ಶಿವಮೊಗ್ಗ, ಫೆ.01
ಮಕ್ಕಳ ಮತ್ತು ಅವರ ಹಕ್ಕುಗಳ ರಕ್ಷಣೆ ಮಾಡಬೇಕಾದರೆ ಮುಖ್ಯವಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ 2016 ಮತ್ತು ಮಕ್ಕಳ ರಕ್ಷಣೆ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದೊಂದಿಗೆ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ – ಆರ್ ಟಿ ಇ ಕಾಯ್ದೆ 2009 ಅನುಷ್ಟಾನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಯವರೊAದಿಗೆ ಬಾಲ ನ್ಯಾಯ ಮಂಡಳಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಣ ಸಂಸ್ಥೆಗಳಲ್ಲಿ ಕಳೆಯುತ್ತಾರೆ. ಆದ್ದರಿಂದ ಶಿಕ್ಷಣ ಸಂಸ್ಥೆ, ಇಲಾಖೆಯ ಜವಾಬ್ದಾರಿ ಹೆಚ್ಚಿರುತ್ತದೆ. ಆರ್ಟಿಇ ಕಾಯ್ದೆ 2009 ರಿಂದ ಜಾರಿಗೆ ಬಂದಿದೆ. ಇಲ್ಲಿಯವರೆಗೆ ಎಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗಿದೆ ಎಂಬುದನ್ನು ನಾವು
ಶಿವಮೊಗ್ಗ ಮುಂದುವರಿದ ಜಿಲ್ಲೆಯಾಗಿದೆ. ಆದರೆ ರಾಜ್ಯದಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣ ವರಿದಯಾಗುತ್ತಿರುವುದು ಆತಂಕಕಾರಿಯಾಗಿದೆ. ಹಾಗೂ ಪೋಕ್ಸೋ ಮತ್ತು ಬಾಲ್ಯ ವಿವಾಹದ ಶೇ.90 ಮಕ್ಕಳು ಸರ್ಕಾರಿ ಶಾಲೆಗಳ ಮಕ್ಕಳಾಗಿರುವುದು ಕೂಡ ಕಳಕಳಕಾರಿ.
ರಾಜ್ಯದಲ್ಲಿ 18 ಲಕ್ಷ ವಿದ್ಯಾರ್ಥಿಗಳ ಅಪಾರ ಅಪ್ಡೇಟ್ ಆಗಿಲ್ಲ. 8 ಲಕ್ಷ ವಿದ್ಯಾರ್ಥಿಗಳ ವರದಿ ಮಿಸ್ ಮ್ಯಾಚ್ ಆಗಿದೆ. ಜಿಲ್ಲೆಯಲ್ಲಿ 2.5 ಲಕ್ಷ ಮಕ್ಕಳ ಪೈಕಿ 50 ಸಾವಿರ ಮಕ್ಕ ಅಪ್ಡೇಟ್ ಆಗಿಲ್ಲ. ಶಿಕ್ಷಣ ಇಲಾಖೆಯನ್ನು ಇದಕ್ಕೆ ಹೊಣೆ ಮಾಡಬೇಕಾಗುತ್ತದೆ. ಇಲಾಖೆ ವಿದ್ಯಾರ್ಥಿಗಳ ದಾಖಲಾತಿಗಳನ್ನು ಸರಿಪಡಿಸಿ ಪಡೆಯಬೇಕು. ಸ್ಯಾಟ್ಸ್ ಅಪ್ಡೇಟ್ ಮಾಡಬೇಕು. ಜಿಲ್ಲೆಯಲ್ಲಿ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಕೆಲ ಸಾಮಾಜಿಕ ಪಿಡುಗಗಳಿಗೆ ಕಾರಣ ಶಾಲೆಯಿಂದ ಹೊರಗುಳಿದ ಮಕ್ಕಳು. ಆದ್ದರಿಂದ ಡ್ರಾಪ್ಔಟ್ನ್ನು ತಗ್ಗಿಸಬೇಕು. ಗೈರು ಹಾಜರಾದ ಮಕ್ಕಳನ್ನು ಶಾಲೆಗೆ ಕರೆ ತರಬೇಕು. ಗುಣಮಟ್ಟದ ಆಹಾರವನ್ನೂ ನೀಡಬೇಕು.
