ಕರ್ನಾಟಕದ ಅಡಿಕೆ ಬೆಳೆ ಗಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯನ್ನು ಕೊಡ ಲಿದೆ ಎಂದು ಕೇಂದ್ರದ ಬಜೆಟ್ ಪೂರ್ವದಲ್ಲಿ ನಿರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಆ ನಿರೀಕ್ಷೆಗಳು ಸದ್ಯಕ್ಕೆ ಈಡೇರುವ ಯಾವ ಲಕ್ಷಣಗಳು ಸಹ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಹಲವು ಸಂಕ ಷ್ಟಗಳನ್ನು ಅನುಭವಿಸುತ್ತಿದ್ದಾರೆ.

ಅಡಿಕೆ ಬೆಳೆಯ ಕೃಷಿ ಪ್ರದೇಶವನ್ನು ಅಭಿವೃದ್ಧಿ ಮಾಡುವ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಲ್ಲೇ ಇವೆ. ಅಡಿಕೆ ಬೆಳೆಗಾರರ ಹಲವು ವರ್ಷಗಳ ಸಮಸ್ಯೆಗೆ ಈ ಬಾರಿ ಕೇಂದ್ರ ಸರ್ಕಾರ ದಿಂದ ಪರಿಹಾರ ಸಿಗಲಿದೆ ಎಂದು ನಿರೀಕ್ಷೆ ಮಾಡಲಾ ಗಿತ್ತು. ಆದರೆ, ಅಡಿಕೆ ಬೆಳೆಗಾರರಿಗೆ ಈ ಬಾರಿಯೂ ಕೇಂದ್ರ ಸರ್ಕಾರ ಯಾವುದೇ ಗುಡ್ನ್ಯೂಸ್ ಕೊಟ್ಟಿಲ್ಲ. ಅಲ್ಲದೆ ಈ ರೈತರು ಬಹು ದಿನಗಳ ಕನಸಿಗೂ ತಣ್ಣೀರು ಎರಚಲಾಗಿದೆ.
ಅದೇನು ಎನ್ನುವ ವಿವರ ಇಲ್ಲಿದೆ. ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಡಿಕೆ ಬೆಳೆಗಾರರು ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಬೆಳೆಯಲ್ಲಿ ರೋಗ ಬರುವುದು ಹಾಗೂ ಅಡಿಕೆಯ ಬಗ್ಗೆ ಅಪಪ್ರಚಾರಗಳು ನಡೆಯುವುದು ಸೇರಿದಂತೆ ಹಲವು ಸಮಸ್ಯೆಗಳು ಮುಂದುವರಿದಿವೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದೇ ರಾಜ್ಯದ ಅಡಿಕೆ ಬೆಳೆಗಾರರು ನಿರೀಕ್ಷೆ ಮಾಡಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿದ್ದು. ಅಡಿಕೆ ಬೆಳೆಗಾರರ ಬಹು ದಿನಗಳ ಕನಸಿಗೆ ಕೇಂದ್ರ ಸರ್ಕಾರವು ಯಾವುದೇ ಉತ್ಸಾಹ ತೋರಿಸಿಲ್ಲ ಎಂದು ಹೇಳಲಾಗಿದೆ.

ಅಡಿಕೆ ಬೆಳೆಗಳಿಗೆ ವ್ಯಾಪಕ ರೋಗಗಳು ಬಾದಿಸಲ್ಪಡುತ್ತಿವೆ.ಕಳೆದ ೨೫ ವರ್ಷಗಳಿಂದ ಹಳದಿ ಎಲೆ ರೋಗ ಹಾಗೂ ಬೇರುಹುಳುಗಳ ಸಂಕಷ್ಟದಿಂದ ಅಡಿಕೆ ಮರಗಳ ಸಂರಕ್ಷಣೆಗೆ ಮತ್ತು ಎಲೆಚುಕ್ಕೆ ರೋಗ ಮತ್ತು ಅಡಿಕೆಗೆ ಕೊಳೆ ರೋಗಗಳ ವಿರುದ್ಧ ಸೂಕ್ತ ವೈಜ್ಞಾನಿಕ ಔಷಧಿಗಳ ಕಂಡು ಹಿಡಿಯಲು ಇಚರ(ಇಂಡಿಯನ್ ಕೌನ್ಸಿಲ್ ಅಗ್ರಿಕಲ್ಚರಲ್ ರೀಸರ್ಚ್) ) Indian Council Agricultural Researchಇವರಿಂದ ಸಂಶೋಧನೆ ನಡೆಸಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಲ್ಲಿ ಮನವಿ ಮಾಡಿ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಗಮನಸೆಳೆದಿದ್ದರು.
