ಶಿವಮೊಗ್ಗ,ಜ.೨೬:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶ್ರೀ ರಾಮಜನ್ಮ ಭೂಮಿತೀರ್ಥ ಕ್ಷೇತ್ರ ಟ್ರಸ್ಟ್‌ಕೈಗೊಂಡಿರುವ ಶ್ರೀ ರಾಮ ಸಮರ್ಪಣಾ ನಿಧಿ ಅಭಿಯಾನಕ್ಕೆ ಶಿವಮೊಗ್ಗ ಜಿಲ್ಲೆಯ ಆರ್ಯವೈಶ್ಯ ಸಮಾಜದಿಂದ ೨೦ ಲಕ್ಷರೂ. ಗೂ ಹೆಚ್ಚಿನ ದೇಣಿಗೆ ಸಂಗ್ರಹಿಸಿ ಅರ್ಪಿಸಲಾಯಿತು.
ನಗರದ ರಾಘವ ಸಭಾಂಗಣದಲ್ಲಿ ಆರ್ಯವೈಶ್ಯ ಸಮಾಜದ ಪ್ರಮುಖರು ಹಾಗೂ ಅಭಿಯಾನದ ಪ್ರಮುಖರಜತೆ ಆಯೋಜಿಸಿದ್ದ ಸಭೆಯಲ್ಲಿ ಸಮಾಜದಿಂದ ಚೆಕ್‌ಗಳ ಮೂಲಕ ಸಂಗ್ರಹಿಸಿದ ೨೦ ಲಕ್ಷರೂ.ಗೂ ಅಧಿಕ ಮೊತ್ತವನ್ನು ಶಿವಮೊಗ್ಗ ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ, ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಅವರು ಆರ್‌ಎಸ್‌ಎಸ್ ಪ್ರಮುಖರಾದ ಪಟ್ಟಾಭಿರಾಮ್ ಅವರಿಗೆ ನೀಡಿದರು.
ಆರ್‌ಎಸ್‌ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮಾತನಾಡಿ, ಹಿಂದೂಧರ್ಮದ ಕಾರ್ಯಗಳಿಗೆ ಆರ್ಯವೈಶ್ಯ ಸಮಾಜದ ಕೊಡುಗೆ ನಿರಂತರವಾಗಿ ನಡೆದುಕೊಂಡು ಬಂದಿದ್ದು, ಅಯೋಧ್ಯೆಯಕರ ಸೇವೆ ಸಂದರ್ಭದಲ್ಲಿಯೂ ಆರ್ಯವೈಶ್ಯದ ಪ್ರಮುಖರು ಭಾಗಿಯಾಗಿದ್ದರು. ಹಿಂದೂ ಧರ್ಮದ ಕಾರ್ಯಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುತ್ತಾರೆ. ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಸೇವೆ ಸಮರ್ಪಿಸಿದ್ದಾರೆ. ಆರ್ಯವೈಶ್ಯ ಸಮಾಜದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣಆಗುತ್ತಿದ್ದು, ಕೋಟ್ಯಾಂತರಜನರ ಶ್ರದ್ಧೆಯ ಧಾರ್ಮಿಕ ಕೇಂದ್ರದಲ್ಲಿ ಶ್ರೀರಾಮನ ಮಂದಿರ ಶೀಘ್ರ ಅನಾವರಣಗೊಳ್ಳಲಿದೆ ಎಂದರು.
ಆರ್ಯವೈಶ್ಯ ಸಮಾಜದಎಲ್ಲ ಪ್ರಮುಖರು ಚೆಕ್‌ಗಳ ಮುಖಾಂತರಶ್ರೀ ರಾಮ ಸಮರ್ಪಣಾ ನಿಧಿ ಅಭಿಯಾನಕ್ಕೆ ದೇಣಿಗೆ ನೀಡಿದರು. ಸಂಗ್ರಹಿಸಿದ ಒಟ್ಟು ಚೆಕ್‌ಗಳನ್ನು ಅಭಿಯಾನಕ್ಕೆ ನೀಡಲಾಯಿತು.
ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಪ್ರಮುಖರಾದ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಬಿ.ಎ.ರಂಗನಾಥ್, ಬೇಲಗೂರು ಮಂಜುನಾಥ್, ಭೂಪಾಳಂ ಶಶಿಧರ್, ಎಂ.ಮುರಳಿ, ಗೀರಿಶ್ ಕಾರಂತ್ ಮತ್ತಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!