ಶಿವಮೊಗ್ಗ ಜ.10: ಆಕಸ್ಮಿಕವಾಗಿ ಚಾನಲ್ಗೆ ಬಿದ್ದಿದ್ದ ಕುದುರೆಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಆಲ್ಕೊಳ ಸಮೀಪದ ಗೋಲ್ಡನ್ ಸಿಟಿ ಲೇಔಟ್ ಬಳಿ ಇಂದು ಸಂಜೆ ಕಾರ್ಯಾಚರಣೆ ನಡೆಸಿ, ಕುದುರೆಯನ್ನು ಮೇಲೆತ್ತಲಾಗಿದೆ.
ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಮೇಯಲು ಹೋಗಿದ್ದ ಕುದುರೆ ಮೂರು ದಿನದ ಹಿಂದೆ ಆಯ ತಪ್ಪಿ ಚಾನಲ್ಗೆ ಬಿದ್ದಿರುವ ಸಾಧ್ಯತೆ ಇದೆ. ಹಾಗಾಗಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು.
ಜೀವದ ಹಂಗು ತೊರೆದು ರಕ್ಷಣೆ
ಕತ್ತಲಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಹರಸಾಹಸ ಪಡಬೇಕಾಯಿತು. ಅಲ್ಲದೆ ಅತ್ಯಂತ ಆಳವಿದ್ದರಿಂದ ಸಿಬ್ಬಂದಿ ರೋಪ್ ಬಳಸಿ ಚಾನಲ್ಗೆ ಇಳಿದು ಕಾರ್ಯಾಚರಣೆ ನಡೆಸಿದರು. ರೋಪ್, ಲ್ಯಾಡರ್ ಬಳಿಸಿ ಕುದುರೆಯನ್ನು ಮೇಲೆತ್ತಲಾಗಿದೆ. ಸದ್ಯ ಕುದುರೆ
ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.