ತೀರ್ಥಹಳ್ಳಿ: ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಇರುವಂತಹ ಪಟಾಕಿ ಮಳಿಗೆಯ ತಮ್ಮ ಅಂಗಡಿಯಲ್ಲಿ ಪಟಾಕಿ ತೆಗೆದುಕೊಂಡಿಲ್ಲವೆಂದು ಹಲ್ಲೆ ಮಾಡಲಾಗಿದೆ ಎಂದು ಪಟ್ಟಣದ ಜೆಸಿ ಆಸ್ಪತ್ರೆಗೆ ವ್ಯಕ್ತಿಯೊಬ್ಬರು ದಾಖಲಾಗಿದ್ದಾರೆ.
ಪಟಾಕಿ ಅಂಗಡಿಗೆ ತೆರಳಿದ್ದಾಗ ಅವರ ಅಂಗಡಿಯಲ್ಲಿ ಪಟಾಕಿ ತೆಗೆದುಕೊಳ್ಳಲಿಲ್ಲ ಎಂಬ ಕಾರಣದಿಂದ ನನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಗಲಾಟೆಯಲ್ಲಿ ಚಿನ್ನದ ಸರ ಕಳೆದು ಹೋಗಿರುತ್ತದೆ.

ಪರ್ಸ್ ಕೂಡ ಕಳೆದು ಹೋಗಿರುತ್ತದೆ. ಅವರ ಅಂಗಡಿಯಲಿದ್ದ ಮೂರರಿಂದ ನಾಲ್ಕು ಮಂದಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ನನಗೆ ಅವರಿಂದ ಪ್ರಾಣ ಭಯ ಇದ್ದು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಹರೀಶ್ ಎಂಬುವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.