ಶಿವಮೊಗ್ಗ ಜ.೦7 ರಿಪ್ಪನ್‌ಪೇಟೆ:-ಆಲುವಳ್ಳಿ ಮತ್ತು ಕಮದೂರು ಗ್ರಾಮಗಳಲ್ಲಿ ಶನಿವಾರ ರಾತ್ರಿ ರೈತರ ಗದ್ದೆ, ತೋಟಗಳಿಗೆ ದಾಳಿ ನಡೆಸಿದ ಕಾಡಾನೆಗಳು ರೈತರ ಬೆಳೆಗಳನ್ನು ಹಾನಿಗೊಳಿಸಿದೆ. ಆಲುವಳ್ಳಿ ಗ್ರಾಮದ ರಾಜೇಶ್ ಜೈನ್‌ರವರ ಅಡಿಕೆ ತೋಟಕ್ಕೆ ನುಗ್ಗಿದ್ದ ಕಾಡಾನೆಗಳು ಕೆಲವು ಅಡಿಕೆ ಮರಗಳನ್ನು ಮುರಿದು ಹಾನಿಗೊಳಿಸಿದರೆ, ಬಾಳೆ ಮರಗಳನ್ನು ತಿಂದು ಹಾನಿಗೊಳಿಸಿವೆ. ಇನ್ನೊಬ್ಬ ಕಮದೂರು ರೈತ ಲಿಂಗರಾಜ್‌ರವರ ೬ ವರ್ಷದ ಅಡಿಕೆ ತೋಟಕ್ಕೆ ದಾಳಿ ನಡೆಸಿದ್ದು ಸುಮಾರು ೧೦೦ ಕ್ಕೂ ಅಧಿಕ ಅಡಿಕೆ ಮರಗಳನ್ನು ನಾಶಪಡಿಸಿವೆ. ಮೂರ‍್ನಾಲ್ಕು ಕಾಡಾನೆಗಳಿವೆ ಎಂದು
ಹೇಳಲಾಗುತ್ತಿದ್ದು, ಬೆಳೆನಷ್ಟದಿಂದ ಕಂಗಾಲಾಗಿರುವ ರೈತರು ಮುಂದಿನ ಜೀವನದ ಚಿಂತೆಯಲ್ಲಿದ್ದು ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಬೇರೆಡೆ ಬೆನ್ನಟ್ಟಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿ ಈ ಭಾಗದ ಜನರ ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಕಾಡಾನೆ ಬೆನ್ನಟ್ಟುವ ಕಾರ್ಯ: ರೈತರ ಹೊಲಗದ್ದೆಗಳಿಗೆ ದಾಳ ಇಡುತ್ತಿರುವ ಮಾಹಿತಿ ಅರಿತ ಅರಣ್ಯ ಇಲಾಖ ಸಿಬ್ಬಂದಿಗಳು ಭಾನುವಾರ ಮುಂಜಾನೆಯಿಂದಲೆ ಕಾಡಾನೆಗಳನ್ನು ಬೇರೆಡೆ ಬೆನ್ನಟ್ಟುವ ಕಾರ್ಯಾಚರಣೆ ನಡೆಸಿದರು. ಸಾಗರ ಡಿಸಿಎಫ್
ಮೋಹನ್‌ಕುಮಾರ್ ನೇತೃತ್ವದಲ್ಲಿ ಸಾಗರ ಎಸಿಎಫ್ ಕೆ. ರವಿ, ಅರಸಾಳು ಆರ್‌ಎಫ್‌ಓ ಶರಣಪ್ಪ, ಚೋರಡಿ ಆರ್‌ಎಫ್‌ಓ ರವಿಕುಮಾರ್, ನಗರ ಆರ್‌ಎಫ್‌ಓ ಮಲ್ಲನಗೌಡ, ಡಿಆರ್‌ಎಫ್‌ಗಳಾದ ಮಹೇಶನಾಯ್ಕ, ಚಂದ್ರಶೇಖರ, ಇನ್ನಿತರ ನೂರಾರು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.