ವಾರದ ಅಂಕಣ- 31
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ನೀವು ಎಂಥವರೇ ಆಗಿರಿ,
ನಿಮ್ಮ ವ್ಯಕ್ತಿತ್ವ ಎಂತಹುದೇ ಆಗಿರಲಿ, ನಿಮ್ಮನ್ನು ನೀವು ಕಳೆದುಕೊಳ್ಳಬೇಡಿ ನೀವು ಎಣ್ಣೆ ಹೊಡೆಯದಿದ್ದರೂ ನಿಮ್ಮ ಮೊಬೈಲ್ ಎಣ್ಣೆ ಹೊಡೆದಿರುತ್ತೆ ಗೊತ್ತಾ?, ಅದೇ ನಾನಾ ಬಗೆಯ ಒಣ ಹಾಗೂ ಹಸಿ ಜಗಳ ಹಚ್ಚುವ ಮಾಟಗಾತಿ ಎಂದರೆ ತಪ್ಪಾಗಲಿಕ್ಕಿಲ್ಲಂತೆ ಕಣ್ರಿ..!, ಅದೇ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣದ ವಿಷಯ..,






ಮೊಬೈಲ್ ನಮಗೆ ಈಗ ಅತ್ಯಂತ ಅವಶ್ಯಕ ಸಂಪರ್ಕ ಸಾಧನವಾಗಿ ಬೆಳೆದಿದೆ ಬಗೆ ಬಗೆಯ ದುಬಾರಿ ಮೊಬೈಲ್ ಗಳು ಎಲ್ಲರ ಬಳಿ ಸಹಜ. ಕೆಲವರು ಒಂದೆರಡು, ಮೂರು ನಾಲ್ಕು ಮೊಬೈಲ್ ಗಳನ್ನು ಬಳಸುತ್ತಾರೆ. ನಾನಾ ಹೆಸರುಗಳಲ್ಲಿ ಸಿಮ್ ಗಳನ್ನು ಪಡೆದಿರುವ ಎಷ್ಟೊ ನಿದರ್ಶನಗಳು ಈಗಲೂ ನಮ್ಮ ನಡುವೆ ಚರ್ಚೆಗೆ ಹಾಗೂ ಹಲವಾರು ಅಪರಾಧಗಳಿಗೆ, ಹಲವರು ಮುಗ್ದತೆಯಲ್ಲಿ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂದರೆ ಅದು ಸುಳ್ಳೇನಲ್ಲ.
ಮೊಬೈಲ್ ಬಳಕೆ ನಮಗೆ ಎಷ್ಟು ಪ್ರಸ್ತುತ, ಅದರಿಂದ ಎಷ್ಟು ಉಪಯೋಗ ಎಂಬುದನ್ನು ನಾವು ಗ್ರಹಿಸಿದ್ದೇವೆ, ಅನುಭವಿಸಿದ್ದೇವೆ, ನೋಡಿದ್ದೇವೆ ಆದರೆ ಕೆಲವರ ಮೊಬೈಲ್ ಗಳು ತೀರಾ ವಿಚಿತ್ರವಾಗಿ ಆಡುತ್ತವೆ. ಹುಚ್ಚು ಮನಸ್ಸುಗಳು ಚಿತ್ರ ವಿಚಿತ್ರವಾಗಿ ಕುಣಿದಾಡಲು ಎಗರಾಡಲು ಈ ಮೊಬೈಲ್ ಗಳು ಮುಖ್ಯ ಕಾರಣವಾಗಿರುವುದನ್ನ ನಾವು ಕಂಡಿದ್ದೇವೆ. ಅಲ್ಲವೇ ಕೆಲವರ ಮೊಬೈಲ್ ಗಳು ರಾತ್ರಿಯ ಹೊತ್ತು ಸಾಕಷ್ಟು ಚಿಂತನೆ ನೆಪದಲ್ಲಿ, ಚರ್ಚೆಗೆ ಹಚ್ಚುವ, ಮನಸ್ಸುಗಳನ್ನು ಮುರಿಯುವ ಕೆಲಸ ಮಾಡುತ್ತವೆ. ಇಂತಹ ಖದೀಮ ಮನಸುಗಳಿಗೆ ಮೊಬೈಲ್ ಬಹುದೊಡ್ಡ ಸಾಧನವಾಗಿದ್ದು, ಕೆಲವರನ್ನು ಹೆದರಿಸಿ, ಬೆದರಿಸಿ ಹೇಳಲು ಇದೊಂದು ಸುಲಭ ಅಸ್ತ್ರವಾಗಿರುವುದು ನಮ್ಮ ನಡುವಿನ ಸಾಮಾನ್ಯ ಎನ್ನುವ ದುರಂತವಲ್ಲವೇ?

