ಭದ್ರಾವತಿ,ಜ.07:
ತೋಟದ ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ಪದವಿ ಓದುತ್ತಿದ್ದ ರೈತರ ಮಗ, ಯುವಕ ಬಲಿಯಾಗಿರುವ ಘಟನೆ ನಿನ್ನೆ ನಡೆದಿದೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಕನಸಿನ ಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ದರ್ಶನ್(21) ಎಂದು ಗುರುತಿಸಲಾಗಿದೆ.
ಪಂಪ್ ಸೆಟ್ ಆನ್ ಮಾಡಲು ಹೋದಾಗ ನಡೆದ ದುರ್ಘಟನೆ ನಡೆದಿದ್ದು, ಶಾಕ್ ತಗುಲಿ ದರ್ಶನ್ ಮೃತಪಟ್ಟಿದ್ದಾನೆ.
ದರ್ಶನ್ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿದ್ದನು. ಹೊಳೆಹೊನ್ನೂರು ಸಮೀಪದ ಕೊಪ್ಪದ ಪದವಿ ಕಾಲೇಜಿನಲ್ಲಿ ದರ್ಶನ್ ವಿದ್ಯಾಭ್ಯಾಸ ನಡೆಸುತ್ತಿದ್ದರು.
ಮೃತ ದರ್ಶನ್, ಕನಸಿನಕಟ್ಟೆ ಗ್ರಾಮದ ಮಲ್ಲಿಕಾರ್ಜುನ್ ಎಂಬುವರ ಪುತ್ರನಾಗಿದ್ದಾನೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದ ಹಾಗೂ ಆ ಸರಹದ್ದಿನ ಜನರ ಆಕ್ರಂದನ ಮುಗಿಲು ಮುಟ್ಟಿದೆ. ರೈತಾಪಿ ಬದುಕೇ ಇಷ್ಟೇನಾ?