ಗಜೇಂದ್ರ ಸ್ವಾಮಿ, ಶಿವಮೊಗ್ಗ, 9448256183
ರಾಜ್ಯ ಹಾಗೂ ರಾಷ್ಟ್ರಮಟ್ಟದ ಚುನಾವಣೆಗಳಲ್ಲಿ ಭಾರಿ ಪ್ರಮಾಣದ ಅಕ್ರಮದ ಹಣ ಹರಿದಾಡುವುದು, ಮತದಾರರನ್ನು ಮಂಗ ಮಾಡುವುದು ಸಾಮಾನ್ಯ. ಇದು ಎಲ್ಲರ ನಡುವೆ ನಡೆಯುವ ಬಾರಿ ಪ್ರಮಾಣದ ವಂಚನೆ ಮೋಸ ಹಾಗೂ ಮತದಾರರ ಮನಸ್ಸನ್ನು ಕದಡಿ ಹೊಲಸಿನ ಗೋಪುರವನ್ನು ಕಟ್ಟುವ ಹುನ್ನಾರ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟ ಮತ್ತು ಗ್ರಾಮ ಮಟ್ಟಗಳಲ್ಲಿ ನಡೆಯುವ ಇತರೆ ಚುನಾವಣೆಗಳಲ್ಲೂ ಸಹ ಹೆಂಡ ಕೋಳಿ, ಮಿಕ್ಸಿ, ಫ್ಯಾನು, ಸೀರೆ ಎಲ್ಲಾ ಹರಿದಾಡುತ್ತಿವೆ. ಆದರೆ, ತುಂಬಾ ಸುಲಭವಾಗಿ ಸರಳವಾಗಿ ನಡೆಯುತ್ತಿದ್ದ ಸಹಕಾರ ಸಂಘಗಳ ಅದರಲ್ಲೂ ಸೌಹಾರ್ದ ಹಾಗೂ ಸಹಕಾರಿ ಸೊಸೈಟಿಗಳಲ್ಲಿ ನಡೆಯುವ ಚುನಾವಣೆಗಳು ನಿಜಕ್ಕೂ ಈ ಮೊದಲು ಅರ್ಥಪೂರ್ಣವಾಗಿದ್ದವು. ಸರ್ವ ಸದಸ್ಯರಾಗಿದ್ದವನ್ನು, ಕಾಪಾಡುವವರನ್ನು ಆಯ್ಕೆ ಮಾಡುತ್ತಿದ್ದರು. ಅವಿರೋಧ ಆಯ್ಕೆ ಪ್ರಮಾಣವೇ ಹೆಚ್ಚಾಗಿತ್ತು. ಆದರೆ ಈಗ ಅದು ಸಂಪೂರ್ಣ ಬದಲಾಗಿದೆ. ಹಳಬರು ಹೊಸಬರಿಗೆ ಅವಕಾಶ ನೀಡದ ಹಿನ್ನೆಲೆ ಒಂದೆಡೆಯಾದರೆ, ಹೊಸಬರ ತೀರಾ ಅರ್ಜೆನ್ಸಿಗಳು ನಾನಾ ಬಗೆಯ ಹೊಸ ಹೊಸ ಲೆಕ್ಕಾಚಾರಗಳನ್ನು ಬೆಳೆಸಿಕೊಂಡಿದೆ.
ಇತ್ತೀಚಿನ ದಿನಮಾನಗಳಲ್ಲಿ ರೊಕ್ಕವಿಲ್ಲದವನು ಸಣ್ಣದೊಂದು ಸೊಸೈಟಿಗೆ ನಿರ್ದೇಶಕನಾಗಿ ಗೆಲ್ಲಲಾರ, ನಿಲ್ಲಲಾರ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?.
ಈ ಚುನಾವಣೆಯನ್ನು ಗಮನಿಸಿದಾಗ ಕಾಣಬಾರದಷ್ಟು ಅವರ ಚಿತ್ರಗಳ ಪ್ಲೆಕ್ಸಿಗಳು ರಾರಾಜಿಸಿದ್ದವು. ಜನ ಯಾವುದಕ್ಕೂ ಗೌರವಿಸಲಿಲ್ಲ. ಅಂತಯೇ ಸಗಣಿಯನ್ನೂ ತೂರಲಿಲ್ಲ. ಮಾಡಲು ಕೆಲಸವಿಲ್ಲದವು ಎಂದುಕೊಂಡು ಸುಮ್ಮನೂ ಇರಲಿಲ್ಲ. ಗೆಲ್ಲಿಸುವಂತಹವರನ್ನು ಗೆಲ್ಲಿಸಿ ಮತದಾರ ಪ್ರಭುದ್ಧವಾಗಿ ಕೆಲಸ ಮಾಡಿದರೂ ಸಹ ವ್ಯವಸ್ಥೆ ಹಣ ಹೆಂಡ ಹಾಗೂ ವಸ್ತುಗಳ ರೂಪದಲ್ಲಿ ಬದಲಾಗುತ್ತಿರುವುದು ನಿಜಕ್ಕೂ ಮುಖ್ಯವಾಗಿ ಮುಖ್ಯವಾಗಿ ನಮ್ಮ ನಡುವೆ ಬದುಕನ್ನು ಕಟ್ಟಿಕೊಟ್ಟವರು ಜನರ ವಾಸ್ತವಗಳನ್ನು ಹೇಗೆ ತಾನೇ ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯ. ಬರುವ ಚುನಾವಣೆಗೆ ಈಗಾಗಲೇ ಎಷ್ಟುಬೇಕು ಅಂತ ಹಣದ ಲೆಕ್ಕಾಚಾರ ಎಲ್ಲೆಡೆ ನಡೆದಿದೆ. ಆದರೆ ಆ ಹಣದ ಪ್ರಮಾಣ ಎಷ್ಟು ಬಗೆಯಲ್ಲಿ ಇರುತ್ತದೆ ಎಂದರೆ ಅಲ್ಲಿ ಸೋತವನು ಸತ್ತು ಹೋಗುತ್ತಾನೆ. ಗೆದ್ದವನು ಸೋಲುತ್ತಾನೆ ಎಂಬ ಮಟ್ಟಕ್ಕೆ ಇಂತಹ ಸಣ್ಣಪುಟ್ಟ ಚುನಾವಣೆಗಳು ನಮ್ಮ ನಡುವೆ ಕಾಣಿಸಿಕೊಳ್ಳುತ್ತಿರುವುದು ದುರಂತದ ಸಂಗತಿ ಹೌದಲ್ಲವೇ?