ಶಿವಮೊಗ್ಗ : ಬಸ್ ಚಾಲಕನಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿದಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಾಕು ಇರಿತಕ್ಕೆ ಒಳಗಾದವನನ್ನ ಸಿಟಿ ಬಸ್ ಚಾಲಕ ರವಿ ಕುಮಾರ್ (34) ಎಂದು ಗುರುತಿಸಲಾಗಿದ್ದು, ಚಾಕುವಿನಿಂದ ಹಿರಿದ ಆರೋಪಿಯನ್ನು ಅಡುಗೆ ಕಂಟ್ರಾಕ್ಟರ್ ಅರುಣ್ ಎಂಬುದಾಗಿ ಗುರುತಿಸಲಾಗಿದೆ.
ಘಟನೆ ಶಿವಮೊಗ್ಗ ನಗರದ ಶರಾವತಿ ನಗರದ 3 ನೇ ತಿರುವಿನಲ್ಲಿ ಘಟನೆ ನಡೆದಿದ್ದು. ಹಳೆಯ ದ್ವೇಶದ ಹಿನ್ನಲೆಯಲ್ಲಿ ಚಾಕು ಇರಿತ ಉಂಟಾಗಿದೆ ಎನ್ನಲಾಗಿದೆ. ರವಿಕುಮಾರ್ ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ..