– ಹೊಸ ಆಭರಣಗಳ ಖರೀದಿ ಹಾಗೂ ಹಳೆ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶ
ಬೆಂಗಳೂರು ಜ 18: ದೇಶದ 40 ಹೆಸರಾಂತ ಆಭರಣ ತಯಾರಕರು ಭಾಗವಹಿಸಿರುವ ಪ್ರತಿಷ್ಠಿತ “ದ ಜ್ಯುವೆಲರಿ ಷೋ” ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜನಪ್ರಿಯ ಸ್ಯಾಂಡಲ್ವುಡ್ ನಟಿಯಾದ “ಆರಾಧನಾ” ಅವರು ಇಂದು ಚಾಲನೆ ನೀಡಿದರು.
ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು ಹಾಗೂ ಅತ್ಯುತ್ತಮ ಹೂಡಿಕೆಯೂ ಇದಾಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಹೆಸರಾಂತ ಆಭರಣ ತಯಾರಕರು ತಮ್ಮ ಅಮೋಘ ಕಲೆಯಿಂದ ತಯಾರಿಸಿರುವ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದಲ್ಲಿ ಅವಕಾಶವಿದೆ. ಭಾರತ ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ಲಭ್ಯವಿದ್ದು ಸಾರ್ವಜನಿಕರು ಈ ಅವಕಾಶವದ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮೇಳದ ಆಯೋಜಕರಾದ ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ್ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಮಾತನಾಡಿ, ಜನವರಿ 17, 18 ಮತ್ತು 19 ರಂದು ನಗರದ ಶೆರಟನ್ ಗ್ರಾಂಡ್ ಹೋಟೇಲ್ ನಲ್ಲಿ ಈ ಅಮೋಘ ಭಾರತೀಯ ಒಡವೆಗಳ ಉತ್ಸವವನ್ನು ಆಯೋಜಿಸಲಾಗಿದೆ. ದೇಶದ ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಿದ್ದು, ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೇ ಕಲ್ಪಿಸಲಾಘಿದೆ. ಆಭರಣ ಮಳಿಗೆಳ ಸದಸ್ಯರು ಚಿನ್ನಾಭರಣ ಮತ್ತು ವಜ್ರಾಭರಣಗಳ ಬಗ್ಗೆ ಎಲ್ಲಾ ತರಹದ ಮಾಹಿತಿಯನ್ನು ಉಚಿತವಾಗಿ ನೀಡಲಿದ್ದಾರೆ. ಇಲ್ಲಿ ಖರೀದಿಸಲಾಗುವ ಆಭರಣಗಳಿಗೆ ಮೇಳದ ನಂತರವೂ ಸೇವೆಯನ್ನು ಒದಗಿಸಲಾಗುವುದು ಎಂದಿದ್ದಾರೆ.
ಬೆಂಗಳೂರಿನ ಅನನ್ಯ ಜ್ಯುವೆಲ್ಸ್, ಬಿ ಎನ್ ಆರ್, ದವನಂ, ಗಜರಾಜ್, ಕಳಸ, ಎಂ ಆರ್ ಕೆ ಜೀವಾರ್, ನೀಲಕಂಠ, ನಿಕಾರ್, ಪಿ ಎಂ ಜೆ, ಪ್ರಕಾಶ್ ಜ್ಯುವೆಲರ್ಸ್, ಸಿಂಹ ಜ್ಯುವೆಲರ್ಸ್, ಶ್ರೀ ಗಣೇಶ್ ಡೈಮೆಂಡ್ಸ್, ವರಶ್ರೀ, ನೈನ್ ಜ್ಯುವೆಲ್ಸ್, ರಾಜಿ ಜ್ಯುವೆಲರಿ, ರೋಹಿಣಿ ಡೈಮೆಂಡ್ಸ್, ಸಂಕೇಶ್ ಸುರಾನ, ಸಪ್ತೋಷಿ, ವಿನ್ಯಾಸ, ಟ್ರೈ ಡೈಯಾ, ವಂಡರ್ ಡೈಮೆಂಡ್ಸ್, ಮೈ ಸಿಲ್ವರ್, ರೂಪಂ ಸಿಲ್ವರ್, ಸಾಂಚೀಸ್, ಸ್ಟೈಲ್ ಔರಾ, ಮದನ್ ಜೆಮ್ಸ್, ದಗಿನಾ ಜ್ಯುವೆಲರ್ಸ್ (ಸೂರತ್), ಪನ್ನ ಜ್ಯುವೆಲರ್ಸ್ (ಹೈದರಾಬಾದ್), ಅರಹಮ್ (ಕೊಲ್ಕತ್ತ), ಔರಾ ಬೈ
ಸುರಾನ, ಶ್ರೀ ಪಾರಾಮನಿ, ಶ್ರೀಹರಿ ಡೈಯಾಜೆಮ್ಸ್ (ನವದೆಹಲಿ), ಸುವರ್ಣರಾಜ್, ಸ್ಯಾಂಜಾನಿ (ಮುಂಬೈ), ಜೈನಾ ಜ್ಯುವೆಲ್ಸ್ (ಹರಿಯಾಣ), ಸುನೀಲ್ ಜ್ಯುವೆಲರ್ಸ್, ಮಂಗಳ್ ಜೆಮ್ಸ್ (ಜೈಪುರ್), ಸ್ರಸ್ಠ, ನಿತ್ಯಾಸ್ (ವಿಶಾಕಪಟ್ಟಣಂ), ಬಾಲಾಜಿ ಪರ್ಲ್ಸ್ (ಚೆನೈ) ಆಭರಣ ಮಳಿಗೆಗಳು ಭಾಗವಹಿಸಿವೆ. ಗ್ರಾಹಕರು ತಮ್ಮ ಅಭಿರುಚಿ ಮತ್ತು ಬಜೆಟ್ಗನುಗುಣವಾಗಿ ಆಭರಣಗಳನ್ನು ಖರೀದಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.