ಸಾಕ್ಷಿ ಸಹಿತ ವರದಿ- ತುಂಗಾತರಂಗದಲ್ಲಿ ಮಾತ್ರ
ಶಿವಮೊಗ್ಗ, ಸೆ.28:
ಶಿವಮೊಗ್ಗ ವಿನೋಬನಗರದ ಗುಜುರಿಯೊಂದಕ್ಕೆ ಪ್ರೌಢ ಶಿಕ್ಷಣ ಇಲಾಖೆಯ ಸಾವಿರಾರು ಪಠ್ಯಪುಸ್ತಕಗಳು ಆಟೋ ಒಂದರಲ್ಲಿ ಬಂದಿದ್ದು ಅವುಗಳನ್ನು ಗುಜರಿಗೆ ಹಾಕಲಾಗಿದೆ.
ಇಲ್ಲಿ ಗುಜುರಿ ವ್ಯಾಪಾರಿ ತಪ್ಪೇನು ಕಾಣುತ್ತಿಲ್ಲ. ಆದರೆ ಆ ಪುಸ್ತಕಗಳು ಹೇಗೆ ಉಳಿದವು? ಪುಸ್ತಕಗಳನ್ನು ಗುಜರಿಗೆ ಹಾಕುವ ಉದ್ದೇಶ ಏನು ಎಂಬುದು ಬಯಲಾಗಬೇಕಿದೆ.
ಪ್ರೌಢಶಾಲೆಗಳ ಎಂಟು ಹಾಗೂ ಒಂಬತ್ತನೇ ತರಗತಿ ಮಕ್ಕಳಿಗೆ ಸರ್ಕಾರ ಕೊಡ ಮಾಡಿದ್ದ ಪಠ್ಯಪುಸ್ತಕಗಳು ಏಕಏಕಿ ಗುಜರಿಗೆ ಬಂದದ್ದೇಕೆ? ಮಕ್ಕಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯನ್ನು ಶಿಕ್ಷಕರ ತೋರಿಸಿದ್ದರಾ? ಅಥವಾ ಇಲಾಖೆ ಶಾಲೆಗೆ ಸರಿಯಾಗಿ ಪಠ್ಯಪುಸ್ತಕ ಹಂಚಿಲ್ಲವೇ?
ಈ ಪುಸ್ತಕ ಏಕೆ ಬಂದವು ಎಂಬ ಸ್ಪಷ್ಟನೆಯನ್ನು ಶಿವಮೊಗ್ಗ ಶಿಕ್ಷಣ ಇಲಾಖೆ ನೀಡಲೇ ಬೇಕಿರುವುದು ಅನಿವಾರ್ಯವಾಗಿದೆ.
ಶಿಕ್ಷಣ ಇಲಾಖೆಗೆ ಬಜೆಟ್ ನ ಬಹುತೇಕ ಹಣ ಸುರಿಯುವ ಸರ್ಕಾರ ತನ್ನ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಶೂ ಮಧ್ಯಾಹ್ನದ ಬಿಸಿಯೂಟ, ಬೆಳಗಿದ ಹಾಲು ನೀಡುತ್ತಿದೆ. ಆರೋಗ್ಯದಷ್ಟೇ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಸರ್ಕಾರದ ಪುಸ್ತಕಗಳು ಗುಜರಿಗೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗಿದ್ದು
ಜಿಲ್ಲಾ ಇಲಾಖೆ ಆಟೋ ಮೂಲ ಹುಡುಕಿ ಎಲ್ಲಿಂದ ಆ ಪುಸ್ತಕಗಳು ಬಂದವು ಎಂಬುದನ್ನು ಪತ್ತೆ ಹಚ್ಚಬೇಕಿದೆ.
ಅಂತೆಯೇ ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುವ ಶಿವಮೊಗ್ಗ ಜಿಲ್ಲಾ ಪಂಚಾಯತ್ ಈ ಬಗ್ಗೆ ಒಂದು ಹಂತದ ವಿಚಾರಣೆ ನಡೆಸಬೇಕಿದೆ. ಶಿವಮೊಗ್ಗ ಡಿಡಿಪಿಐ ಈ ಸಂಬಂಧ ಪರಿಶೀಲಿಸಬೇಕು.
ಬಿಇಓ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಮೂಡಿದ್ದು ಉತ್ತರಿಸಬೇಕಾದವರು ಮಾಹಿತಿ ನೀಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.