ಶಿವಮೊಗ್ಗ: ಜನಸಾಮಾನ್ಯರಿಗೆ ಅತಿ ಮುಖ್ಯವಾದ ರೇಷನ್ ಕಾರ್ಡ್ ಅಂದರೆ ಪಡಿತರ ಕಾರ್ಡ್ ನೀಡುವ ಆಹಾರ ಇಲಾಖೆ ಅದನ್ನು ಯಾವುದೇ ಹಣವಿಲ್ಲದೆ ಸಿದ್ಧಪಡಿಸಿದ ಕಾರ್ಡ್ ನೀಡುವುದು ವಾಡಿಕೆ. ಅದಕ್ಕೆ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರಿಂಟಿಂಗ್ ಮಿಷನ್ ಹಾಗೂ ಅದಕ್ಕೆ ಅಗತ್ಯವಿರುವ ಟೋನರ್ ಕೊಡಿಸುತ್ತದೆ .ಆದರೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕಾರ್ಡ್ ಪಡೆಯುವಾಗ, ಬದಲಿಸಿದಾಗ ಕಾರ್ಡ್ ಸಿಗೊಲ್ಲ.
ಶಿವಮೊಗ್ಗ ಗೋಪಾಳ ಹೊರವಲಯದಲ್ಲಿರುವ ಶಿವಮೊಗ್ಗ ನಗರದ ಜನರಿಗೆ ಪಡಿತರ ಚೀಟಿ ಕೊಡೋದಿಲ್ಲ. ಬದಲಾವಣೆಗೆ ಸತಾಯಿಸ್ತಾರೆ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿನ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಗೆ ಈ ಬಗ್ಗೆ ಮಾಹಿತಿ ಇದೆ. ಅವರು ಯಾಕೆ ಸುಮ್ಮನಿದ್ದಾರೆ ಗೊತ್ತಿಲ್ಲ. ಪ್ರಿಂಟಿಂಗ್ ಮಿಷನ್ ಇಲ್ಲ. ಟೋನರ್ ಇಲ್ಲ ನೀವು ಸೈಬರ್ ಸೆಂಟರ್ ಗೆ ಹೋಗಿ ಅಲ್ಲಿ ಕಾಡು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಸುಮಾರು ನೂರಿನ್ನೂರು ರೂ ಖರ್ಚು ಮಾಡಿಕೊಂಡು ಕಚೇರಿಗೆ ಹೋಗಿ ಕಾರ್ಡ್ ಸಿದ್ಧಪಡಿಸಿಕೊಂಡವರಿಗೆ ಬರುವ ಕೊನೆಯ ಪದ ಇದು.
ಸರ್ಕಾರ ಆಹಾರ ಇಲಾಖೆಗೆ ಸಂಬಂಧಪಟ್ಟಂತೆ ಅತ್ಯಂತ ಮುತುವರ್ಜಿ ವಹಿಸಿದ್ದು ಯಾವುದೇ ಕೊರತೆಗಳು ಇಲ್ಲದಂತೆ ನೋಡಿಕೊಂಡಿದೆ ಎನ್ನುವುದು ಒಂದು ಕಡೆಯ ಮಾತು. ಆದರೆ ಶಿವಮೊಗ್ಗ ನಗರದ ಜನಕ್ಕೆ ಮಾತ್ರ ಈ ಅವಕಾಶ ಇಲ್ಲ. ಪ್ರಿಂಟಿಂಗ್ ನ ಟೋನರ್ ನಲ್ಲಿ ಪುಕ್ಸಟ್ಟೆ ಲೆಕ್ಕ ಬರೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ರೇ?ನ್ ಕಾರ್ಡ್ ನಲ್ಲಿ ಕೆಲವರ ಹೆಸರನ್ನು ಸೇರ್ಪಡೆಗೊಳಿಸುವುದು, ಕೆಲವರ ಹೆಸರನ್ನು ತೆಗೆದುಹಾಕುವುದು, ರೇ?ನ್ ಸ್ಟೋರ್ ಗಳ ವಿಳಾಸವನ್ನು ಬದಲಿಸುವುದು ಬಹಳ? ಕಡೆ ಮಾಮೂಲಿ. ಅ? ದೂರ ಕ?ಪಟ್ಟು ನಾಲ್ಕೈದು ಬಾರಿ ಹೋಗಿ ಕಾರ್ಡ್ ಸಿದ್ಧಪಡಿಸಿಕೊಂಡರೆ ನಂತರ ಹೇಳುವ ಪದ ಸೈಬರ್ ಸೆಂಟರ್ ಗೆ ಹೋಗಿ.
ಹೀಗೆ ಹೇಳುವುದಾದರೆ ಇಲ್ಲಿಯವರೆಗೂ ಈ ಇಲಾಖೆಯವರು ಇದರ ಲೆಕ್ಕ ಬರೆದಿಲ್ಲವೇ? ಹಣ ಪಡೆದಿಲ್ಲವೇ?
ಅದೆ? ಕಡೆ ಈಗಲೂ ಅಕ್ಕಿ ಕಳ್ಳ ವ್ಯಾಪಾರ ನಿರಂತರವಾಗಿ ನಡೆಯುತ್ತಿದೆ. ಗೊತ್ತಿದ್ದರೂ ಗೊತ್ತಿಲ್ಲದಂತೆ ಸುಮ್ಮನಿರುವುದು ಏಕೆ? ಎಲ್ಲಾ ಅಂಗಡಿಗಳಲ್ಲಿ ಎಂದು ಹೇಳಲಾಗುವುದಿಲ್ಲ. ಆದರೆ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಚೀಲಗಳು ರೇ?ನ್ ಬಂದ ತಕ್ಷಣ ಬದಲಾವಣೆಯಾಗುತ್ತವೆ ಮಾಮೂಲಿ ಸರ್ಕಾರ ಕೊಡಮಾಡಿದ ಚೀಲ ಬಿಳಿ ಚೀಲಕ್ಕೆ ಬದಲಾಗಿ ಹೇಗೆ ತಾನೇ ಎಲ್ಲಾ ಕಡೆ ಹೋಗುತ್ತದೆ.
ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು, ಉಪನಿರ್ಧೇಶಕರು ಈ ಕೂಡಲೇ ಗಮನ ಹರಿಸಿ ಆಹಾರ ಇಲಾಖೆಗೆ ಸೂಚನೆ ನೀಡುವ ಜೊತೆಗೆ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಕಾರ್ಡ್ ದೊರೆಯುವಂತೆ ಮಾಡಿ ಹಾಗೂ ಕಳ್ಳ ವ್ಯಾಪಾರದ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮೇಲೆ ಒಂದು ಕಣ್ಣು ಇಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.