ಶಿವಮೊಗ್ಗ ಅಕ್ಟೋಬರ್ 31 ವಿಶೇಷ ವಿಕಲಚೇತನರಿಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವಲ್ಲಿ ಆರೈಕೆದಾರರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾ ನ್ಯಾ. ಸಂತೋಷ್ ಎಂ.ಎಸ್ ಹೇಳಿದರು.
 ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ
ಶ್ರೀ ಗಾನಯೋಗಿ ಪಂಚಾಕ್ಷರಿ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಅ.29 ರಂದು ಏರ್ಪಡಿಸಲಾಗಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.


 ವಿಶೇಷಚೇತನ ವ್ಯಕ್ತಿಗಳ ಬದುಕು, ಅವರ ಸಾಮರ್ಥ್ಯ ಆರೋಗ್ಯವಂತರಿಗೆ ಕೂಡ ಸ್ಪೂರ್ತಿದಾಯಕವಾಗಿದೆ ಎಂದ ಅವರು ಆರೈಕೆದಾರರಿಗೆ ಶುಭ ಹಾರೈಸುವ ಮೂಲಕ ಅವರ ಶ್ರಮವನ್ನು ಶ್ಲಾಘಿಸಿದರು.


ಮಾನಸಿಕ ತಜ್ಞರಾದ ಡಾ. ಪ್ರಮೋದ್ ಹೆಚ್.ಎಲ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, 21 ವಿಕಲತೆಗಳ ಸ್ವರೂಪದ ಬಗ್ಗೆ ಎಂಆರ್‌ಡಬ್ಲೂö್ಯ, ವಿಆರ್‌ಡಬ್ಲೂö್ಯ ಹಾಗೂ ವಿಆರ್‌ಡಬ್ಲೂö್ಯ ಆರೈಕೆದಾರರಿಗೆ ಮಾಹಿತಿಯನ್ನು ನೀಡಿದರು.


 ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿರೇಖಾ, ಆಶಾಕಿರಣ ಬುದ್ದಿಮಾಂದ್ಯ ಶಾಲಾ ಸಿಬ್ಬಂದಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು. ಎಂಆರ್‌ಡಬ್ಲೂö್ಯ,ವಿಆರ್‌ಡಬ್ಲೂö್ಯ ಹಾಗೂ ವಿಆರ್‌ಡಬ್ಲೂö್ಯ ಆರೈಕೆದಾರರು, ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!