ಕರ್ನಾಟಕದಲ್ಲಿ ೨೦೨೪ ಹಾಗೂ ೨೫ನೇ ಸಾಲಿನಲ್ಲಿ ಅಡಿಕೆ ಎಲೆ ಚುಕ್ಕೆ ರೋಗ ನಿರ್ವಹಣೆ ಮಾಡುವುದಕ್ಕೆಂದು ಕೇಂದ್ರ ಕೃಷಿ ಸಚಿವಾಲಯ ಬರೋಬ್ಬರಿ ೩೭ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ ಹವಾಮಾನ ಬೆಳೆ ಆಧಾರಿತ ವಿಮಾ ಯೋಜನೆಯಲ್ಲಿಯೇ ಅಡಿಕೆ ಬೆಳೆಯನ್ನು ಸಹ ಸೇರಿಸಲಾಗಿದೆ.
ವಿದೇಶಿ ಅಡಿಕೆಗೆ ಆಮದು ಶುಲ್ಕ ಹೆಚ್ಚಿಸಬೇಕು
ವಿದೇಶಗಳಿಂದ ಭಾರತಕ್ಕೆ ಆಮದಾಗುವ ಅಡಿಕೆಗೆ ಕಾನೂನು ರೀತಿಯ ಕಡಿವಾಣ ಹಾಕಲು ಮತ್ತು ದೇಶಿ ಅಡಿಕೆಯ ಬೆಲೆ ಕುಸಿಯದಂತೆ ದೇಶಿ ಬೆಳೆಗಾರರ ಹಿತರಕ್ಷಣೆಗೆ ಈಗಿರುವ ಅಡಿಕೆ ಆಮದು ಶುಲ್ಕವನ್ನು ಕನಿಷ್ಠ ೧೦೦ ರೂಗಳನ್ನು ಹೆಚ್ಚಿಸುವ ಮೂಲಕ ೩೫೨ರ ಬದಲಿಗೆ ೪೫೨ಕ್ಕೆ ಮಿತಿಗೊಳಿಸಬೇಕು

ಮಲೆನಾಡು ಅಡಿಕೆಯ ಗುಣಮಟ್ಟ ನಿಯಮ ಪರಿವರ್ತಿಸಬೇಕು
ಭಾರತೀಯ ಗುಣಮಟ್ಟ ಪರಿಶೀಲನಾ ವ್ಯವಸ್ಥೆ(ಎಫ್ ಎಸ್ಎಸ್ಐ)ಪ್ರಕಾರ ಅಡಿಕೆಯ ತೇವಾಂಶ ೭% ಇರಬೇಕು ಎಂದು ಇಲಾಖೆಯು ನಿಗಧಿ ಮಾಡಿದೆ.ಆದರೇ ಮಲೆನಾಡಿನ ಅಡಿಕೆ ಕನಿಷ್ಠ ೧೧% ತೇವಾಂಶ ಇರುವುದರಿಂದ ಕೇಂದ್ರ ಸರ್ಕಾರದ ಇಲಾಖೆಯು ಅಡಿಕೆ ತೇವಾಂಶವನ್ನು ೧೧% ಗೆ ನಿಗದಿ ಮಾಡಬೇಕು ಎಂದು ಬೆಳೆಗಾರರ ಅಹವಾಲು.ಈ ಅಹವಾಲನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಲ್ಲಿ ಸಾಗರದಲ್ಲಿನ ಸಮಾವೇಶದಲ್ಲಿ ಕೇಂದ್ರದ ಬಜೆಟ್ಗೂ ಪೂರ್ವಭಾವಿಯಾಗಿ ಗಮನಸೆಳೆದಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.
