ಶಿವಮೊಗ್ಗ,ಡಿ12: ಕೂಡಲ ಸಂಗಮ ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮಿ ನೇತೃತ್ವದ ಪಂಚಮಸಾಲಿ, ದೀಕ್ಷಾ ಮಲೆಗೌಡ-ಗೌಡ ಲಿಂಗಾಯಿತರಿಗೆ 2ಎ ಹಾಗೂ ಲಿಂಗಾಯಿತ ಓಬಿಸಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದ ಚಳುವಳಿಗಾರರ ಮೇಲೆ ಪ್ರತಿಭಟನಾ ಸಂದರ್ಭದಲ್ಲಿ ಲಾಠಿ ಚಾರ್ಜು ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಶಿವಮೊಗ್ಗ ಶಾಖೆವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮೀಸಲಾತಿ ಹೋರಾಟವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿ ಚಾರ್ಜುನೆಪದಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಕೋಟ್ಯಾಂತರ ಜನರು ದುಃಖ ಅನುಭವಿಸುತ್ತಿದ್ದಾರೆ. ಇದನ್ನು ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. 

ಹೋರಾಟ ಹತ್ತಿಕ್ಕುವ ಹುನ್ನಾರದ ರುವಾರಿ ಸಿಎಂ ಸಿದ್ದರಾಮಯ್ಯನವರೇ ಆಗಿದ್ದು, ಮುಂದಿನ ದಿನಗಳಲ್ಲಿ ಪಂಚಮಸಾಲಿಗಳು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಸ್ವತಃ ಪೊಲೀಸ್ ಮಹಾನಿರ್ಧೇಶಕರಾದ ಆರ್.ಹಿತೇಂದ್ರರವರು ಲಾಠಿ ಹಿಡಿದು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಹಾಗೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು. ಜಗದ್ಗುರುಗಳ ಕ್ಷಮೆ ಕೇಳಬೇಕು. ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಹೋರಾಟಗಾರರ ಮೇಲೆ ಹಾಕಿರುವ ಕೇಸ್‌ನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ, ಶಿವಮೊಗ್ಗ ಇದರ ಮುಖಂಡರಾದ ಹೆಚ್.ವಿ.ಮಹೇಶ್ವರಪ್ಪ, ಜಿ.ಮಾಲತೇಶಪ್ಪ, ಎನ್.ಎಸ್.ಕುಮಾರ್, ಕೆ.ಆರ್. ವೀರೇಶ್, ಮಂಜುನಾಥ್, ವಿಜಯಕುಮಾರ್, ನಂಜುAಡಪ್ಪ, ಬಸವರಾಜಪ್ಪ, ವಿಶ್ವೇಶ್ವರಯ್ಯ, ಎಂ. ದೇವೇಂದ್ರಪ್ಪ, ಡಿ.ಆರ್. ಕೃಷ್ಣಪ್ಪ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!