ವಾರದ ಅಂಕಣ – 30
- ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಮನುಷ್ಯ ಸಮಾಜ ಜೀವಿ. ಒಂಟಿಯಾಗಿ ಬದುಕಲಾರ. ವಾಸ್ತವವಾಗಿ ತನ್ನನ್ನು ತಾನು ತಮ್ಮೊಳಗೆ ರೂಡಿಸಿಕೊಂಡು ತಮ್ಮದೇ ಬದುಕು ಕಟ್ಟಿಕೊಂಡರೂ ಸಹ ಎಲ್ಲರನ್ನೂ ಸಮಾನತೆಯ ಜೊತೆಗೆ ಹಂಚಿಕೊಂಡು ಬೆಳೆಯುವ ಸಹಜವಾದ ಅಭ್ಯಾಸವನ್ನು ಹೊಂದಿದ್ದಾನೆ. ಈ ನಡುವೆ ನಮ್ಮ ನಮ್ಮ ಹೊಂದಾಣಿಕೆಗೆ ನಮ್ಮ ನಮ್ಮ ಬದುಕಿನ ಹವ್ಯಾಸ ಹಾಗೂ ಅಭಿವೃದ್ಧಿಗೆ ಸಂಘ ಸಂಸ್ಥೆಗಳಲ್ಲಿ, ಪರಿಷತ್ ಗಳಲ್ಲಿ, ಅಕಾಡೆಮಿಗಳಲ್ಲಿ ಜನ ಸಮೂಹ ಕ್ರೂಡೀಕರಣವಾಗುವುದು ವಾಡಿಕೆ. ಕೆಲವು ಸಂಘ-ಸಂಸ್ಥೆಗಳ ಪರಿಷತ್ ಗಳ ಹಾಗೂ ಇತರೆ ಸಂಘಟನೆಗಳ ಸದಸ್ಯತ್ವ ಪಡೆಯಲು ನಾನಾ ಅರ್ಹತೆ ಹಾಗೂ ಅವಶ್ಯ ಶುಲ್ಕ ನಿಗದಿಯಾಗಿರುತ್ತದೆ. ಇಂತಹ ಕೆಲಸಗಳಲ್ಲಿ ಕೆಲವೇ ಕೆಲವು ವಿಕೃತ ಮನಸ್ಸುಗಳು ನಿನಗೆ ಮೆಂಬರ್ಶಿಪ್ ಕೊಡಿಸುತ್ತೇನೆ ಎಂದು ನಾನಾ ಕಡೆ ಶುಲ್ಕದ ಹಣವನ್ನು ಪಡೆದು ಕೊನೆಗೆ ನಿಮಗೆ ಮೆಂಬರ್ಶಿಪ್ ಕೊಟ್ಟಿಲ್ಲ ಎಂದು ಎರಡು ಕೈಗಳನ್ನು ಮೇಲೆತ್ತುವ ಕುತಂತ್ರಿಗಳನ್ನು ನಾವು ಕಾಣುತ್ತಿದ್ದೇವೆ. ಇಂತಹ ಮೆಂಬರ್ಶಿಪ್ ಕೊಡಿಸುವ ಹೆಸರಲ್ಲಿ ಹಣ ನುಂಗುವ ಕಿರಾತಕ ಮನಸುಗಳನ್ನು ಬಿಂಬಿಸುವುದೇ ಇಂದಿನ ನೆಗೆಟಿವ್ ಥಿಂಕಿಂಗ್ ವಾರದ ಅಂಕಣ.
