ಹೊಸನಗರ: ಬರುವ ಫೆ.09ರ ಮಂಗಳವಾರದಿಂದ ಫೆ.17ರ ಬುಧವಾರದವರೆಗೆ ಹೊಸನಗರದ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಮಾರಿಜಾತ್ರೆ ನಡೆಯಲಿದೆ ಎಂದು ಮಾರಿ ಕಾಂಬ ಜಾತ್ರಾ ಕಮಿಟಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಇಂದಿಲ್ಲಿ ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಫೆ.09ರ ಮಂಗಳವಾರ ಬೆಳಿಗ್ಗೆ 8ಗಂಟೆಯಿಂದ ಮಾರಿಯಮ್ಮ ತಾಯಿ ಮನೆಯೆಂದೆ ಕರೆಯಲ್ಪಡುವ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬ ದೇವಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿ ಯನ್ನು ಪ್ರತಿಷ್ಠಾಪಿಸಿ ಸಂಜೆ 9ಗಂಟೆಯವರೆಗೆ ಪೂಜೆ ನಡೆಯುತ್ತದೆ. ನಂತರ ಮಾರಿಯಮ್ಮ ದೇವಿಯ ಮೂರ್ತಿಯನ್ನು ಗಂಡನ ಮನೆ ಯೆಂದೆ ಖ್ಯಾತಿ ಪಡೆದಿರುವ ಮಾರಿಗುಡ್ಡದಲ್ಲಿ 8ದಿನಗಳ ಕಾಲ ಜಾತ್ರೆ ನಡೆಯಲಿದೆ ಎಂದರು.
ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳಾಗಿ ವಿಜಯ್ ಅಮ್ಯೂಸ್ ಮೆಂಟ್‌ನವರಿಂದ ರೋಮಾಂಚನಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾನ್ಸ್, ಮಾರುತಿ ಡೂಮ್, ಮಕ್ಕಳ ರೈಲು, ಮ್ಯಾಜಿಕ್ ಷೋ ಡಾಗ್ ಷೋ, ಹಾಗೂ ಇನ್ನೂ ಹತ್ತು ಹಲವಾರು ರೀತಿಯ ವಿಶೇಷ ಮನೋ ಞರಂಜನೆಗಳು ಇದ್ದು ಅದರ ಜೊತೆಗೆ ಪ್ರತಿ ದಿನ ರಾತ್ರಿ ಪ್ರಖ್ಯಾತ ದೂರದರ್ಶನ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮವಿರುತ್ತದೆ ಎಂದರು.
ಫೆ.12ರ ಶುಕ್ರವಾರ ಕಲಾಚಿಗುರು ಕಲಾ ತಂಡ ಹಳ್ಳಾಡಿ ಇವರಿಂದ ಹಾಸ್ಯ, ನೃತ್ಯ, ಫೆ. 13ರ ಶನಿವಾರ ರಾತ್ರಿ ಮಂಗಳೂರಿನ ಹೆಸ ರಾಂತ ನೃತ್ಯ ತಂಡ ಕರ್ನಾಟಕ ಕಲಾ ಸಾಮ್ರಾಟ್ ಪ್ರಶಸ್ತಿ ವಿಜೇತ ತಂಡದಿಂದ ಡೇರ್-2 ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಡ್ಯಾನ್ಸ್ ಸ್ಟಾರ‍್ಸ್ ಸ್ಟೋಡಿಯೋ ಅಡ್ಯಾರ್‌ಪದವುರವರಿಂದ ಹಾಸ್ಯ, ನೃತ್ಯ, ಹಾಗೂ ಗಾಯನಗಳನ್ನೊಳಗೊಂಡ ಕಾರ್ಯ ಕ್ರವಿದ್ದು, ಫೆ.14ರ ಭಾನುವಾರ ಮನು ಆರ್ಕೆಸ್ಟ್ರಾ ಭದ್ರಾವತಿ ಇವರಿಂದ ಆರ್ಕೆಸ್ಟಾ, 15ರ ಸೋಮವಾರ ರಾತ್ರಿ ಕಲಾಚಿಗುರು ಹಳ್ಳಾಡಿಯವರಿಂದ ಎಲ್ಲಾ ದೇವ್ರ ಆಟ, ಎಂಬ ನಾಟಕ, 16ನೇ ಮಂಗಳವಾರ ಭದ್ರಾವತಿಯವರಿಂದ ಆರ್ಕೆಸ್ಟಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಹೊಸ ನಗರ ತಾಲ್ಲೂಕಿನ ದೇವಿಯ ಭಕ್ತಾರು ಈ ಎಲ್ಲ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಹಾಗೂ ಸಾಮಾ ಜಿಕ ಅಂತರ ಸ್ಯಾನೀಟೈಸರ್ ಹಾಗೂ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಬರಬೇಕೆಂದರು.
ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ಜಾತ್ರಾ ಕಮಿಟಿಯ ಮುಖ್ಯಸ್ಥರಾದ ಹೆಚ್.ಎನ್.ನಾಗರಾಜ್, ಕಾರ್ಯದರ್ಶಿ ಟಿ.ಆರ್.ಸುನೀಲ್, ಖಾಜಾಂಚಿ ಪಿ.ಮನೋ ಹರ್, ಸದಸ್ಯರಾದ ಹೆಚ್.ಎಸ್.ಗಿರೀಶ್, ನಾರಾಯಣ, ಹೆಚ್.ಎಲ್. ದತ್ತಾತ್ರೇಯ, ಹೆಚ್.ಎಲ್.ಅನಿಲ್, ಕುಮಾರಗೌಡ, ಎ.ವಿ.ಮಲ್ಲಿಕಾರ್ಜುನ, ಪ್ರಕಾಶ್ ಸುರುಳಿ ಕೊಪ್ಪ, ದತ್ತಾತ್ರೇಯ ಉಡುಪ, ಹೆಚ್.ಎಸ್ ಗೋಪಾಲ್, ನಿತ್ಯಾನಂದ, ಕೆ.ಜಿ.ನಾಗೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.