ಶಿವಮೊಗ್ಗ ಜ.01 : ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ ನಿರತರಾಗಿದ್ದ
ಪೊಲೀಸ್ ಸಿಬ್ಬಂದಿಯೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹೊಸವರ್ಷದ ಅಂಗವಾಗಿ ಕೇಕ್ ಕತ್ತರಿಸಿ ಪೊಲೀಸ್ ಅಧಿಕಾರಿಗಳಿಗೆ ತಿನ್ನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್‌ಕುಮಾರ್ ಭೂಮ್‌ರೆಡ್ಡಿ, ಕಾರ್ಯಪ್ಪ, ಡಿವೈಎಸ್‌ಪಿ ಸುರೇಶ್, ಇನ್ಸ್‌ಫೆಕ್ಟರ್‌ಗಳಾದ
ಗುರುರಾಜ್, ಪಾಟೀಲ್, ಹರೀಶ್ ಪಾಟೀಲ್, ಟ್ರಾಫಿಕ್ ಇನ್ಸ್‌ಫೆಕ್ಟರ್ ಸಂತೋಷ್, ವಿನೋಬನಗರ ಠಾಣಾ ಇನ್ಸ್‌ಫೆಕ್ಟರ್ ಚಂದ್ರಕಲಾ ಸೇರಿದಂತೆ ಶಿವಮೊಗ್ಗ ಪೊಲೀಸ್ ಉಪವಿಭಾಗದ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಹೊಸ ವರ್ಷದ ಸಂಭ್ರಮದಲ್ಲಿ ಭಾಗವಹಿಸಿದ್ದರು.