ಶಿವಮೊಗ್ಗ ನ.15)
 ಪ್ರಜಾಪ್ರಭುತ್ವ ಒಂದು ಬಲಿಷ್ಟ ವ್ಯವಸ್ಥೆ. ಅತಿ ಸಾಮಾನ್ಯ ವ್ಯಕ್ತಿ ಕೂಡ ಉನ್ನತ ಸ್ಥಾನಕ್ಕೇರಬಹುದೆಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಹೇಳಿದರು.


 ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಕಾಲೇಜು ವಿಭಾಗ, ಆರ್ಯ ವಿಜ್ಞಾನ ಕಾಲೇಜು ಶಿವಮೊಗ್ಗ ಇವರ ಸಹಯೋಗದೊಂದಿಗೆ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ 2024-25 ನೇ ಸಾಲಿನ ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


 ನಾವೆಲ್ಲ ಸಂಘಟನೆಗಳ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದು. ನಮಗೆಲ್ಲ ಈ ರೀತಿಯ ಅಣಕು/ಯುವ ಸಂಸತ್ ತರಬೇತಿಗಳು ಇರಲಿಲ್ಲ. ಆದರೆ ಇಂತಹ ತರಬೇತಿ, ಸ್ಪರ್ಧೆಗಳು ನಮ್ಮನ್ನು ಮುಂದಕ್ಕೆ ಕರೆದೊಯ್ಯೊವ ದಾರಿದೀಪವಾಗಿವೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳ ಸದುಪಯೋಗ ಪಡೆಯಬೇಕು ಎಂದರು.


 ಪ್ರಜಾಪ್ರಭುತ್ವ ಬಲಿಷ್ಟ ವ್ಯವಸ್ಥೆಯಾಗಿದ್ದು ಇದರಡಿ ಎಲ್ಲರಿಗೆ ನ್ಯಾಯ ಇದೆ. ನಾನೇ ಶಾಸಕನಾಗುತ್ತೇನೆಂದು ಎಣಿಸಿರಲಿಲ್ಲ. ಹಿಂದುಳಿದ, ತುಳಿತಕ್ಕೊಳಗಾದ ಸಮುದಾಯದಿಂದ ಬಂದAತಹ ಡಾ.ಅಂಬೇಡ್ಕರ್‌ರವರು ಸಂವಿಧಾನ ರಚಿಸಿದರು, ಸಾಮಾನ್ಯ ವ್ಯಕ್ತಿಯಾಗಿದ್ದ ವಿಜ್ಞಾನಿ ಅಬ್ದುಲ್ ಕಲಾಂರವರು ರಾಷ್ಟçಪತಿಯಾಗುತ್ತಾರೆ, ಚಹಾ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ ಎಂದ ಅವರು ಇದಕ್ಕೆಲ್ಲ ಪರಿಶ್ರಮ ತುಂಬ ಮುಖ್ಯವಾಗುತ್ತದೆ. ಯುವಜನತೆ ರಾಜಕೀಯ ಸೇರಿದಂತೆ ಕ್ಷೇತ್ರದಲ್ಲಿ ಮುಂದೆ ಬರಬೇಕು ಇಂದಿನ ಯುವಪೀಳಿಗೆ ರಾಜಕೀಯ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸಬೇಕೆಂದು ಹೇಳಿದರು.


 ವಿಧಾನ ಪರಿಷತ್ ಶಾಸಕರಾದ ಡಿ.ಸ್.ಅರುಣ್ ಮಾತನಾಡಿ, ಉತ್ತಮ ಸಂಸದೀಯ ಪಟುವಾಗಬೇಕು ಅಂದರೆ ಅಧ್ಯಯನ ಮಾಡಬೇಕು. ಕಳೆದ 3 ವರ್ಷಗಳಲ್ಲಿ ತಪ್ಪದೇ ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸಿದ ಹೆಮ್ಮೆ ನನಗಿದೆ. ರಾಜಕೀಯ ರಂಗದಲ್ಲಿ ಆಸಕ್ತಿ ಇರುವವರಿಗೆ ವಿಧಾನ ಸೌಧ ಪ್ರವೇಶಿಸುವ ಬಯಕೆ ಇರುತ್ತದೆ. ಶಾಸಕಾಂಗಕ್ಕೆ ಹೆಚ್ಚು ಶಕ್ತಿ ಇದೆ. ಸಾಮಾನ್ಯವಾಗಿ ಬಹುತೇಕರು ಇಂಜಿನಿಯರ್, ವೈದ್ಯರಾಗಬೇಕೆಂಬ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಆಸಕ್ತಿ ಮೂಲಕ ಬದಲಾವಣೆ ಸಾಧ್ಯವಿದೆ ಎಂದ ಅವರು ವಿಧಾನ ಸಭೆ, ವಿಧಾನ ಪರಿಷತ್ ಸಂರಚನೆ, ಕಾರ್ಯ ವಿಧಾನದ ಬಗ್ಗೆ ವಿವರಿಸಿದರು.


 ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, 15 ನೇ ಶತಮಾನದಲ್ಲಿ ನಮ್ಮ ದೇಶದ ಆರ್ಥಿಕತೆ ಶೇ.40 ರಷ್ಟಿತ್ತು. ಇದೀಗ ಮತ್ತೆ ಭಾರತ 5 ನೇ ಸ್ಥಾನದಲ್ಲಿದೆ. 2030 ರೊಳಗೆ 3 ನೇ ಸ್ಥಾನಕ್ಕೇರಲಿದೆ. ಮುಂದೆ ವಿಶ್ವಗುರು ಆಗಲಿದೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಶೇ.29 ರಷ್ಟು ಯುವಪೀಳಿಗೆ ಇದೆ. ಆದ್ದರಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆ. ಮಕ್ಕಳು ಬುದ್ದಿವಂತರಾಗಬೇಕು. ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಯುವಪೀಳಿಗೆ ಮನಸು ಮಾಡಿದರೆ ದೇಶ ಬದಲಾಯಿಸಬಹುದು ಎಂದು ಅಭಿಪ್ರಾಯಪಟ್ಟರು.


 ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಸರ್ಕಾರ ರಚನೆ ಕುರಿತು ತಿಳುವಳಿಕೆ ನೀಡುತ್ತಿರುವುದು ಉತ್ತಮ ಕಾರ್ಯಕ್ರಮ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಬೇಕು. ಸದನಗಳಲ್ಲಿ ಆರೋಗ್ಯಕರ ಮತ್ತು ಫಲಪ್ರದವಾದ ಚರ್ಚೆಗಳು ಆಗಬೇಕು ಎಂದರು.
 ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿ.ಪಂ. ಸಿಇಓ ಎನ್.ಹೇಮಂತ್ ಮಾತನಾಡಿದರು.
 ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಪ್ ಕಾರ್ಯಕ್ರಮದ ಪೋಸ್ಟರ್ ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
 ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿ ಜಿ.ಶ್ರೀಧರ್, ಐಎಎಸ್, ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್ ಡಿಡಿಪಿಯು ಮಂಜುನಾಥ್, ಜಿಲ್ಲಾ.ಸ.ಪ.ಪೂ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಂಡರೀನಾಥ್, ಜಿಲ್ಲಾ ರಾಜ್ಯಶಾಸ್ತç ಉಪನ್ಯಾಸಕರ ವೇದಿಕೆ ಅಧ್ಯಕ್ಷ ಘನಶ್ಯಾಮ ಆರ್.ಸಿ, ಆರ್ಯ ವಿಜ್ಞಾನ ಪಿಯು ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್, ಬಿಇಓ ರಮೇಶ್ ನಾಯಕ್ , ಪ್ರಭಾಕರ್, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಪಿಯು ಕಾಲೇಜು ಬಹುಮಾನ ವಿಜೇತರ ವಿವರ: ದಕ್ಷಿಣ ಕನ್ನಡ ಸೇಕ್ರೆಡ್ ಹಾರ್ಟ್ ಪಿಯು ಕಾಲೇಜು ವಿದ್ಯಾರ್ಥಿ ಮೋಕ್ಷಿತ್ ಎಸ್ ಬಂಗೇರಾ ಪ್ರಥಮ, ಚಿಕ್ಕಮಗಳೂರು ಜಿಲ್ಲೆಯ ಜೆಸಿಬಿಎಂ ಕಾಲೇಜಿನ ಇಷಾನ್ ದ್ವಿತೀಯ, ಉಡುಪಿ ಜಿಲ್ಲೆಯ ಜಿಜೆಸಿ ಕಾಲೇಜಿನ ವರಲಕ್ಷಿö್ಮ ತೃತೀಯ ಬಹುಮಾನ ಪಡೆದುಕೊಂಡರು. ಹಾಗೂ ಬೆಳಗಾವಿ ಜಿಲ್ಲೆಯ ಜಿಜೆಸಿ ಕಾಲೇಜಿನ ರಾಕೇಶ್ ಬಸವರಾಜ ಅಂಬರಶೆಟ್ಟಿ, ಹಾಸನ ಜಿಲ್ಲೆಯ ಜಿಜೆಸಿ ಕಾಲೇಜಿನ ಗಣೇಶ್ ವಿ.