ಪಾಸಿಟಿವ್ ಮನಸ್ಸನ್ನು ಹೊಂದಿರುವ ವ್ಯಕ್ತಿಯ ಮನದಲ್ಲಿ ಮೊಬೈಲ್ ಆತನಲ್ಲಿರುವ ನಕಾರಾತ್ಮಕ ಕೃತ್ಯಗಳಿಗೆ ಕೈ ಹಾಕುವಂತೆ ಪ್ರೇರೇಪಿಸುವ ಸುಲಭ ಸಾಧನವಾಗಿದೆ. ನಿರೀಕ್ಷಿಸಿ, ಮುಂದೆ ನೋಡಿ ಎನ್ನುವ ಪದಬಳಕೆಗೆ ಆ ಮೂಲಕ ಬೆದರಿಕೆ ನೀಡುವ ಕೆಲ ವಿಕೃತ ಮನಸ್ಸುಗಳು ನಮ್ಮ ನಡುವಿನ ದುರಂತದ ಸಂಕೇತಗಳಾಗಿ ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಪ್ರೀತಿ- ವಿಶ್ವಾಸದ ಸಹಜ ಸಂಪರ್ಕ ಸಾಧನವಾಗಬೇಕಾದ ಮೊಬೈಲ್ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನಕಾರಾತ್ಮಕ ಶಕ್ತಿ ಬಿಂಬಿಸುವ ನಿಟ್ಟಿನಲ್ಲಿ ಮುಂದಾಗುತ್ತಿರುವುದು ನಿಜಕ್ಕೂ ಖಂಡಿತ ಬೇಸರದ ಸಂಗತಿ.

ಒಟ್ಟಾರೆ ಮೊಬೈಲ್ ಒಂದು ಪ್ರೀತಿ ವಿಶ್ವಾಸದ ಸ ಸಂಪರ್ಕ ಸಾಧನವಾಗಲಿ. ಆದರೆ ಅದೇ ಮುಖ್ಯವಾಗದಿರಲಿ, ಅದನ್ನು ಒಂದು ಸಾಧನವಾಗಿ ಗಮನಿಸಿ ಅದನ್ನೇ ಬಳಸಿಕೊಂಡು ವಿಕೃತತೆಯನ್ನು ಮೆರೆಯುವುದು ನಿಜಕ್ಕೂ ತಪ್ಪು, ಈ ಹಿನ್ನೆಲೆಯಲ್ಲಿ ಮೋಸ ಮಾಡುವ ಅದೆಷ್ಟೋ ಕಿರಾತಕವನ್ನು ಸೆದೆಬಡಿಯಲು ರಕ್ಷಣಾ ಇಲಾಖೆಯೇ ಹೊಸದೊಂದು ವಿಭಾಗವನ್ನು ಆರಂಭಿಸಿದೆ. ಅಲ್ಲಿ ಮುಗ್ಧತೆಯಿಂದ ಹಣ ಕಳೆದುಕೊಂಡವರ, ವಂಚನೆಗೊಳಗಾದವರ ಸಂಖ್ಯೆ ಹೆಚ್ಚಾಗಿದೆ. ಯಾವುದೋ ಅಕೌಂಟ್ ಓಪನ್ ಮಾಡಿ ಬ್ಯಾಂಕ್ ನಲ್ಲಿ ಸಹ ವಂಚಿಸಿ ಯಾವುದೊ ಹೆಸರಿನ ಮೊಬೈಲ್ ಬಳಸಿಕೊಂಡು, ನಾನಾ ಆಸೆ- ಆಮಿಷಗಳನ್ನು ನೀಡಿ ಮುಗ್ಧರನ್ನು, ಅಮಾಯಕರನ್ನು ವಂಚಿಸುವ ಪ್ರಕರಣಗಳನ್ನು ಈಗಲೂ ಭೇದಿಸಲು ರಕ್ಷಣಾ ಇಲಾಖೆ ಆ ನಿಟ್ಟಿನಲ್ಲಿ ಸರಿಯಾದ ದಾಖಲೆಗಳು ಸಿಗದೇ ಬ್ಯಾಂಕಿನಲ್ಲಿನ ನಕಲಿ ದಾಖಲೆಗಳ ಹಾಗೂ ಮೊಬೈಲ್ ಸಿಮ್ ಕಾರ್ಡ್ ಹೆಸರಿನ ನಕಲಿಯನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯು ನಮ್ಮ ನಡುವೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಅಕೌಂಟ್ ಓಪನ್ ಮಾಡುವಲ್ಲಿ ಹಾಗೂ ಸಿಮ್ ಪಡೆಯುವಲ್ಲಿ ನಾನಾ ಕಡ್ಡಾಯದ ನಿಬಂಧನೆಗಳನ್ನು ಹಾಕಲಾಗಿದೆ.

