ಶಿವಮೊಗ್ಗ, ಫೆ.23:
ಇನ್ನೂ ನಾಲ್ಕು ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಮುಂದುವರೆದರೆ ದೇಶದ ಕನಿಷ್ಠ 1೦ ಕೋಟಿ ಜನ ಬಡತನ, ಹಸಿವು ತಾಳಲಾಗದೇ ಬದುಕಲು ಆಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆತಂಕ ವ್ಯಕ್ತಪಡಿಸಿದರು.
ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಈಗ ಆಗುತ್ತಿರುವ ಪೆಟ್ರೋಲ್, ಡಿಸೇಲ್, ಗ್ಯಾಸ್ ದರದ ಹೆಚ್ಚಳ ಹಾಗೂ ಜನರ ಜೇಬಿನಲ್ಲಿ ಹಣವಿಲ್ಲದಿರುವ ಒತ್ತಡ ಇಂತಹ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಅವರು ಆರೋಪಿಸಿದರು.
ನಾವು ಬಡವರ ಬಗ್ಗೆ ಮಾತನಾಡಿದರೆ ಅವರು ಶ್ರೀರಾಮನ ಬಗ್ಗೆ ಹೇಳುತ್ತಾರೆ. ಒಂದೊಂದು ಅಸೆಂಬ್ಲಿ ಗೆಲ್ಲಲು 5ರಿಂದ 10 ಕೋಟಿ ಖರ್ಚುಮಾಡುವ ಬಿಜೆಪಿ ಅವರಿಗೆ ಎಲ್ಲಿಂದ ಹಣ ಬಂತು. ಹಿಂದೆ ಇದೇ ನಾನು ಇದೇ ಬಿಜೆಪಿಯ ಧರ್ಮ, ರಾಷ್ಟ್ರಪ್ರೇಮ ಕಂಡು ಇವರಿಗೆ ಅಧಿಕಾರ ಸಿಗಬೇಕು ಎಂದಿದ್ದೆ ಆದರೆ ಇವರಿಗೆ ಅಧಿಕಾರ ಸಿಕ್ಕಾಗ ಆಗಿರುವ ಅವಾಂತರವನ್ನು ಗಮನಿಸಿದರೆ ನಿಜಕ್ಕೂ ಇನ್ನೂ ಕಷ್ಟದ ದಿನ ಇವೇ ಎನಿಸುತ್ತಿದೆ. ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ಯಾಸ್, ಪೆಟ್ರೋಲ್ ದರ ಒಂದೆರಡು ರೂಪಾಯಿ ಹೆಚ್ಚಾದರೆ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದ ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಇತರ ನಾಯಕಿಯರು ಈಗ ಎಲ್ಲಿಗೆ ಹೋದರು ಎಂದು ಪ್ರಶ್ನಿಸಿದರು.