ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ವಿವಿಧ ಇಲಾಖಾವಾರು ಪ್ರಗತಿಪರಿಶೀಲನಾ ಸಭೆಯನ್ನು ಶಾಸಕ ಬಿ.ಎಸ್. ಚನ್ನಬಸಪ್ಪ ನಡೆಸಿದರು.
ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಶಾಸಕರು ಪ್ರಗತಿ ಪರಿಶೀಲನಾ ಸಭೆಯನ್ನುನಡೆಸಿದ್ದು, ಹಲವು ವಿಚಾರಗಳನ್ನು ಚರ್ಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಮತ್ತು ಡಾ. ಧನಂಜಯ್ ಸರ್ಜಿ, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ, ಉಪ ಆಯುಕ್ತರು( ಆಡಳಿತ) ತುಷಾರ್ ಹೊಸೂರ್ ಸೇರಿದಂತೆ ಇಲಾಖಾವಾರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಏನೆಲ್ಲಾ ಚರ್ಚೆಯಾಯ್ತು?
- ಇ-ಆಸ್ತಿ ಪ್ರಗತಿಯ ಕುರಿತು ಚರ್ಚೆ
- ಶಿವಮೊಗ್ಗ ನಗರದ ವಿದ್ಯುತ್ ವಿಭಾಗಗಳ ಸೌಕರ್ಯಗಳ ಬಗ್ಗೆ ಚರ್ಚೆ
- ಆರೋಗ್ಯ ವಿಭಾಗಕ್ಕೆ ಸಂಬAಧಿಸಿದAತೆ ಆರೋಗ್ಯ ವಿಭಾಗದ ಸೌಕರ್ಯಗಳ ಕುರಿತು ಚರ್ಚೆ
- ಸ್ಮಾರ್ಟ್ ಸಿಟಿ ಯೋಜನೆ ಮತ್ತು ಮಹಾನಗರ ಪಾಲಿಕೆಗೆ ಹಸ್ತಾಂತರದ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ಅನೇಕ ವಿಷಯಗಳ ಚರ್ಚೆ
- ಮಹಾನಗರ ಪಾಲಿಕೆ ವ್ಯಾಪ್ತಿಯ ಸಿವಿಲ್ ಕಾಮಗಾರಿಗಳ ಪ್ರಗತಿ ಪರಿಶೀಲನ ಬಗ್ಗೆ ಚರ್ಚೆ
- ಸರ್ಕಾರದ ಯೋಜನೆಗಳು ಮತ್ತು ಮುಜುರಾಯಿ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಚರ್ಚೆ
- ಗಾಂಧಿ ಪಾರ್ಕ್ ಮತ್ತು ಶಿವಮೊಗ್ಗ ನಗರದ ಇತ್ಯಾದಿ ಉದ್ಯಾನವನಗಳಿಗೆ ಅಭಿವೃದ್ಧಿಯ ಬಗ್ಗೆ ಚರ್ಚೆ
- ಶಾಲಾ-ಕಾಲೇಜುಗಳ ಆಸ್ತಿಗಳನ್ನು ಖಾತೆ ದಾಖಲಿಸುವ ಬಗ್ಗೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಶಿP್ಷÀಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳ ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚೆ
- ಕೊಳಗೇರಿಗಳ ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಚರ್ಚೆ
- ಮಹಾನಗರ ಪಾಲಿಕೆಯ ಮಳಿಗೆಗಳು, ಬಟ್ಟೆ ಮಾರ್ಕೆಟ್, ಮೈದಾನದ ಸಂಬAಧಿಸಿದ ವಿಷಯಗಳ ಬಗ್ಗೆ ಚರ್ಚೆ