ಶಿವಮೊಗ್ಗ, ಜ.27:
ಎಂತೆಂಥವರು ಇದ್ದಾರೆ ನೋಡಿ. ನಿನ್ನೆ ಶಿವಮೊಗ್ಗ ಹೊರವಲಯದ ರೆಸಾರ್ಟ್ ಒಂದರಲ್ಲಿ ಬಿಜೆಪಿ ಮಹಾನಗರ ಪಾಲಿಕೆ ಹಲವರ ತಂಡ ಕೆಲ ಮಹಿಳಾ ಕಾರ್ಪೊರೇಟರ್ ಗಳ ಪತಿರಾಯರೊಂದಿಗೆ ಬಾಡೂಟದ ಪಾರ್ಟಿ ಮಾಡಿದ್ದು ಸರಿಯಷ್ಟೇ. ಅದಕ್ಕೂ ಮೊದಲು ಸಿಕ್ಕ ಖುಷಿಯಲ್ಲಿ ಕನ್ನಡದ ಹಾಡುಗಳಿಗೆ ಸಿಕ್ಕಾಪಟ್ಟೆ ನರ್ತನ ಮಾಡಿದ್ದು ಅವರ ಪಕ್ಕದಲ್ಲೇ ನಿಂತು ವಿಡಿಯೋ ಮಾಡಿದ ಬಿಜೆಪಿಯ ಪುಣ್ಯಾತ್ಮರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿ ಬಿಟ್ಟಿರುವುದು ಈಗ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ವೀಡಿಯೋ ಸಕತ್ ವೈರಲ್ ಆಗಿದೆ. ಯಾರನ್ನು ನಂಬಬೇಕು ಯಾರು ಹೇಗೆ ಎಂಬ ಯೋಚನೆ ಇಲ್ಲದೆ ಶಿವಮೊಗ್ಗದ ಜನಪ್ರತಿನಿಧಿಗಳು ಅದರಲ್ಲೂ ಪತ್ನಿಯನ್ನು ಜನಪ್ರತಿನಿಧಿಯಾಗಿ ಮಾಡಿ, ತಾವೇ ಕಾರ್ಪೊರೇಟರ್ ಗಿಂತಲೂ ಜೋರಾಗಿ ಕಿರುಚಾಡುವ ದಬ್ಬಾಳಿಕೆ ಮಾಡುವ ಕೆಲ ಪತಿರಾಯರು ಇಲ್ಲಿ ಕುಣಿದು ಕುಪ್ಪಳಿಸಿದ್ದು ಹೆಚ್ಚು.
ಒಬ್ಬ ಜನಪ್ರತಿನಿಧಿ ತನ್ನ ವಿರಾಮದ ಅವಧಿಯನ್ನು ಮನಸ್ಸಿಗೆ ಬಂದಂತೆ ಸಾಮಾನ್ಯ ಜನರಂತೆ ಆಚರಿಸಿ ಕೊಳ್ಳಬಹುದು. ಆದರೂ ಸಹ ಜನ ತಮ್ಮನ್ನು ಗಮನಿಸುತ್ತಾರೆ ಎಂಬ ಸೂಕ್ಷ್ಮ ಪ್ರಜ್ಞೆಯನ್ನು ಹೊಂದಿರಬೇಕಿತ್ತು. ಅಲ್ಲಿಯೇ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಈಗ ಎಲ್ಲೆಡೆ ಬಯಲಾಗಲು ಕಾರಣರಾಗಿರುವ ಕಿತಾಪತಿ ಮನಸ್ಸಿನ ಜೊತೆಗಾರರು ಇಲ್ಲಿ ಮುಖ್ಯ ಎನಿಸುವುದೇ ಇಲ್ಲ
ಮಹಾನಗರ ಪಾಲಿಕೆ ಬಿಜೆಪಿಯ ಕಾರ್ಪೋರೇಟರ್​ಗಳು ಭರ್ಜರಿಯಾಗಿ ಹಾಕಿದ ಸ್ಟೆಪ್​ ಹಾಕಿ ವಿಡಿಯೋ ಸಕತ್ ವೈರಲ್ ಆಗಿದೆ. ಶಿವಮೊಗ್ಗ ಹೊರ ವಲಯದ ಸೋಷಿಯಲ್ ಕ್ಲಬ್​ನಲ್ಲಿ ನಡೆದ ಬಾಡೂಟದ ಪಾರ್ಟಿಯಲ್ಲಿ ಬಿಜೆಪಿ ಕಾರ್ಪೋರೇಟರ್​ಗಳು ಸ್ಟೆಪ್​ ಹಾಕಿದ್ದಾರೆ.‌ ಇವರ ಜೊತೆಗೆ ಮಹಿಳಾ ಕಾರ್ಪೋರೇಟರ್​ಗಳ ಪತಿರಾಯರು ಸಹ ಹಲವು‌ ಕನ್ನಡದ ಹಾಡುಗಳಿಗೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!