ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದ್ದು ಅವರ ಉದ್ಧಟತನವನ್ನು ತಾವು ತೀವ್ರವಾಗಿ ಖಂಡಿಸುತ್ತೇನೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ವಸತಿ ಸಮುಚ್ಛಯದಲ್ಲಿ 658 ಮನೆಗಳನ್ನು ಫಲಾನುಭವಿಗಳಿಗೆ ಲಾಟರಿ ಮೂಲಕ ವಿತರಿಸಲು ಇಂದು (ಫೆ.28) ವಸತಿ ಸಚಿವ ಜಮೀರ್ ಅಹಮ್ಮದ್ ಬರಬೇಕಾಗಿತ್ತು. ನಾನು ಅವರೊಡನೆ 4-5ಸಭೆ ಮಾಡಿ ಚರ್ಚಿಸಿದ್ದೆ. ವಿದ್ಯುತ್ ಸಂಪರ್ಕಕ್ಕೆ 12ಕೋ.ರೂ. ಬೇಕು ಅಂತ ತಿಳಿಸಿದ್ದೆ. ಅದಕ್ಕೆ ಜಮೀರ್ ಒಪ್ಪಿದ್ದರು. ಆದರೆ ಸಚಿವ ಮಧು ಬಂಗಾರಪ್ಪ ಮಂತ್ರಿಗಳು ಬರುವುದನ್ನು ತಡೆದು ಅಡ್ಡಗಾಲು ಹಾಕಿದ್ದಾರೆ. ಈ ದುಷ್ಟಬುದ್ದಿ ಯಾಕೆ? ಇದು ಯಾವ ಪುರುμÁರ್ಥಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಮೂಲಕ ಸಚಿವರು ತಾವು ಬಡವರ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಜಮೀರ್ ಅವರೊಡನೆ ಮಾತನಾಡಿದ್ದರ ಪರಿಣಾಮ ಸ್ಲಂ ಬೋರ್ಡ್ ಸಮಸ್ಯೆ ಪರಿಹಾರವಾಯ್ತು ಎಂದ ಅವರು ನಾನು ಆಶ್ರಯ ಸಮಿತಿಯ ಅಧ್ಯಕ್ಷ. ಮನೆ ಹಂಚಿಕೆ ವಿಷಯದ ಕುರಿತು ಸಚಿವರ ಜೊತೆ ಮಾತನಾಡಿದ್ದೇನೆ. ಬಡವರಿಗೆ ಮನೆ ಹಂಚಿಕೆಗೂ ಪುರುಸೊತ್ತು ಇಲ್ಲ ಅಂದರೆ ಯಾಕೆ ಬೇಕು ನಿಮಗೆ ಉಸ್ತುವಾರಿ ಸಚಿವರ ಪಟ್ಟ? ಬೇಜವಾಬ್ದಾರಿ, ಸಹಕಾರ ನೀಡದ ಸಚಿವ ಮಧು ಬಂಗಾರಪ್ಪ ಬಡವರ ವಿರೋಧಿ ಎಂದು ಕಟುವಾಗಿ ಟೀಕಿಸಿದರು.
ಫೆ.4ರಂದು ಆಶ್ರಯ ಸಮಿತಿ ಸಭೆ ಕರೆದಿದ್ದೇನೆÀ. ಆಶ್ರಯ ಸಮಿತಿಯ ನಿರ್ಣಯವಿಲ್ಲದೆ ಸಚಿವರು ಆಶ್ರಯ ಮನೆ ಹಂಚುತ್ತಾರಾ ಎಂದು ಸವಾಲು ಹಾಕಿದ ಅವರು ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಿದ್ದಾಗ ಕುಡಿಯುವ ನೀರಿಗೆ 16ಕೋ.ರೂ. ನೀಡಿದ್ದರು. ಬಡ ಫಲಾನುಭವಿಗಳು ಸಾಲ ಸೋಲ ಮಾಡಿ, ಮಾಂಗಲ್ಯ ಸರ ಅಡವಿಟ್ಟು 21ಕೋ.ರೂ.ಹಣ ನೀಡಿದ್ದಾರೆ. ಆಶ್ರಯ ಯೋಜನೆ ಬಂಗಾರಪ್ಪ ತಂದಿದ್ದು ನಿಜ. ನೀವೇನು ಮಾಡ್ತಾ ಇದ್ದೀರಿ? ನಿಮ್ಮದೇ ಸರ್ಕಾರ ಇದ್ದರೂ ಹಣ ತರುವ ಯೋಗ್ಯತೆ ನಿಮಗಿಲ್ಲ ಎಂದು ಛೇಡಿಸಿದರು.
ಜುಲೈ 2023ರೊಳಗೆ ನಿರ್ಮಾಣದ ಯೋಜನೆ ಮುಗಿಯಬೇಕಿತ್ತು. 3000ಮನೆ ನಿರ್ಮಾಣಕ್ಕೆ ಅವಕಾಶವಿದೆ. 620 ಮನೆ ಕೊಟ್ಟಾಗಿದೆ. 652 ಕ್ಕೆ ಈಗ ಅವಕಾಶವಿದೆ. 576 ಮನೆಗಳು ಮುಗಿಯುವ ಹಂತದಲ್ಲಿವೆ. ಬಡ ಫಲಾನುಭವಿಗಳ 23 ಕೋ.ರೂ.ಯನ್ನು ಗುತ್ತಿಗೆದಾರರಿಗೆ ಸಂದಾಯ ಮಾಡಲಾಗಿದೆ. ಮನೆ ಹಸ್ತಾಂತರಿಸದೆ ಬಡವರನ್ನು ಬಿಕ್ಷೆ ಬೇಡುವ ಸ್ಥಿತಿಗೆ ತಂದಿದ್ದೀರಿ. ನಿಮ್ಮಪ್ಪನ ಆಸ್ತಿಯನ್ನು ಅವರು ಕೇಳುತ್ತಿಲ್ಲ ಎಂದು ಸಚಿವರ ವಿರುದ್ಧ ಹರಿಹಾಯ್ದರು.
