ಶಿವಮೊಗ್ಗ: ಡಿ: 05 : ಭಕ್ತರ ಕಷ್ಠಗಳನ್ನು ನಿವಾರಣೆ ಮಾಡುವ ಶಕ್ತಿ ದೇವಸ್ಥಾನಗಳಿಗೆ ಇದೆ. ಕಾರ್ತಿಕ ದೀಪೋತ್ಸವದಿಂದ ಭಕ್ತರ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಧರ್ಮದರ್ಶಿ ಕಾಲಜ್ಞಾನಿ ಗೋಪಾಲಸ್ವಾಮಿ ಹೇಳಿದರು.
ಅವರು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕ್ ನೆಲ್ಯಡ್ಕ ಸಂಸೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಸಮಿತಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವದಲ್ಲಿ ಭಕ್ತರಿಗೆ ಆಶೀರ್ವದಿಸಿ ಮಾತನಾಡಿದರು.
ಪ್ರತಿಯೊಬ್ಬರು ಶ್ರದ್ಧೆ ಭಕ್ತಿಯಿಂದ ಕಾರ್ತಿಕ ದೀಪೋತ್ಸವದಲ್ಲಿ ಭಕ್ತರು ದೀಪವನ್ನು ಬೆಳಗುವುದರ ಮೂಲಕ ಕತ್ತಲೆಯ ದುಃಖ ಕಷ್ಠಗಳಿಂದ ಬಳಲಿದ ಜೀವಕ್ಕೆ ಹೊಸ ಬೆಳಕಿನೊಂದಿಗೆ ಉಜ್ವಲ ಬದುಕಿನ ದಾರಿಗಳು ಗೋಚರಿಸುತ್ತದೆ ಎಂದರು.
ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತರು ಸ್ವಯಂ ಪ್ರೇರಣೆಯಿಂದ ಹಲವಾರು ಜಿಲ್ಲೆಗಳಿಂದ ಬಂದು ಹೂವಿನ ಆಲಂಕಾರದೊಂದಿಗೆ ಬೆಳಿಗ್ಗೆ ಯಿಂದ ರಾತ್ರಿ ಜಾಗರಣೆ ಮಾಡುವುದರ ಮೂಲಕ ಹಲವು ಪ್ರಜಾ ಕೈಂಕರ್ಯಗಳು, ಕೋಲ, ಪಂರ್ಜುಲಿ ದೇವರ ಆರಾಧನೆ ಮೂಲಕ ರಾತ್ರಿಯಿಂದ ಬೆಳಗಿನ ಜಾವದವರೆಗೂ ಭಕ್ತರ ಕಷ್ಠಗಳನ್ನು ಆಲಿಸಿ ಅದರ ಶಾಶ್ವತ ಪರಿಹಾರಕ್ಕೆ ಮಾರ್ಗದರ್ಶನ ಮಾಡುವ ರೀತಿ ಅದ್ಬುತವಾಗಿದೆ.
ಶ್ರೀ ಚಾಮುಂಡೇಶ್ವರಿ ಜ್ಯೂಸ್ ಎಳನೀರು ಅಂಗಡಿ ಮಾಲೀಕ ಜೆ.ಜಯರಾಮ್ರವರು ಪ್ರತಿ ವರ್ಷ ಹೂವಿನ ಆಲಂಕಾರವನ್ನು ಮಾಡುತ್ತ ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಪ್ರತಿಯೊಬ್ಬ ಭಕ್ತರು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಕಲಾ ತಂಡದ ಕಲಾವಿದರ ಮೂಲಕ ಪಕ್ಕವಾದ್ಯದೊಂದಿಗೆ ಜಾನಪದ ಭಕ್ತಿಗೀತೆಗಳ ಗಾಯನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುತ್ತಾರೆ. ಕೆಂಡಾದರ್ಚನೆ, ದೋಣಿ ನದಿ ಸೇವೆಯೊಂದಿಗೆ ಆರಂಭವಾಗುವ ಪೂಜೆ ಪುರಸ್ಕಾರಗಳು, ಕೋಲದ ಮೂಲಕ ಶ್ರೀ ಚಾಮುಂಡೇಶ್ವರಿಯ ಅಪ್ಪಣೆ ಪ್ರತಿಯೊಬ್ಬ ಭಕ್ತರಿಗೆ ಶ್ರೀರಕ್ಷೆಯಾಗಿದೆ.
ಇಂತಹ ಅಪರೂಪದ ದೇವಸ್ಥಾನದಲ್ಲಿ ಕಾಲಜ್ಞಾನಿ ಧರ್ಮದರ್ಶಿ ಗೋಪಾಲಸ್ವಾಮಿರವರು ನಾಲ್ಕು ನೂರು ವರ್ಷದ ಇತಿಹಾಸವನ್ನು ಕಣ್ಣಿಗೆ ನಾಟುವಂತೆ ಹೇಳುವ ರೀತಿ ಅಧ್ಬುತವಾಗಿದೆ.
ನೂರಾರು ಭಕ್ತರಿಗೆ ರಾತ್ರಿಯ ಭೋಜನದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇಂತಹ ಅಪರೂಪದ ದೇವಸ್ಥಾನ ಶ್ರೀ ಚಾಮುಂಡೇಶ್ವರಿ ದೇವಿ ಅಮ್ಮನ ಆಶೀರ್ವಾದಕ್ಕೆ ಮಂಗಳವಾರ ಮತ್ತು ಶುಕ್ರವಾರ ಅಮಾವಾಸೆ ಹುಣ್ಣಿಮೆಯಲ್ಲಿ ವಿಶೇಷ ಪ್ರಜಾ ಕೈಂಕರ್ಯಗಳು ನಡೆಯುತ್ತದೆ.