ಶಿವಮೊಗ್ಗ.ಡಿ.16 : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಜನವರಿಯಲ್ಲಿ ಬದಲಾಗುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಸ್ಥಾನ ಖಾಲಿಯಾಗುವ ನಿರೀಕ್ಷೆ ಇದೆ. ನಾನು ಸಹ ಬಿಹೆಪಿ ರಾಜ್ಯಾಧ್ಯಕ್ಷರ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.
ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ರಾಜ್ಯ ಬಿಜೆಪಿಯ ಭಿನ್ನಮತ ಕೇಂದ್ರದ ವರಿಷ್ಠರು ಗಮನ ಹರಿಸಿದ್ದಾರೆ. ಶೀಘ್ರವಾಗಿ ತೀಕ್ಷ್ಣವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಳೆದ ೩೦ ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಕಾಂಗ್ರೆಸ್ ನ ಅಹಿಂದ ಸಂಘಟನೆಯಿದ್ದು ಅದಕ್ಕೆ ವಿರುದ್ಧವಾಗಿ ಹಾಗೂ ಬಿಜೆಪಿ ಒಬಿಸಿ ಸಂಘಟನೆಯನ್ನ ಹೆಚ್ಚು ಒತ್ತು ನೀಡುವ ಸಲುವಾಗಿ ಒಬಿಸಿ ನಾಯಕರಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಒಬಿಸಿ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಬಂದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ ಎಂದರು.
ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಏನು ಆಗಲಿದೆ ಕಾದು ನೋಡಬೇಕಿದೆ. ಸೊರಬ ತಾಲೂಕಿನಲ್ಲಿ ಐವರು ಬಿಜೆಪಿ ಕಾರ್ಯಕರ್ತರನ್ನ ಉಚ್ಚಾಟಿಸಿರುವ ಕ್ರಮ ಸರಿಯಿಲ್ಲ. ಇದನ್ನ ಜಿಲ್ಲಾಧ್ಯಕ್ಷರ ಮತ್ತು ರಾಜ್ಯ ಕಮಿಟಿಯ ಗಮನಕ್ಕೂ ತಂದಿರುವೆ. ಪ್ರೆಸ್ ಸ್ಟೇಟ್ ಮೆಂಟ್ ಮಾಡಿಕೊಂಡು ಉಚ್ಚಾಟನೆ ಮಾಡಿದ್ದು ಜಿಲ್ಲಾಧ್ಯಕ್ಷರಿಗೆ ಮತ್ತು ರಾಜ್ಯಾಧ್ಯಕ್ಷರಿಗೂ ಹೇಳಿದ್ದೇನೆ.
ಸಂಘಟನೆ ಬಲವರ್ಧನೆಗೊಳ್ಳುವ ಸಂದರ್ಭದಲ್ಲಿ ಉಚ್ಚಾಟನೆ ಸರಿಯಲ್ಲವೆಂಬುದನ್ನ ಸಂಘಟನೆಗಾಗಿ ಬಂದಿದ್ದ ಬಿಜೆಪಿ ತರುಣ್ ಚುಂಗ್ ಬಳಿಯೂ ತಿಳಿಸಿರುವೆ. ಉಚ್ಚಾಟಿತರಾದವರ ಪ್ರಾಥಮಿಕ ಸದಸ್ಯತ್ವ ಮುಂದುವರೆಸುವಂತೆ ಕೋರಲಾಗಿದೆ ಎಂದರು.