ದಾವಣಗೆರೆ: ಹೊನ್ನಾಳಿಯ ರಾಘವೇಂದ್ರ ಮಂಟಪದ ಬಳಿ ಶಿಕ್ಷಕಿ ತುಂಗಾಭದ್ರಾ ನದಿಗೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಪಷ್ಟನೆ ನೀಡಿದ್ದಾರೆ.
ತುಂಗಾಭದ್ರಾ ನದಿಗೆ ಹಾರಿರುವುದು ನಿಜ. ಆದ್ರೆ, ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ, ಶಿವಮೊಗ್ಗದ ಟಿಟಿ ಕ್ಯಾಪಿಟಲ್ ಫೈನಾನ್ಸ್ ನಲ್ಲಿ 35ರಿಂದ 40 ಲಕ್ಷ ರೂಪಾಯಿ ಸಾಲ ಪಡೆದಿದ್ದು ನಿಜ. ನದಿಗೆ ಹಾರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟತೆ ಇಲ್ಲ. ಇನ್ನೂ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ನಾವು ಕೂಡ ಶಿಕ್ಷಕಿ ತುಂಗಾಭದ್ರಾ ನದಿಗೆ ಹಾರಲು ಕಾರಣವೇನು ಎಂಬ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಮೃತದೇಹದ ಹುಡುಕಾಟ ಮುಂದುವರಿದಿದೆ. ದೂರು ದಾಖಲಾದ ಬಳಿಕ, ಮಾಹಿತಿ ಕಲೆ ಹಾಕಿದ ನಂತರ ಶಿಕ್ಷಕಿ ನದಿಗೆ ಹಾರಿದ್ದರ ಕುರಿತಂತೆ ಸ್ಪಷ್ಟ ಮಾಹಿತಿ ಸಿಗಲಿದೆ. ಯಾವುದೇ ಊಹಾಪೋಹ ಬೇಡ. ಮಾಹಿತಿ ಸಿಕ್ಕ ಬಳಿಕ ನಾವೇ ಮಾಹಿತಿ ನೀಡುತ್ತೇವೆ
ಎಂದು ಹೇಳಿದ್ದಾರೆ.
ಜನರಲ್ಲಿ ಯಾವುದೇ ರೀತಿಯ ಗೊಂದಲ ಬೇಡ. ಈ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮನೆ ಕಟ್ಟಲು ಸಾಲ ಪಡೆದಿದ್ದರು. ಆದ್ರೆ, ನದಿಗೆ ಯಾಕೆ ಹಾರಿದರು ಎಂಬ ಕುರಿತಂತೆ ಸ್ಪಷ್ಟತೆ ಇಲ್ಲ ಎಂದು ಎಸ್ಪಿ ಉಮಾ ಪ್ರಶಾಂತ್ ಅವರು ಮಾಹಿತಿ ಕೊಟ್ಟಿದ್ದಾರೆ.