ಶಿವಮೊಗ್ಗ: ತುಂಗಾ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ನೀರನ್ನು ಅಣೆಕಟ್ಟೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ನೀರಿನ ಶೇಖರಣೆಯು ಅತ್ಯವಶಕ್ಯಕವಾಗಿದ್ದು, ತೋಟಗಾರಿಕೆ ಹಾಗೂ ನಿಂತ ಬೆಳೆಗಳಿಗೆ ಮಾತ್ರ ನೀರನ್ನು ಕಾಲುವೆಯಲ್ಲಿ ಹರಿಸಲಾಗುವುದು. ಈ ಭಾಗಗಳಲ್ಲಿ ಭತ್ತದ ಬೆಳೆಗೆ ನೀರನ್ನು ಪೂರೈಸಲು ಸಾಧ್ಯವಾಗುವುದಿಲ್ಲವಾದ್ದರಿಂದ ರೈತರು ಬೇಸಿಗೆ ಬೆಳೆಗೆ ಭತ್ತದ ಬೆಳೆಯನ್ನು ಬೆಳೆಯಬಾರದೆಂದು ಸೂಚನೆ ನೀಡಲಾಗಿದೆ. ಭತ್ತ ಬೆಳೆದು ಹಾನಿಯಾದಲ್ಲಿ ಬೆಳೆ ಪರಿಹಾರಕ್ಕೆ ಇಲಾಖೆ ಜವಾಬ್ಧಾರಿಯಾಗಿರುವುದಿಲ್ಲ ಎಂದು ಕನೀನಿನಿ. ತುಂಬಾ ಮೇಲ್ದಂಡೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.