ಜಿಎಸ್ಟಿ ಹೊರೆ ತಗ್ಗಿಸಲಿ
ಕೇಂದ್ರ ಸರ್ಕಾರ ರೈತರು ಹಾಗೂ ತೋಟಗಾರಿಕೆ ಬೆಳೆಗಳ ಬೆಳೆಗಾರರು ಬಳಸುವ ಎಲ್ಲಾ ಕೃಷಿ ಸಾಮಗ್ರಿಗಳಿಗೆ ಔಷಧಿ,ಗೊಬ್ಬರ ಸೇರಿದಂತೆ ಕೃಷಿ ಉಪಯೋಗಿತ ಯಂತ್ರಗಳಿಗೆ,ನೀರಾವರಿ ಉಪಕರಣಗಳು ಪೈಪುಗಳು ಸೇರಿದಂತೆ ರೈತರ ಬಳಕೆಯ ಎಲ್ಲಾ ಸಾಮಗ್ರಿಗಳಿಗೂ ಕೃಷಿ ಭೂಮಿ ಪಹಣಿ ದಾಖಲೆ ಆಧಾರದಲ್ಲಿ ಕೇವಲ ೧% ಜಿಎಸ್ಟಿ ವಿದಿಸುವ ಮೂಲಕ ರೈತ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬಿತ್ಯಾದಿ ಅಡಿಕೆ ರೈತರು ಪ್ರಮುಖ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಅಡಿಕೆ ಕೃಷಿ ಪ್ರದೇಶವನ್ನು ಜಾಸ್ತಿ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದನೆ ಸಿಗಬೇಕಾದರೆ, ಪ್ರತ್ಯೇಕ ಅಡಿಕೆ ಮಂಡಳಿ ನಿರ್ಮಾಣವಾಗಬೇಕು ಎನ್ನುವ ಬೇಡಿಕೆಯನ್ನು ಹಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎನ್ನಲಾಗಿದೆ. ಯಾಕೆಂದರೆ ಈ ವಿಚಾರದ ಬಗ್ಗೆ ಸಂಸತ್ತಿನಲ್ಲಿ

ಕೇಂದ್ರ ಸರ್ಕಾರವು ಉತ್ತರಿಸಿಲ್ಲ.\
ಅಡಿಕೆ ಮಂಡಳಿ ಸ್ಥಾಪನೆಗೆ ಉತ್ತರವಿಲ್ಲ:
ಇನ್ನು ಕೇಂದ್ರ ಸರ್ಕಾರವು ಅಡಿಕೆ ಮಂಡಳಿ ಸ್ಥಾಪನೆಯ ಬಗ್ಗೆ ಉತ್ತರವನ್ನೇ ಕೊಡದೆ ಇರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವು ಉತ್ತರಿಸಿದೆ.
