ಶಿವಮೊಗ್ಗ, ಜನವರಿ 29 :
ಜ.26 ರಂದು ನಗರದ ಸವರ್ಲೈನ್ ರಸ್ತೆಯ ಐಸಿರಿ ಹೋಟೆಲ್ ಹತ್ತಿರದ ಫುಟ್ಪಾತ್ ಮೇಲೆ ಸುಮಾರು 50-55 ವರ್ಷ ಗಂಡಸ್ಸು ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ವ್ಯಕ್ತಿಯ ಹೆಸರು, ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಮೃತ ವ್ಯಕ್ತಿಯು 5.6 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಬಲ ಮಣಿಕಟ್ಟಿನ ಮೇಲ್ಭಾಗದಲ್ಲಿ ರಾಗಿ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಎಡ ಮುಂಗೈ ಹೊರಭಾಗದಲ್ಲಿ ಸುಮಾರು ಅರ್ಧ ಇಂಚು ಉದ್ದಗಲದ ಅರ್ಧ ವಾಸಿಯಾಗಿರುವ ರಕ್ತ ಗಾಯದ ಗುರುತು ಇರುತ್ತದೆ. ಬಲ ಮುಂಗೈನ ಹೊರಭಾಗದಲ್ಲಿ 3 ರಿಂದ 4 ಇಂಚು ಉದ್ದದ ಹಳೇ ಗಾಯದ ಗುರುತು ಇರುತ್ತದೆ ಹಾಗೂ ಎಡಗಾಲಿನ ಮಂಡಿ
ಚಿಪ್ಪಿಗೆ ಹಳೆ ಗಾಯದ ಗುರುತು ಇರುತ್ತದೆ. ಮೈಮೇಲೆ ಬಿಳಿ,ಕಪ್ಪು ಬಣ್ಣದ ಡಿಸೈನ್ ಇರುವ ಪ್ರಿಂಟೆಡ್ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಚಡ್ಡಿ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.