ಪಿ, ಶಿವಮೊಗ್ಗ ಜಿಲ್ಲೆಯ ಕುಮದ್ವತಿ ಕಾಲೇಜಿನ ಮೇಘನಾ ಬಿ ಆರ್, ಶಿವಮೊಗ್ಗ ಜಿಲ್ಲೆಯ ಅರಬಿಂದೋ ಕಾಲೇಜಿನ ಪ್ರಜ್ವಲ್ ಡಿ, ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜಿನ ಆರ್ಯ ವಿಜಯಕುಮಾರ್, ಬೆಂಗಳೂರು ದಕ್ಷಿಣ ಕ್ರೆöÊಸ್ಟ್ ಕಾಲೇಜಿನ ಪೂರ್ಣತೇಜಸ್ವಿ, ಹಾಸನ ಕಾಲೇಜಿನ ಜಿಜೆಸಿ ಕಾಲೇಜಿನ ವರ್ಷ ಪಡೆದುಕೊಂಡರು.
ಪ್ರೌಡ ಶಾಲಾ ವಿಭಾಗದ ಬಹುಮಾನ ವಿಜೇತರ ವಿವರ : ಗದಗ ಜಿಲ್ಲೆಯ ಹಡ್ಡಳ್ಳಿ ಸರ್ಕಾರಿ ಪ್ರೌಡಶಾಲೆಯ ಮಹಮ್ಮದ್ ರಫೀಕ್ ಎನ್.ಆರ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಉತ್ತರ ಕನ್ನಡ ಜಿಲ್ಲೆ ತೆರ್ನಬೈಲ್ ಕೆಪಿಎಸ್ ಪ್ರೌಡಶಾಲೆಯ ಯಾಮಿನಿ ಬಾಸ್ಕರ್ ನಾಯ್ಕ್ ದ್ವಿತೀಯ, ಚಿಕ್ಕೋಡಿ ಜಿಲ್ಲೆ, ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಎಮ್‌ಡಿಆರ್‌ಎಸ್ ಪ್ರೌಢಶಾಲೆಯ ಐಶ್ವರ್ಯ ಕಾನತ್ತಿ ತೃತೀಯ ಸ್ಥಾನ ಪಡೆದುಕೊಂಡರು. ಹಾಗೂ ಧಾರವಾಡ ಜಿಲ್ಲೆಯ ಅದರಗುಂಜಿ ಸರ್ಕಾರಿ ಪ್ರೌಡಶಾಲೆಯ ಸುಬ್ರಮಣ್ಯ ಹೊನ್ನಪ್ಪ ಗೌಡ್ರು, ಉಡುಪಿ ಜಿಲ್ಲೆಯ ಸಾಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಧಾತಾ ಎಸ್ ಪೂಜಾರಿ, ಉಡುಪಿ ಜಿಲ್ಲೆಯ ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವರ ಪ್ರಸಾದ್, ಧಾರವಾಡ ಜಿಲ್ಲೆಯ ಗುಂಡಗೋಡಿ ಸರ್ಕಾರಿ ಪ್ರೌಢಶಾಲೆಯ ಅನ್ನಪೂರ್ಣ ಗುಂಡಗೋಡು, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತುಂಬಾರಗುಡ್ಡೆ ಸರ್ಕಾರಿ ಪ್ರೌಢಶಾಲೆ ಅರ್ಪಿತಾ, ಬೆಂಗಳೂರು ದಕ್ಷಿಣ ಜಿಲ್ಲೆ ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಅಂಜಲಿ ಎಸ್, ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭರತ್ ಸಿಂಗ್ ಇವರು ಸಮಾಧಾನಕರ ಬಹುಮಾನ ಪಡೆದುಕೊಂಡರು.

By admin

ನಿಮ್ಮದೊಂದು ಉತ್ತರ

error: Content is protected !!