ಅಡಿಕೆ ಬೆಳೆ ಅಭಿವೃದ್ಧಿಗೆ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕೇಂದ್ರ ಸರ್ಕಾರವು ಸುಧಾರಣೆ ಕ್ರಮಗಳನ್ನು ಕೈಗೊಂಡ ಕ್ರಮಗಳ ವಿವರ ನೀಡಿದ್ದಾರೆ. ಆದರೆ, ಮಂಡಳಿ ಸ್ಥಾಪನೆ ಬೇಡಿಕೆ ಕುರಿತು ಉತ್ತರಿಸಿಲ್ಲ. ಹಾಗಂತ ಅಡಿಕೆ ಬೆಳೆಗಾರರ ಪ್ರಮುಖ ಸಹಕಾರ ಸಂಸ್ಥೆಗಳಿಗೆ ಅಡಿಕೆ ಮಂಡಳಿ ಕುರಿತು ವಿಶ್ವಾಸವಿಲ್ಲ.ಕಾರಣ ಅಡಿಕೆ ಮಂಡಳಿಯಲ್ಲಿ ಐಎಎಸ್ ಅಧಿಕಾರಿಗಳು ಹಿಡಿತ ಸಾಧಿಸಿದರೇ ಅದು ಮತ್ತೊಂದು ಬಿಳಿ ಆನೆಯಾಗುತ್ತದೆ.ಬೆಳೆಗಾರರಿಗೆ ಸ್ಪಂದಿಸುವ ಬದಲಿಗೆ ಅಧಿಕಾರಿಗಳ ಅಂದ ದರ್ಭಾರಿಗೆ ವೇದಿಕೆಯಾದೀತು ಎಂಬ ಅಳಕು ಬೆಳೆಗಾರರ ಪ್ರಮುಖ ಸಂಸ್ಥೆಗಳ ಮುಖ್ಯಸರುಗಳಿಂದ ಕೇಳಿಬರುತ್ತಿರುವ ಮಾತುಗಳು.
ಕರ್ನಾಟಕ ಸಂಸದರಿಂದ ಪ್ರಶ್ನೆ: ಇನ್ನು ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.
ಈ ಸಂಬಂಧ ಸಂಸತ್ತಿನಲ್ಲಿ ಮಾತನಾಡಿರುವ ಸಂಸದ ಕುಮಾರ ನಾಯಕ ಅವರು, ಕರ್ನಾಟಕದ ೧೦ ಜಿಲ್ಲೆಗಳಲ್ಲಿ ೭ ಲಕ್ಷ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಅಡಿಕೆ ಕೃಷಿಯನ್ನು ಮಾಡಲಾಗುತ್ತಿದೆ. ಅಲ್ಲದೆ ಪ್ರತಿ ವರ್ಷ ೧೧ ಲಕ್ಷ ಟನ್ಗೂ ಹೆಚ್ಚು ಅಡಿಕೆ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲೆ ಚುಕ್ಕಿ ರೋಗ ಹಾಗೂ ಹಳದಿ ರೋಗ ಎನ್ನುವುದು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಅಡಿಕೆ ಬೆಳೆಗಾರ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.
ಹೀಗಾಗಿ, ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ರೋಗ ನಿಯಂತ್ರಣ, ನಷ್ಟ ಪರಿಹಾರ ಕೊಡುವ ಅವಶ್ಯಕತೆ ಇದೆ ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಿಂದ ಪ್ರಸ್ತಾವನೆ: ರಾಜ್ಯದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರಕ್ಕ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಈಗಾಗಲೇ ರಾಜ್ಯ ಸರ್ಕಾರವು ಪತ್ರ ಬರೆದಿತ್ತು. ಆದರೆ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.
ಈಗಲೂ ಕಾಲಮಿಂಚಿಲ್ಲ.ರಾಜ್ಯದ ಸಂಸದರುಗಳು ಬಿ.ವೈ.ರಾಘವೇಂದ್ರ ಸೇರಿದಂತೆ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇತರೆ ಸಂಸದರುಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಮೂಲಕವೇ ರಾಜ್ಯದ ಅಡಿಕೆ ಬೆಳೆಗಾರರುಗಳ ಬೇಡಿಕೆ ಈಡೇರಿಸಲು ಇರುವ ಅವಕಾಶವನ್ನು ಅಡಿಕೆ ಬೆಳೆಗಾರರ ಸಂಘ ಮತ್ತು ಅಡಿಕೆ ಬೆಳೆಗಾರರ ಸಹಕಾರ ಸಂಸ್ಥೆಗಳು ಪ್ರಯತ್ನಿಸಬೇಕು ಎಂನ್ನುವುದು ಅಡಿಕೆ ಬೆಳೆಗಾರರ ಆಶಯವಾಗಿದೆ