ಶಿವಮೊಗ್ಗ, ಜ.01:
ನಮ್ಮಲ್ಲಿ ಸರಿಯಾದ ಸಂಸ್ಕಾರ ಇಲ್ಲದಿದ್ದರೆ ಪಡೆದ ಶಿಕ್ಷಕ್ಕೇನು ಬೆಲೆ? ಇಂದು ಪಠ್ಯದ ಜೊತೆ ಓದಿ ಹೆಚ್ಚಿನ ಅಂಕಪಡೆಯುವ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆ ಮಕ್ಕಳಲ್ಲಿ ನೈತಿಕತೆ, ಧಾರ್ಮಿಕತೆ, ಆದ್ಯಾತ್ಮಿಕತೆ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಕೆಲಸ ಅಗಬೇಕು ಎಂದು ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು  ತಿಳಿಸಿದರು.


ಅವರಿಂದು ಮದ್ಯಾಹ್ನ ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ನಡೆದ ಮಕ್ಕಳಿಂದ ತಂದೆ ತಾಯಿಯರಿಗೆ ಪಾದಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಇಂದಿನ ಜಗತ್ತಿನಲ್ಲಿ ಭ್ರಷ್ಟಾಚಾರ ದುರಾಚಾರಗಳು ಹೆಚ್ಚುತ್ತಿದ್ದು, ಇದನ್ನು ವಿದ್ಯೆ ಇಲ್ಲದ ಯಾವುದೋ ಕೂಲಿಕಾರ, ಕೃಷಿಕ ಮಾಡೋದಿಲ್ಲ. ಸಾಕಷ್ಟು ದೊಡ್ಡ ದೊಡ್ಡ ವಿದ್ಯಾಭ್ಯಾಸ ಮಾಡಿ ಪದವಿ ಪಡೆದವರು ಇಂತಹ ದುರಾಚಾರಗಳಿಗೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಸಂಸ್ಕಾರ ಇಲ್ಲದಿರುವುದು. ಅವರಿಗೆ ಸಕಾಲದಲ್ಲಿ ಸಂಸ್ಕಾರ ದೊರೆಯದಿರುವುದು ಎಂದರೆ ತಪ್ಪಾಗಲಿಕ್ಕಿಲ್ಲ. ಈ ನಿಟ್ಟಿನಲ್ಲಿ ರಾಮಕೃಷ್ಣ ಶಾಲೆಯ ಕಾರ್ಯಕ್ರಮ ನಿಜಕ್ಕೂ ಅರ್ಥಗರ್ಭಿತವಾದದ್ದು ಎಂದರು.


ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯಾಗು ಕಂದ ಎಂದ ತಾಯಿಯ ಮಾತನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ಅದಕ್ಕೆ ಪೋಷಕರು ಸಹ ಪೂರಕವಾದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳು ಮೊದಲು ತಂದೆ ತಾಯಿಯರನ್ನು ಅನುಕರಿಸುತ್ತಾರೆ


 ಇಲ್ಲಿಯವರೆಗೆ ಮಾಡಿದ ದುರಾಭ್ಯಾಸಗಳನ್ನು ಇಂದಿನಿಂದಲಾದರೂ ಬಿಟ್ಟು ಬಿಡುವ ಬಿಡುವ ಕಂಕಣ ತೊಟ್ಟುಕೊಳ್ಳಿ ಎಂದರು.
ಇಂದಿನ ದಿನಮಾನಗಳಲ್ಲಿ ಕೆಲವರ ದೇಹ ಕೊಳಚೆಗುಂಡಿಯಾಗಿದೆ.ಕುಡಿಯ ಬಾರದನ್ನು ಕುಡಿಯುವುದು, ತಿನ್ನಬಾರದನ್ನು ತಿನ್ನೋದು ಹೆಚ್ಚಾಗಿರುವುದು ಇದಕ್ಕೆ ಕಾರಣ. ಹಾಗಾಗಿಯೇ ಭಗವಂತನ ಒಲುಮೆಗೆ ಮೀಸಲಾಗಿರುವ ಶರೀರವನ್ನು ಭಗವಂತನಿಗೆ ಅರ್ಪಿಸಲು ಅದು ಪವಿತ್ರವಾಗಿರಬೇಕು ಎಂದು ತಿಳಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!