ಶಿವಮೊಗ್ಗ : ಸಾಗರ ತಾಲೂಕಿನ ಆನಂದಪುರದಲ್ಲಿ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಕೊಂಡು ನೇಣಿಗೆ ಶರಣಾದ ಘಟನೆ ಸಮೀಪದ ಕೈರಾ ಗ್ರಾಮದಲ್ಲಿ ನಡೆದಿದೆ.
ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈರಾ ಗ್ರಾಮದ ಸಂದೀಪ (33) ಮೃತಪಟ್ಟವನು.
ಸಂದೀಪನಿಗೆ ಮದುವೆಯಾಗಿಲ್ಲವೆಂದು ಮನನೊಂದು ತೋಟದ ಶೆಡ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.