============================
ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನಿಯಮಗಳು ಸಮರ್ಪಕವಾಗಿ ಅನುಷ್ಟಾನವಾಗುತ್ತಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಟಾನದಲ್ಲಿ ಶಿಕ್ಷಣ ಇಲಾಖೆ ನೋಡಲ್ ಇಲಾಖೆಯಾಗಿದೆ. ಆದರೆ ಇಲಾಖೆಯಿಂದ ಇದುವರೆಗೆ ಒಂದೂ ಎಫ್ಐಆರ್ ಆಗಿಲ್ಲ. ಯಾವುದೇ ಮಗು ಶಾಲೆಗೆ ಬರುತ್ತಿಲ್ಲ ಅಥವಾ ಏನಾದರೂ ಬದಲಾವಣೆ ಆಗಿದೆ ಎಂದರೆ ಮೊದಲು ಶಿಕ್ಷಕರಿಗೆ ಗೊತ್ತಾಗುತ್ತದೆ. ಮಕ್ಕಳ ವಿಷಯದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆಗದಂತೆ ಶಿಕ್ಷಣ ಇಲಾಖೆ, ಸಂಸ್ಥೆಗಳು ಕ್ರಮ ವಹಿಸಬೇಕು. ಇದು ನಿಮ್ಮ ಬಹು ದೊಡ್ಡ ಜವಾಬ್ದಾರಿ ಕೂಡ ಆಗಿದೆ.
ಅಪರ್ಣಾ ಎಂ ಕೊಳ್ಳ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು
=============================
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಶಿಕ್ಷಣ ಇಲಾಖೆ ಸಕ್ರಿಯವಾಗಿ ಕೆಲಸ ಮಾಡಬೇಕು. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಮುಕ್ತ ಚರ್ಚೆ ಆಗಬೇಕು. ಪೋಕ್ಸೋ ಪ್ರಕರಣ ಬಹಳ ಕಠಿಣ ಮತ್ತು ಕಟ್ಟುನಿಟ್ಟಾಗಿದೆ. ವಿದ್ಯಾರ್ಥಿಗಳ ಗೈರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೋಕ್ಸೋ ಪ್ರಕರಣವನ್ನು ವರದಿ ಮಾಡಲು ವಿಫಲರಾದವರು ಸಹ ಆರೋಪಿ ಆಗುತ್ತಾರೆ. ಆದ್ದರಿಂದ ವರದಿ ಮಾಡುವುದು ಬಹಳ ಮುಖ್ಯ ಎಂದ ಅವರು ಶಾಲಾ ಮಕ್ಕಳ ಪ್ರಾರ್ಥನೆ ವೇಳೆ ಮಕ್ಕಳಿಗೆ ಗುಡ್, ಬ್ಯಾಡ್ ಟಚ್, ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕೆಂದು ತಿಳಿಸಿದರು.
ಡಯಟ್ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್ ಜಿ.ವಿ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ ಮತ್ತು ಆರ್ಟಿಇ ಕಾಯ್ದೆ ಕುರಿತು ಮಾತನಾಡಿದರು.
ಸಭೆಯಲ್ಲಿ ಡಿಡಿಪಿಐ ಎಸ್.ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯಾದ ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಾಲಾ ಮುಖ್ಯೋಪಾಧ್ಯಾಯರು, ಬಿಆರ್ಸಿ, ಸಿಆರ್ಸಿ, ಅನುದಾನಿಕ ಶಾಲೆ ಶಿಕ್ಷಕರು ಹಾಜರಿದ್ದರು.