ಶಿವಮೊಗ್ಗ ಅಕ್ಟೋಬರ್ 24(
 ಅಕ್ಟೋಬರ್ 22 ರಂದು ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು ಶಿವಮೊಗ್ಗ ಇಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಮಮತಾ.ಪಿ.ಆರ್. ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗು ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಕೋಟ್ಪಾ ಕಾಯ್ದೆ, ಟಿ ಸಿ ಸಿ ಹಾಗೂ ತಂಬಾಕು ಮುಕ್ತ ಯುವ ಅಭಿಯಾನ 2.0 ಉದ್ದೇಶಗಳ ಕುರಿತು ಉಪನ್ಯಾಸ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊಫೆಸರ್ ನಾಗರಾಜ್, ರವಿರಾಜ್ ಜಿ ಕೆ, ಶ್ರೀಮತಿ ಮಂಗಳ, ಕಾಲೇಜಿನ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಫೋಟೊ ಇದೆ)

=

ಉಚಿತ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮ
ಶಿವಮೊಗ್ಗ ಅಕ್ಟೋಬರ್ 24
 ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್(ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ, ಧಾರವಾಡ) ಸಂಸ್ಥೆಯಿAದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ಜಿಲ್ಲೆಯ ಪ.ಜಾತಿ/ಪ.ಪಂಗಡದ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ 10 ದಿನಗಳ ಉದ್ಯಮಶೀಲಾಭಿವೃದ್ದಿ ತರಬೇತಿ ಕಾರ್ಯಕ್ರಮನ್ನು ನ.15 ರಿಂದ 26 ರವರೆಗೆ ಆಯೋಜಿಸಲಾಗುವುದು.


 ಶಿಬಿರಾರ್ಥಿಗಳಿಗೆ ಉದ್ಯಮ ನಿರ್ವಹಣೆ, ಸರ್ಕಾರದ ಸ್ವಯಂ ಉದ್ಯೋಗ, ಉದ್ಯಮಾವಕಾಶ ಕುರಿತು ಪರಿಣಿತ ಅತಿಥಿ ಬೋಧಕರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಕೈಗಾರಿಕಾ ಭೇಟಿ ಮಾಡಿಸಲಾಗುವುದು.
 18 ರಿಂದ 55 ವಯೋಮಿತಿ ಒಳಗಿನ 10 ನೇ ತರಗತಿ ಪಾಸಾದ ಪ.ಜಾತಿ/ಪ.ಪಂ ಮಹಿಳಾ ಉದ್ಯಮಾಕಾಂಕ್ಷಿಗಳು ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ, ಅವಿನಾಶ್ ಎ, ಸಿಡಾಕ್ ತರಬೇತುದಾರರು ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ 2 ಪಾಸ್‌ಪೋರ್ಟ್ ಅಳತೆ ಫೋಟೊ ಹಾಗೂ ಆಧಾರ್ ಕಾರ್ಡ್ನ ಪ್ರತಿ ಸಲ್ಲಿಸಬೇಕು. ತರಬೇತಿ ಉಚಿತವಾಗಿದ್ದು ತರಬೇತಿ ವೇಳೆ ಊಟೋಪಚಾರ ಒದಗಿಸಲಾಗುವುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

=

ಶಿವಮೊಗ್ಗ ರಂಗಾಯಣದಲ್ಲಿ  ‘ನಾಟಕ ಅವಲೋಕನ ಕಾರ್ಯಾಗಾರ’ವನ್ನು ಇಂದು ದಿನಾಂಕ:24-10-2024 ರಂದು ರಂಗನಿರ್ದೇಶಕರಾದ ಶ್ರೀ ನಟರಾಜ್ ಹೊನ್ನವಳ್ಳಿ ಇವರು ‘ಗುಣಮುಖ’ ನಾಟಕದ ತುಣುಕೊಂದನ್ನು ಓದುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣ, ಶಿವಮೊಗ್ಗದ ನಿರ್ದೇಶಕರಾದ ಶ್ರೀ ಪ್ರಸನ್ನ ಡಿ ಸಾಗರ ಇವರು ವಹಿಸಿದ್ದರು. ಅತಿಥಿಗಳಾಗಿ ಶ್ರೀ.ಕೊಟ್ರಪ್ಪ ಹಿರೇಮಾಗಡಿ, ರಂಗಕರ್ಮಿಗಳು ಹಾಗೂ ನಿಕಟಪೂರ್ವ ಅಧ್ಯಕ್ಷರು, ಕಲಾವಿದರ ಒಕ್ಕೂಟ, ಶಿವಮೊಗ್ಗ ಇವರು ಆಗಮಿಸಿದ್ದರು. ಡಾ.ಶೈಲಜಾ

ಎ.ಸಿ., ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ, ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಪ್ರೊ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಹಾಗೂ ನಿರ್ದೇಶಕರು, ನಾಟಕ ಅವಲೋಕನ ಕಾರ್ಯಾಗಾರ ಮತ್ತು ಡಾ.ಲವ ಜಿ.ಆರ್., ಮುಖ್ಯಸ್ಥರು, ಸಹ್ಯಾದ್ರಿ ಕಲಾ ತಂಡ, ಶಿವಮೊಗ್ಗ ಹಾಗೂ ನಾಟಕ ಅವಲೋಕನ ಕಾರ್ಯಾಗಾರದ  ಸಂಚಾಲಕರು ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!