ಒಟ್ಟಾರೆಯಾಗಿ ಸಮಾಜ ನಮ್ಮ ನಡುವೆ ಸಾಕಷ್ಟು ವ್ಯವಸ್ಥಿತವಾಗಿದೆ. ಸಾಕಷ್ಟು ಗೊಂದಲಗಳು ಕಂಡರೂ ಸಹ ಅವುಗಳನ್ನು ಬಗೆಹರಿಸಿಕೊಳ್ಳುವ ನಮ್ಮ ನಡುವೆ ಸಂಪರ್ಕ ಸೇತುವೆಗಳನ್ನು ಕ್ರೂಡೀಕರಿಸುವ ಮನುಷ್ಯತ್ವದ ಮನಸ್ಸುಗಳು ಬಹಳಷ್ಟಿವರ ಎಂಬುದೇ ನಮ್ಮ ನಡುವಿನ ಪುಣ್ಯ. ಹಾಗಾಗಿಯೇ ಇನ್ನೂ ಈ ಸಮಾಜದ ವ್ಯವಸ್ಥೆಯಲ್ಲಿ ಸಂಘ ಸಂಸ್ಥೆಗಳ ಪ್ರೀತಿ ವಿಶ್ವಾಸ ಬೆಳೆದಿರುವುದು ಹಾಗೂ ಅದರ ಮೂಲಕ ಮನುಷ್ಯ ಸಹಜ ಜೀವಿಯಾಗಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಪ್ರಬುದ್ಧನಾಗುತ್ತಿರುವುದು ಸಾಕ್ಷಿಯಾಗಿ ನಿಲ್ಲುತ್ತವೆ ಅಲ್ಲವೇ?
ಈ ನಡುವೆ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ನಿಮಗೆ ಈ ಮೆಂಬರ್ಶಿಪ್ ಕೊಡಿಸುತ್ತೇನೆ ಅದಕ್ಕೆ ಅಗತ್ಯವಿರುವ ಅರ್ಜಿಯನ್ನು ಕೊಟ್ಟಂತೆ ಮಾಡಿ ಅದರ ಶುಲ್ಕದ ಹಣವನ್ನು ಪಡೆದು ಮೆಂಬರ್ಶಿಪ್ ಕೊಡಿಸುವವರ ಸಂಖ್ಯೆ ಶೇಕಡ 99.99ರಷ್ಟಿದ್ದರೆ ಇನ್ನ ಉಳಿದ 0. 01 ರಷ್ಟು ಕಿರಾತಕ ಮನಸುಗಳು ಅದೇ ಹೆಸರಲ್ಲಿ ಅಂದಿನ ಹಾಗೂ ಅಂದಂದಿನ ಬದುಕು ಸಾಗಿಸುವ ಪ್ರಯತ್ನ ಮಾಡುತ್ತಾರೆ ಅಲ್ಲವೇ? ಇದನ್ನು ಸಾಕಷ್ಟು ಜನ ನಮ್ಮ ನಡುವೆ ಮಾಡಿದ್ದಾರೆ, ಅದನ್ನು ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ಅದರಿಂದ ಆ ಸದಸ್ಯತ್ವವೇ ಬೇಡವೆಂದು ಕೈ ತೊಳೆದು ಕುಳಿತುಕೊಂಡ ಅದೆಷ್ಟೋ ಜನರನ್ನು ಕಣ್ಣಾರೆ ಕಂಡಿದ್ದೇವೆ.
ಕೆಲವೆಡೆ ಅತ್ಯಂತ ಸುಲಭವಾಗಿ ಈ ಸದಸ್ಯತ್ವ ಸಿಗುವುದು ಕಷ್ಟ. ಅದಕ್ಕೆ ಒಂದಿಷ್ಟು ಶಿಫಾರಸ್ಸು, ಶುಲ್ಕ ಪಾವತಿ ಹಾಗೂ ಅರ್ಹತೆ ಹೊಂದಿರಲೇಬೇಕು. ಅಂತಹ ನಿಟ್ಟಿನಲ್ಲಿ ಸಮಾಜಮುಖಿಯಾದ ಸರ್ಕಾರದ ಹಲವು ಸಂಘಟನೆಗಳು ವಿಶೇಷವಾಗಿ ಸಾಹಿತ್ಯ ಪರಿಷತ್, ನಾಟಕ ಅಕಾಡೆಮಿ, ಸಂಗೀತ, ಕ್ರೀಡಾ ಅಕಾಡೆಮಿ ಸೇರಿದಂತೆ ಹಲವು ಸಂಘಟನೆಗಳ ಮೆಂಬರ್ಶಿಪ್ ಪಡೆಯಲು ಒಮ್ಮೊಮ್ಮೆ ಅರ್ಜಿಗಳನ್ನು ಆಹ್ವಾನಿಸುತ್ತಾರೆ. ಬಹಳಷ್ಟು ಜನರಿಗೆ ಅಲ್ಲಿನ ಕಛೇರಿ ಎಲ್ಲಿದೆ ಎಂಬುದೇ ಗೊತ್ತಿರುವುದಿಲ್ಲ. ನಂಬಿಕೆ ಎಂಬ ವಿಶ್ವಾಸದಲ್ಲಿ ಯಾರೋ ಒಬ್ಬನ ಕೈಯಲ್ಲಿ ಅರ್ಜಿಯನ್ನು ಬರೆದುಕೊಟ್ಟು ಶುಲ್ಕದ ಹಣವನ್ನು ಕೊಟ್ಟುಬಿಡುತ್ತಾರೆ. ಬಹಳಷ್ಟು ಜನ ಅದನ್ನು ಮಾಡಿಸಿಕೊಟ್ಟಿದ್ದಾರೆ, ಅವರನ್ನು ಹೊರತುಪಡಿಸಿ ಇರುವ ವಿಕಾರಾತ್ಮಕ ಮನಸುಗಳನ್ನು ಬಿಂಬಿಸುತ್ತ ಹೋಗುವುದೇ ಈ ಎತ್ತುವಳಿ ದಂಧೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಈ ಸಂಘಟನೆಗಳ ಅಥವಾ ಸಂಸ್ಥೆಗಳ ವಿಚಾರ ಹೆಚ್ಚಾಗಿ ಗಮನಕ್ಕೆ ಬರುವುದು 5 ವರ್ಷಕ್ಕೊಮ್ಮೆ ನಡೆಯುವ ಅದರ ಚುನಾವಣೆಯಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಮೆಂಬರ್ಶಿಪ್ ಪಡೆದಿದ್ದರೆ ವೋಟು ಹಾಕಬಹುದು. ಚುನಾವಣೆಗೆ ನಿಲ್ಲಬಹುದು ಎಂಬ ಯೋಚನೆ ಮಾಡುವ ಬಹಳಷ್ಟು ಜನರಿಗೆ ಆಗ ಸದಸ್ಯತ್ವದ ಅರಿವು ಮೂಡುತ್ತದೆ. ಅದನ್ನು ಬೆಳೆಸಿಕೊಳ್ಳಲು ಹಾಗೂ ಪಡೆಯಲು ಅವರು ಅದಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅದರ ಬಗ್ಗೆ ಸಾಕಷ್ಟು ತಿಳುವಳಿಕೆ ಇರುವಂತಹವರು ಅದರ ಹೆಸರಿನಲ್ಲಿ ಅದರ ಹಣವನ್ನು ಸಹ ಕಬಳಿಸಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ ಅಲ್ಲವೇ?
ಸಮಾಜಮುಖಿಯಾಗಿ ನಾಲ್ಕು ಜನರಿಗೆ ಸಾಧ್ಯವಾದರೆ ಸಹಾಯ ಮಾಡಿ, ಇಲ್ಲದಿರೆ ಸುಮ್ಮನಿದ್ದು ಬಿಡಿ. ಅವರಿಗೆ ಅದರ ಆಸೆ ಹುಟ್ಟಿಸಿ ಅವರಿಂದ ಅವರ ಚಿಕ್ಕಪುಟ್ಟ ಶುಲ್ಕವನ್ನು ತಿಂದು ನೀವು ವಿಕೃತ ಮನಸ್ಸಿನವರಾಗಬೇಡಿ, ನೀವೂ ಚಿಲ್ಲರೆಗಳಾಬೇಡಿ, ನಿಮ್ಮಿಂದ ಆಗದಿದ್ದರೆ ಸುಮ್ಮನಿದ್ದುಬಿಡಿ. ಪಡೆದ ಹಣ ಮರಳಿ ನೀಡಿ ಎಂಬುದೇ ನಮ್ಮ ಓದುಗರ ಹಾಗೂ ಸಮಾನ ಮನಸ್ಕರ ಹಿತನುಡಿ ಹಾಗೂ ಹಿತ ಚಿಂತನೆ ಒತ್ತಾಯ.
(ಮುಂದುವರೆಯುತ್ತದೆ)