ಹುಡುಕಾಟದ ವರದಿ- ಸ್ವಾಮಿ
ಶಿವಮೊಗ್ಗ, ಡಿ.೦7:
ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಯೋಜನೆಗಳಡಿ ಹಲವಾರು ಕಾಮಗಾರಿಗಳ ಗುಣಮಟ್ಟ ಕಾಪಾಡಲು ಮೂರನೇ ವ್ಯಕ್ತಿ ಅಥವಾ ಸಂಸ್ಥೆ ತಪಾಸಣೆ ಕುರಿತ ಟೆಂಡರ್ ಪ್ರಕ್ರಿಯೆ ಅಕ್ರಮವಾಗಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ, ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯ ಅಕ್ರಮದ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ನಿಖರ ಮಾಹಿತಿ ತಿಳಿಸಿವೆ.
೧೯-೦೨-೨೦೨೪ ರಂದು ಇಡೀ ವರ್ಷ ತಪಾಸಣೆ ನಡೆಸುವ ಉದ್ದೇಶದಿಂದ ಹಾಕಿದ್ದ ಟೆಂಡರ್ ಅರ್ಜಿಯಲ್ಲಿ ಮೂರು ಸಂಸ್ಥೆಗಳಾದ ಮಹೇಶ್ ಕುಮಾರ್- ಹರ್ಷ ಅಸೋಸಿ ಯೇಟ್ಸ್, ಶಂಕರಪ್ಪ- ಸಿವಿಲ್ ಅಸೋಸಿಯೇಟ್ಸ್ ಮೀನಾಕ್ಷಮ್ಮ ಬಿಎನ್- ವಿಶ್ವಾಸ್ ಕನ್ಸಲ್ಟೆಂಟ್ ಎಂಬುವರು ಟೆಂಡರ್ ನಲ್ಲಿ ಪಾಲ್ಗೊಂಡಿದ್ದರು.
ಸದರಿ ಬಿಡ್ ದಾರರ ತಾಂತ್ರಿಕ ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸಿ ಅದರ ಅನುಮೋದನೆಗಾಗಿ ಅಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಕಾರ್ಯ ಪಾಲಕ ಅಭಿಯಂ ತರರು, ಪಂ.ರಾ.ಇಂ.ವಿಭಾಗ ಶಿವಮೊಗ್ಗ-ಸಾಗರ ಸದಸ್ಯರನ್ನು ಒಳಗೊಂಡಂತೆ ಸಭೆ ಕರೆದು ಮೀನಾಕ್ಷಮ್ಮ ಅವರ ವಿಶ್ವಾಸ್ ಕನ್ಸಲ್ಲ್ಡೆಂಟ್ಸ್ ಅವರ ಟೆಂಡರ್ ಅನುಮೋದಿಸಿ ನೀಡಲಾಗಿತ್ತು.