ಬಡವರಿಗೆ ಮನೆ ಕೊಟ್ಟರೆ ಬ್ಯಾಂಕ್ ನವರು ಸಾಲ ಕೊಡುತ್ತಾರೆ. ನಮ್ಮ ಕರ್ತವ್ಯ ಮಾಡ್ಳಿಕ್ಕೂ ಬಿಡ್ತಿಲ್ಲ. ಅದ್ಕೂ ಅಡ್ಡ ಬರ್ತಾರೆ ಎಂದು ದೂರಿದರು.
ಇನ್ನು ಯಾವುದೇ ಕಾರಣಕ್ಕೂ ಸಚಿವರ ಉದ್ಧಟತನವನ್ನು ಸಹಿಸಿಕೊಳ್ಳುವುದಿಲ್ಲ. ಬ್ರಹ್ಮ ಬಂದರೂ ಮನೆ ಹಸ್ತಾಂತರವನ್ನು ನಿಲ್ಲಿಸುವುದಿಲ್ಲ. ಬಡವರ ಜೊತೆ ಹುಡುಗಾಟ ಮಾಡುತ್ತಿರುವ ಸಚಿವರಿಗೆ ಏರಿದ ಪಿತ್ತವನ್ನು ಇಳಿಸಲು ಬಡವರೇ ಬರ್ತಾರೆ ಎಂದು ಗುಡುಗಿದರು.
ಸÀಚಿವ ಮಧು ಶಿವಮೊಗ್ಗದ ರಾಜಕೀಯ ಸಂಸ್ಕøತಿಯನ್ನು ಹಾಳುಮಾಡುತ್ತಿದ್ದಾರೆ. ಅವರು ತಮ್ಮ ನಾಲಿಗೆ ಮೇಲೆ ಹಿಡಿತ ಸಾಧಿಸಲಿ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವ ಸಂಚು ಬಿಡಬೇಕು. ಸಚಿವರ ಉದ್ಧಟತನಕ್ಕೆ ಉತ್ತರ ಕೊಡುವುದು ನಮಗೂ ಗೊತ್ತಿದೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಶಿಷ್ಟಾಚಾರದ ಉಲ್ಲಂಘನೆ ಮಾಡುತ್ತಿದ್ದಾರೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಅಥವಾ ಸಭೆಗಳು ಇರುವಾಗ ಕರಪತ್ರದಲ್ಲಿ ಔಪಚಾರಿಕವಾಗಿ ಹೆಸರನ್ನು ಹಾಕುತ್ತಾರೆ ಅಷ್ಟೇ. ಆದರೆ, ಅದನ್ನು ಅಧಿಕೃತವಾಗಿ ನಮಗೆ ತಲುಪಿಸುವುದಿಲ್ಲ. ಮತತು ನಮಗೆ ಆಹ್ವಾನ ಕೂಡ ಮಾಡದೇ, ಕಾರ್ಯಕ್ರಮದ ಬಗ್ಗೆ ತಿಳಿಸದೇ ಅವಮಾನ ಮಾಡುತ್ತಿದ್ದಾರೆ. ಇದು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಿಗೆ, ಸಂಸದರಿಗೂ ಈ ರೀತಿಯ ಅನುಭವವಾಗಿದೆ. ಆದ್ದರಿಂದ ಇದರ ವಿರುದ್ಧ ಸದನದ ಕಲಾಪದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ. ಮೋಹನ್ ರೆಡ್ಡಿ, ದೀನದಯಾಳ್, ಮಂಜುನಾಥ್ ನವಿಲೆ, ಕೆ.ವಿ. ಅಣ್ಣಪ್ಪ, ಶ್ರೀನಾಗ್ ಇದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭ ಮೇಳಕ್ಕೆ ಕೋಟ್ಯಂತರ ರೂ.ಹಣವನ್ನು ವ್ಯಯ ಮಾಡುವುದರಿಂದ ಬಡವರಿಗೆ ಏನು ಲಾಭ ಎಂದು ಪ್ರಶ್ನಿಸುವುದರ ಮೂಲಕ ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ. ಅವರು ಹಿರಿಯರು. ತಮ್ಮ ಹಿರಿತನವನ್ನು ಏಕೆ ಇಟ್ಟುಕೊಂಡಿಲ್ಲ ಎಂದು ಪ್ರಶ್ನಿಸಿದ ಶಾಸಕ ಚನಬಸಪ್ಪ, ಸರ್ಕಾರ ಮುಸ್ಲಿಮರನ್ನು ಮಕ್ಕಾ ಮದೀನಾಕ್ಕೆ ಕ್ಯೋಟ್ಯಂತರ ರೂ.ವೆಚ್ಚ ಭರಿಸಿ ಕಳಿಸುವಾಗ ಈ ಪ್ರಶ್ನೆ ಅವರಿಗೆ ಏಕೆ ಮೂಡಿಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷವೇ ಒಂದು ನರಕ. ಅವರಿಗೆ ಸ್ವರ್ಗದ ಬಾಗಿಲು ಎಂದೂ ತೆರೆಯುವುದಿಲ್ಲ ಎಂದು ಖರ್ಗೆಯವರನ್ನು ತಿವಿದರು.