ಶಿವಮೊಗ್ಗ: ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಸಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಜೀರೊನ್’ ಟೆಕ್ನಿಕಲ್ ಫೆಸ್ಟ್ ನಲ್ಲಿ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಟೆಕ್ನಿಕಲ್ ಟಾಕ್ ಸ್ಪರ್ಧೆಯಲ್ಲಿ ವೈಣಿಕ ರಾವ್ (ಪ್ರಥಮ), ಕೋಡಿಂಗ್ ಸ್ಪರ್ಧೆಯಲ್ಲಿ ಸುಜಿತ್ ಕುಮಾರ್ (ಪ್ರಥಮ),ಫೋಟೋಗ್ರಫಿ ಸ್ಪರ್ಧೆಯಲ್ಲಿ ಹರ್ಷಾ.ಜೆ (ಪ್ರಥಮ) ಬಹುಮಾನ ಪಡೆದಿದ್ದು, ಗೇಮಿಂಗ್ ಸ್ಪರ್ಧೆಯಲ್ಲಿ ಅಕಿಲೇಶ್, ಸಂಜಯ್ ಸೈಮನ್, ರಾಹುಲ್.ಎನ್.ಕೆ, ಜಶ್ವಂತ್.ಡಿ.ಬಿ ತೃತೀಯ ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ವಿಭಾಗದ ಮುಖ್ಯಸ್ಥರಾದ ಡಾ.ಹೇಮಂತ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.