ಬೆಂಗಳೂರು: ತಾಳಗುಪ್ಪ-ಮೈಸೂರು ನಡುವೆ ಪ್ರತಿದಿನ ರಾತ್ರಿ ಸಂಚರಿಸುವ 16228 ಸಂಖ್ಯೆಯ ಎಕ್ಸ್’ಪ್ರೆಸ್ ರೈಲನ್ನು ಮಲ್ಲೇಶ್ವರಂ ನಿಲ್ದಾಣದಲ್ಲಿ ನಿಲುಗಡೆ ನೀಡುವ ಸೌಲಭ್ಯವನ್ನು ಮಾರ್ಚ್ 31ರವರೆಗೂ ವಿಸ್ತರಣೆ ಮಾಡಲಾಗಿದೆ.
ರಾತ್ರಿ ತಾಳಗುಪ್ಪದಿಂದ ಹೊರಟು ಶಿವಮೊಗ್ಗ, ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪುವ ರಾತ್ರಿ ಎಕ್ಸ್’ಪ್ರೆಸ್ ರೈಲನ್ನು ಪ್ರಯಾಣಿಕರ ಕೋರಿಕೆಯ ಮೇರೆಗೆ ಯಶವಂತಪುರ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೆಜೆಸ್ಟಿಕ್ ನಿಲ್ದಾಣದ ನಡುವಿನ ಮಲ್ಲೇಶ್ವರಂ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ನೀಡಲಾಗುತ್ತಿತ್ತು.
ಈ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರ ಅನುಕೂಲಕ್ಕಾಗಿ 2025ರ ಮಾರ್ಚ್ 31ರವರೆಗೂ ತಾತ್ಕಾಲಿಕವಾಗಿ ನಿಲುಗಡೆ ಸೌಲಭ್ಯವನ್ನು ಮುಂದುವರೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ರೈಲುಗಳ ಮಾರ್ಗ ಬದಲಾವಣೆ
ಉತ್ತರ ಮಧ್ಯ ರೈಲ್ವೆಯ ಸೂಚನೆಯಂತೆ, ಜನವರಿ 27, 2025 ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22683 ಯಶವಂತಪುರ-ಲಕ್ನೋ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಅನ್ನು ಓಹಾನ್ ಕ್ಯಾಬಿನ್, ಬಂದಾ, ಭೀಮ್ಸೇನ್, ಕಾನ್ಪುರ್ ಸೆಂಟ್ರಲ್ ಮತ್ತು ಲಕ್ನೋ ನಿಲ್ದಾಣಗಳ ಮೂಲಕ ಓಡಿಸಲಾಗುವುದು, ನೈನಿ ಜಂಕ್ಷನ್, ಪ್ರಯಾಗರಾಜ್, ಮಾ ಬೆಲ್ಹಾ ದೇವಿ ಧಾಮ್ ಪ್ರತಾಪಗಢ ಜಂಕ್ಷನ್ , ಅಮೇಥಿ ಮತ್ತು ರಾಯ್ ಬರೇಲಿ ಜಂಕ್ಷನ್’ಗಳಲ್ಲಿ ಅದರ ನಿಯಮಿತ ನಿಲುಗಡೆಗಳನ್ನು ಬಿಟ್ಟು ಬಿಡಲಾಗುವುದು ಎಂದು ತಿಳಿಸಿದೆ.