ಶಿವಮೊಗ್ಗ, ಜ.25 : ನಗರದ ದುರ್ಗಿಗುಡಿ ಪ್ರದೇಶದಲ್ಲಿ ಜ.23 ರಂದು ತಂಬಾಕು ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಿ, ಸ್ಥಳದಲ್ಲಿಯೇ ದಂಡ ಸಂಗ್ರಹಿಸಲಾಯಿತು.
ಒಟ್ಟು 21 ಪ್ರಕರಣಗಳು ದಾಖಲಿಸಿ 4100 ರೂ ದಂಡವನ್ನು ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ದುಷ್ಪರಿಣಾಮಗಳು, ಕೊಟ್ಪಾ ಕಾಯ್ದೆ ಕುರಿತು ಹಾಗೂ ತಂಬಾಕು ವ್ಯಸನ ಮುಕ್ತಿ ಕೇಂದ್ರದ ಸೇವೆಗಳ ಕುರಿತು ಅರಿವನ್ನು ಮೂಡಿಸಲಾಯಿತು. ತಂಬಾಕು ಜಾಹೀರಾತು ಫಲಕವನ್ನು ತೆರವುಗೊಳಿಸಲಾಯಿತು.
ಈ ತಂಡದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್ , ಸಾಮಾಜಿಕ
ಕಾರ್ಯಕರ್ತರುಗಳಾದ ರವಿರಾಜ್ , ವಸಂತ್, ವಿಕಾಸ್ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರು, ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.