ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ನಾಪತ್ತೆಯಾಗಿ 78 ದಿನಗಳ ಬಳಿಕ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ ನವೆಂಬರ್ 3 ರಂದು ಭರತ್ ನಾಪತ್ತೆಯಾಗಿರುವ ಕುರಿತು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಹುಮ್ಮಡಗಲ್ಲು ಮಾಣಿ ಡ್ಯಾಮಿನ ಹಿನ್ನೀರ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಇದ್ದ ಮೃತದೇಹವನ್ನ ಕಂಡ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಮೃತದೇಹ ಭರತ್ ಅವರದ್ದೇ ಇರಬಹುದು ಎಂಬ ಸಂದೇಹದ ಮೇಲೆ ಅವರ ಕುಟುಂಬಕ್ಕೆ ಮಾಹಿತಿಯನ್ನು ನೀಡಿ ಬಳಿಕ ನಾಪತ್ತೆಯಾಗಿದ್ದ ಭರತ್ ಅವರ ಪತ್ನಿ ಮೃತ ದೇಹದ ಮೇಲಿದ್ದ ಬಟ್ಟೆಯ ಆಧಾರದ ಮೇಲೆ ನೋಡಿ.. ಇದು ನನ್ನ ಪತಿ ಭರತ್ ಎಂಬುದನ್ನ ಖಚಿತಪಡಿಸಿದ್ದಾರೆ ಅಲ್ಲದೆ ಈ ಸಾವಿನ ಕುರಿತು ಅನುಮಾನವಿದ್ದು ಸೂಕ್ತ ತನಿಖೆ ನಡೆಸುವಂತೆ ದೂರನ್ನು ದಾಖಲಿಸಿದ್ದಾರೆ.