ಮೊಬೈಲ್ ಇಲ್ಲಿ ಮಾಟಗಾತಿಯಾಗಿದ್ದು ಕೆಲವು ವಿಚಿತ್ರ, ವಿಕೃತ ಮನೋಸ್ಥಿತಿಯವರ ಹತ್ತಿರ ಮಾತ್ರ. ಉಳಿದಂತೆ ಸಭೆಗೆ ಅದೊಂದು ಪ್ರೀತಿಯ ಸಾಧನವಾಗಿದೆ ಅಲ್ಲವೇ?
ಇದೊಂದು ಕವನ ಓದಿ
ಕೆಲವೊಮ್ಮೆ ನಮ್ ಮೊಬೈಲ್ “ಎಣ್ಣೆ ಹೊಡೆದಿರುತ್ತೆ.. ಉಷಾರ್..!
ನೀವು ಎಂಥವರೇ ಆಗಿರಿ,
ನಿಮ್ಮ ವ್ಯಕ್ತಿತ್ವ ಎಂತಹುದೇ ಆಗಿರಲಿ, ನಿಮ್ಮನ್ನು ನೀವು ಕಳೆದುಕೊಳ್ಳಬೇಡಿ, ನೀವು ಎಣ್ಣೆ ಹೊಡೆಯದಿದ್ದರೂ ನಿಮ್ಮ ಮೊಬೈಲ್ ಎಣ್ಣೆ ಹೊಡೆದಿರುತ್ತೆ ಗೊತ್ತಾ?
ನಿಮ್ ನಮ್ ಬದುಕು ಎಲ್ಲಾ ಒಂದೇ,
ನಾನವನಲ್ಲ ಎಂಬಾತನ ಮೊಬೈಲೇ ಎಲ್ಲಾ ಮಾಡಿರುತ್ತೆ,
ವೇದಾಂತಿಯಂತಾಡುವವನ “ಕರೆ” ಕಿರಿಕ್!,
ಎಲ್ಲಾ ಸುಳ್ಳಿನ ನಾಟಕ ರಂಗ…,
ಜಗದಲಿ ನೋಡುಗರಿಗೋಸ್ಕರ ನಾಟ್ಕ,
ಅಭಿಮಾನಿಗಳಿಗೋಸ್ಕರ ಸಭ್ಯಸ್ಥರು,
ಕುಡಿದಾಗ ಕಿರಿಕ್ ಏನಿಲ್ಲವಂತೆ..!,
ಒಣವೇದಾಂತ ಕೇಳಲು ಗಟ್ಟಿ ಕಿವಿ ಬೇಕು
ಬದ್ನೆ ಕಾಯ್ ತಿಂತಾ ವೇದಾಂತದ ಮಾತು,
ಚಂದದ ಸಮಾಜದಲ್ಲಿ ನೈಜ ನುಡಿಯುವವನೇ ಅಪರಾಧಿ,
ನಾಟ್ಕ ಮಾಡ್ತಾ, ಹಲ್ಲುಗುಂಜೂನೇ ಗ್ರೇಟ್,
ಮೋಸ ಮತ್ತೆ ನಾಟ್ಕ ಮಾಡಿದ್ರೆ ಗೌರವ…
(ತುಂಬಾದಿನದ ಮೇಲೆ ಇಂತಹ ನಾಕು ಸಾಲು ಗೀಚಿದ್ದೇನೆ, ತಿದ್ದೋದು ತೀಡೋದು ಇನ್ನಷ್ಟಿದೆ….)
ಗಜೇಂದ್ರ ಸ್ವಾಮಿ ಎಸ್. ಕೆ.,ಶಿವಮೊಗ್ಗ
(ಮುಂದುವರಿಯುತ್ತದೆ)