ಆದರೆ ಆ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹತೆ ಇಲ್ಲದಿದ್ದರೂ ಸಹ ವಿಶ್ವಾಸ್ ಕನ್ಸಲ್ಟೆಂಟ್ಸ್ ಪರಿಗಣ ನೆಗೆ ತೆಗೆದುಕೊಂಡಿದ್ದು ಅದನ್ನು ಅನುಮೋದಿ ಸಿರುವ ವಿರುದ್ಧ ಅಂದಿನಿಂದಲೂ ನಾಯಕ್ ಅವರು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಗ್ರಾಮೀಣಾಭಿವೃದ್ಧಿ ಸಚಿವರು, ಆರ್ ಡಿ ಪಿ ಐ ಗೆ ಸುಮಾರು ೨೦ ಕ್ಕೂ ಹೆಚ್ಚು ಸಲ ದೂರುಗಳನ್ನು ಸಲ್ಲಿಸಿದ್ದರೂ ಸಹ ಅದನ್ನು ಪರಿಗಣಿಸದೆ ವಿಚಾರಣೆಯನ್ನು ನಡೆಸದೇ ಇರುವುದರಿಂದ ಪ್ರಸ್ತುತ ಇದೊಂದು ಅಕ್ರಮ ಟೆಂಡರ್ ಪ್ರಕ್ರಿಯೆ ಹಾಗೂ ಇದೊಂದು ಭಾರಿ ವ್ಯವಹಾರದ ಅನ್ಯಾಯ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ವಿಶ್ವಾಸ್ ಕನ್ಸಲ್ಟೆಂಟ್ಸ್ ನ ಟೆಂಡರ್ ನಲ್ಲಿ ಇರಬೇಕಾದ ೧೪ನೇ ಷರತ್ತಿನ ಮೂರನೇ ವ್ಯಕ್ತಿ ತಪಾಸಣಾ ಮೊತ್ತ ೧೦೦ ಕೋಟಿಯಷ್ಟಿರಬೇಕು. ಆದರೆ ಇವರ ಮೊತ್ತ ೨೦.೭೫ ಕೋಟಿ ಮಾತ್ರ ಹಣವನ್ನು ಲೆಕ್ಕಕ್ಕೆ ತೆಗೆದುಕೊಂಡದ್ದು ತಪ್ಪಾಗಿರುತ್ತದೆ ಅಲ್ಲವೇ? ಇವರು ಹೇಗೆ ಇದರಲ್ಲಿ ಅರ್ಹತೆ ಹೊಂದಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
೨೧ನೇ ಷರತ್ತಿನಲ್ಲಿ ಆರ್ಥಿಕ ವರ್ಷ ೨೦೧೯ ಹಾಗೂ ೨೦ ಮತ್ತು ೨೦-೨೧ರಲ್ಲಿ ೧೦೦ ಲಕ್ಷಕ್ಕಿಂತ ಹೆಚ್ಚು ಇದೆ ಎಂದು ವಿಶ್ವಾಸ ಕನ್ಸಲ್ಟೆಂಟ್ ಮಾಲೀಕರು ತಿಳಿಸಿದ್ದಾರೆ ಆದರೆ ಅಂದು ಎಂಎಂ ಶೇಖರಪ್ಪ ಅವರು ಮಾಲೀಕರಾಗಿದ್ದು ಅವರು ಮಾಡಿದ ಕೆಲಸವನ್ನು ಈಗ ಮೂವರು ಅನ್ಯ ಪಾಲುದಾರರು ತೋರಿಸಿ ಟೆಂಡರ್ ಪ್ರಕ್ರಿಯೆಯನ್ನು ನಡೆಸಲು ಕೋರಿ ಆಯ್ಕೆಯಾಗುವಂತೆ ನೋಡಿ ಕೊಂಡಿದ್ದಾರೆ. ಉದ್ದೇಶ ಪೂರಕವಾಗಿಯೇ ವಿಶ್ವಾಸ್ ಸಂಸ್ಥೆಗೆ ಟೆಂಡರ್ ನೀಡಿರುವುದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಆದ್ದರಿಂದ ಇದನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಕಚೇರಿಯಲ್ಲಿ ನಡೆದ ಕಾರ್ಯಾ ದೇಶದ ಷರತ್ತು ನಿಬಂಧನೆಗಳ ನಾಲ್ಕರಲ್ಲಿ ಎನ್ಎಬಿಎಲ್ ಅಕಾರ್ಡೇಶನ್ ಸರ್ಟಿಫಿಕೇಟ್ ಮಾನ್ಯತೆ ಬಗ್ಗೆ ದೃಢೀಕರಣ ಸಲ್ಲಿಸಬೇಕೆಂದು ತಿಳಿಸಿದರೂ ಸಹ ಇಲ್ಲಿಯವರೆಗೆ ಅವರಿಂದ ದೃಢೀಕರಣ ಪಡೆದುಕೊಂಡಿಲ್ಲ. ಇದು ಶರತ್ತು ೫ ಮತ್ತು ೬ ಪ್ರಕಾರ ಎನ್ ಎ ಬಿ ಎಲ್ ಮಾನ್ಯತೆ ಇಲ್ಲವಾದಲ್ಲಿ ಹಿಂದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧಿಕಾರಿ ನೀಡಿರುವ ಆದೇಶ ತನ್ನಿಂದ ತಾನೇ ರದ್ದಾಗ ಬೇಕಿರುತ್ತದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಟೆಂಡರ್ ನ ೨೩ರ ನಿಯಮದ ಪ್ರಕಾರ ಜಿಪಿಎಸ್ ಫೋಟೋಗ್ರಾಫಿ ಮತ್ತು ವಿಡಿಯೋ ರೆಕಾರ್ಡಿಂಗ್ ಕಡ್ಡಾಯಗೊಳಿಸಲಾಗಿದೆ. ಆದರೆ ಅವರು ವಿಡಿಯೋ ರೆಕಾರ್ಡಿಂಗ್ ಸಲ್ಲಿಸಿರುವ ಬಗ್ಗೆ ಆರ್ ಟಿ ಐ ನಲ್ಲಿ ಕೇಳಿದಾಗ ಯಾವುದೇ ಮಾಹಿತಿ ನೀಡಿರುವುದಿಲ್ಲ. ಅಲ್ಲದೇ ಆರ್ಥಿಕ ಬಿಡ್ ಫಾರಂ ಅನುಬಂಧ ಎರಡು ಮತ್ತು ಐದರ ನಿಯಮದ ಪ್ರಕಾರ ತಪಾಸಣೆ ಮತ್ತು ಡಿಪಿಆರ್ ತಯಾರಿಸಲು ದರವನ್ನು ನಮೂದಿಸಿದ್ದು ವಿಶ್ವಾಸ ಸಂಸ್ಥೆಯವರು ಕೇವಲ ತಪಾಸಣೆ ವರದಿಯನ್ನು ಮಾತ್ರ ನೀಡಿದ್ದಾರೆ. ಡಿಪಿಆರ್ ಅನ್ನು ಪಂ.ರಾ.ಇಂ. ಇಲಾಖೆಯವರೇ ತಯಾರಿಸಿದ್ದಾರೆ.
ಅನುಬಂಧ ನಾಲ್ಕು ರಲ್ಲಿ ಷರತ್ತು ೧೬ ರಲ್ಲಿ ವಿಶ್ವಾಸ್ ಕನ್ಸಲ್ಟೆಂಟ್ಸ್ ಸಂಸ್ಥೆಯವರು ಬಿಲ್ಟ್ ಡ್ರಾಯಿಂಗ್ ಗಳನ್ನು ಕೆಲಸವಾದ ಮೇಲೆ ವರದಿಯ ಜೊತೆಗೆ ಸಲ್ಲಿಸಬೇಕು ಆದರೆ ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡ ತಪಾಸಣಾ ವರದಿಯಲ್ಲಿ ಅದು ಇರುವುದಿಲ್ಲ.
ಇದನ್ನು ಮಾನ್ಯ ಲೋಕಾಯುಕ್ತರು ಗಮನಿಸಿ. ಕೂಡಲೇ ಕೆಲವರ ಹಿತಾಸಕ್ತಿ ಗೋಸ್ಕರ ಆಗಿರುವ ಈ ಟೆಂಡರ್ ಪಕ್ರಿಯೆಯನ್ನು ವಜಾ ಗೊಳಿಸುವ ಮೂಲಕ ಹೊಸ ಟೆಂಡರ್ ಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳ ನೂರಕ್ಕೂ ಹೆಚ್ಚು ಕೋಟಿರೂ ಕಾಮಗಾರಿಗಳ ವಾರ್ಷಿಕ ಅವಧಿಯ ತಪಾಸಣೆ ನಡೆಸುವ ಸಂಸ್ಥೆ ನೈಜವಾಗಿ ಸತ್ಯವನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದ್ದು ಅದನ್ನು ಕಾನೂನು ಬದ್ಧವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ಆಗ್ರಹಿಸಲಾಗಿದೆ.