ಶಿವಮೊಗ್ಗ, ಜ.10:
ತಾಲ್ಲೂಕಿನ ಹಾಡೋನಹಳ್ಳಿ ಸಮೀಪದ ತುಂಗಾಭದ್ರ ನದಿಯಲ್ಲಿ
ಅಕ್ರಮ ಮರಳು ಗಣಿಗಾರಿಕೆ ಅಡ್ಡೆಯ ಮೇಲೆ ತಹಶೀಲ್ದಾರ್ ವಿ.ಎಸ್ ರಾಜೀವ್ ನೇತೃತ್ವದ ತಂಡ ದಾಳಿ ನಡೆಸಿ
50 ಲಾರಿ ಲೋಡ್ ಮರಳು ವಶಪಡಿಸಿಕೊಂಡಿದೆ.
ಗಣಿ ಮತ್ತುಭೂ ವಿಜ್ಞಾನ ಇಲಾಖೆ ಹಾಗೂ ಗ್ರಾಮಾಂತರ ಪೋಲಿಸರ ತಂಡ ಸಹ ಕಂದಾಯ ಇಲಾಖೆ ನೇತೃತ್ವದ ತಂಡದೊಂದಿಗೆ ಇದ್ದವು.
ಅವರ ದಾಳಿಯ ಖಚಿತ ಮಾಹಿತಿ ಅರಿತ ಮರಳು ದಂಧೆಕೋರರು
ಜಾಗದಿಂದ ವಾಹನ ಸಮೇತ ಪರಾರಿಯಾಗಿದ್ದರು. ಅಲ್ಲಿ ಹೇಳುವವನಾರು ಎಂಬುದನ್ನು ಹುಡುಕಬೇಕಿದೆ.
ನದಿಯಂಚಿನಲ್ಲಿ
ಅಕ್ರಮವಾಗಿ ದಾಸ್ತಾನು ಮಾಡಿದ್ದ ಭಾರೀ ಪ್ರಮಾಣದ ಮರಳನ್ನು ಅಧಿಕಾರಿಗಳು
ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಮರಳನ್ನು
ತಾಲ್ಲೂಕು ಅಡಳಿತವು
ಪಿಡಬ್ಲ್ಯೂಡಿ ಇಲಾಖೆಗೆ ಒಪ್ಪಿಸಿದೆ.
ಈ ದಾಳಿಯಿಂದ ಹಾಡೋನಹಳ್ಳಿ ಸುತ್ತಾಮುತ್ತಾ ತುಂಗಾ ಭದ್ರನದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ ಅಷ್ಟೆ.