![train-1571305930](https://tungataranga.com/wp-content/uploads/2021/11/train-1571305930.jpg)
ಮೈಸೂರು/ಶಿವಮೊಗ್ಗ: ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನ ಪುರಾಣ ಪ್ರಸಿದ್ಧ ಶ್ರೀ ಲಕ್ಷಿö್ಮÃನರಸಿಂಹಸ್ವಾಮಿ ರಥೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿನಲ್ಲಿ ಆರು ದಿನಗಳ ಕಾಲ ನಿಲುಗಡೆ ನೀಡಲಿದೆ.
![](https://tungataranga.com/wp-content/uploads/2025/02/IMG-20250206-WA00161-1-1024x521.jpg)
ಈ ಕುರಿತಂತೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಮೈಸೂರು-ತಾಳಗುಪ್ಪ ನಿಲ್ದಾಣಗಳ ನಡುವೆ ಸಂಚರಿಸುವ ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲುಗಳಿಗೆ ಫೆ 11 ರಿಂದ 16, 2025 ರವರೆಗೆ ಅಕ್ಕಿಹೆಬ್ಬಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಒದಗಿಸಲು ಅವಕಾಶ ಕಲ್ಪಿಸಿಲಾಗಿದೆ.
![](https://tungataranga.com/wp-content/uploads/2023/04/Screenshot_2023_0226_070755-1.jpg)
ಅಕ್ಕಿಹೆಬ್ಬಾಳುವಿನಲ್ಲಿ ಈ ಕೆಳಗಿನ ವೇಳಾಪಟ್ಟಿಯಂತೆ ರೈಲುಗಳು ಒಂದು ನಿಮಿಷ ನಿಲುಗಡೆ ಹೊಂದಿರುತ್ತದೆ:
- ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿಗೆ ಬೆಳಗ್ಗೆ 06:55 ಕ್ಕೆ ಆಗಮಿಸಿ, 06:56 ಕ್ಕೆ ನಿರ್ಗಮಿಸಲಿದೆ.
- ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿಗೆ ರಾತ್ರಿ 09:09 ಕ್ಕೆ ಆಗಮಿಸಿ,09:10 ಕ್ಕೆ ಹೊರಡಲಿದೆ.
ಪ್ರಯಾಣಿಕರು ಈ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಲು ಇಲಾಖೆ ಕೋರಿದೆ.