![Banglur Crime](https://tungataranga.com/wp-content/uploads/2021/06/Crime.jpg)
ಸೊರಬ : ಸೊರಬ ತಾಲೂಕು ಹಾಯಾ ಗ್ರಾಮದ ಶನೈಶ್ಚರ ದೇವಸ್ಥಾನದ ಸಮೀಪ ಅಡ್ಡಬಂದ ಜಿಂಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
![](http://tungataranga.com/wp-content/uploads/2025/02/IMG-20250206-WA00161-1-1024x521.jpg)
ಸತೀಶ್ (೪೬) ಎಂಬುವವರು ಹಾಯಾ ಗ್ರಾಮದಿಂದ ತಮ್ಮೂರು ಕುಪ್ಪಗಡ್ಡೆಗೆ ಬೈಕ್ನಲ್ಲಿ ಹಿಂತಿರುಗುತ್ತಿದ್ದರು. ರಸ್ತೆಯಲ್ಲಿ ದಿಢೀರ್ ಎದುರಾದ ಜಿಂಕೆಗೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸತೀಶ್ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಕೂಡಲೆ ಸತೀಶ್ರನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸತೀಶ್ ಮೃತಪಟ್ಟಿದ್ದಾರೆ.
ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.