ಸೊರಬ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಸಾಗರದ ಅಜಿತ ಸಭಾ ಭವನದಲ್ಲಿ ಫೆ.7ರಂದು ಅಯೋಧ್ಯೆಯಲ್ಲಿ ರಾಮಮಂದಿರ, ಹೃದಯದಲ್ಲಿ ರಾಮಚಂದಿರ ವಿಷಯದ ಕುರಿತು ಜಿಲ್ಲಾ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಸ್ಪರ್ಧಾತ್ಮಕವಾದ ಕವಿಗೋಷ್ಠಿಯು ರಾಜ್ಯದಲ್ಲಿ ಮೂರು ಸುತ್ತುಗಳಲ್ಲಿ ನಡೆಯಲಿದೆ.
ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಸುಸಂದರ್ಭದಲ್ಲಿ ಗೋಷ್ಠಿ ಆಯೋಜಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 10 ಕವನಗಳನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಮೊದಲ ಸುತ್ತಿನಲ್ಲಿ ಜಿಲ್ಲೆಯೊಂದರ ಎಲ್ಲಾ ಘಟಕಗಳು ಒಟ್ಟುಗೂಡಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿದೆ.
ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಕವನಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜೊತೆಗೆ ಏಳು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸ್ವಯಂ ರಚಿತ ಕವನಗಳನ್ನು ಫೆ.5ರೊಳಗೆ ಕಳುಹಿಸಬೇಕು. ನಕಲು ಕವನಗಳಿಗೆ ಅವಕಾಶವಿಲ್ಲ. ಇಮೇಲ್: maheshokhale85@gmail.com ಅಥವಾ ranjdat@gmail.com ಗೆ ಕಳಿಸಬಹುದು. ಹೆಚ್ಚಿನ ಮಾಹಿತಿಗೆ ಶ್ರೀರಂಜನಿ ದತ್ತಾತ್ರಿ ಮೊ: 9449998531, ಡಾ. ನೇತ್ರಾವತಿ, ಮೊ: 9844569694, ಮಹೇಶ ಗೋಖಲೆ ಸೊರಬ, ಮೊ: 9986409875ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!