ಸಾಸ್ವೆಹಳ್ಳಿ, ಜ.27:
ಕಳೆದ ಒಂದು ವಾರದಿಂದ ಮೂರು ಗ್ರಾಮಗಳ ಗ್ರಾಮಸ್ಥರ ನಡುವೆ ದೇವರ ಕೋಣಕ್ಕಾಗಿ ನಡೆದ ಹಗ್ಗ ಜಗ್ಗಾಟ ಸುಖಾಂತ್ಯ ಕಂಡಿದ್ದು, ದೇವರ ಕೋಣ ಈಗ ಭದ್ರಾವತಿ ತಾಲ್ಲೂಕು ಜಂಬರಗಟ್ಟೆ ಗ್ರಾಮದೇವರ ಪಾಲಾಗಿದೆ.
ಕಳೆದ ಮೂರ‍್ನಾಲ್ಕು ವರ್ಷಗಳಿಂದ ಬೇರೆಡೆಯಿಂದ ಬಂದು ಸಾಸ್ವೆಹಳ್ಳಿ ಗ್ರಾಮದಲ್ಲಿಯೇ ಸುತ್ತಾಡಿಕೊಂಡಿದ್ದ ಕೋಣವನ್ನು ಕಳೆದ ವಾರ ಭದ್ರಾವತಿ ತಾಲೂಕು ಜಂಬರಗಟ್ಟೆ ಗ್ರಾಮದವರು ಮತ್ತು ನ್ಯಾಮತಿ ತಾಲೂಕಿನ ಮಡಕೆ ಚೀಲೂರು ಗ್ರಾಮಸ್ಥರು ನಮ್ಮೂರ ದೇವರ ಕೋಣವೆಂದು ಹಿಡಿದುಕೊಂಡು ಹೋಗಲು ಬಂದಾಗ, ಸಾಸ್ವೆಹಳ್ಳಿ ಗ್ರಾಮಸ್ಥರು ಕೋಣವನ್ನು ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಕಟ್ಟಿ ದೇವರು ಅಪ್ಪಣೆ ನೀಡಿದವರು ಕೋಣ ತೆಗೆದು ಕೊಂಡು ಹೋಗಲು ಎರಡು ಗ್ರಾಮಸ್ಥರಿಗೆ ಸೂಚಿಸಿದ್ದರು,

ದೇವರ ಅಪ್ಪಣೆಯ ಮೇರೆಗೆ ಜಂಬರಗಟ್ಟೆ ಗ್ರಾಮಸ್ಥರು ಕೋಣ ತೆಗೆದುಕೊಂಡು ಹೋಗುತ್ತಿದ್ದಂತೆ, ಕೋಣ ನಮ್ಮೂರ ದೇವತೆಯದು ಎಂದು ಹೊನ್ನಾಳಿ ತಾಲೂಕಿನ ಮರಿ ಗೊಂಡನಹಳ್ಳಿ ಗ್ರಾಮಸ್ಥರು ಕ್ಯಾತೆ ತೆಗೆದಾಗ ಹೊನ್ನಾಳಿ ಪೊಲೀಸರು ಮಧ್ಯ ಪ್ರವೇಶಿಸಿ ಸಾಸ್ವೆಹಳ್ಳಿ ಉಪ ಪೊಲೀಸ್ ಠಾಣೆಗೆ ಕೋಣ ತಂದು, ಮೂರು ಗ್ರಾಮಗಳ ಮಧ್ಯ ವೈಷಮ್ಯ ಬೇಡವೆಂದು ರಾಜೀಸಂಧಾನ ಮಾಡಿ ಮಡಕೆ ಚೀಲೂರು ಗ್ರಾಮ ದೇವೆತೆ ಅಪ್ಪಣೆ ಸೂಚಿಸಿರುವಂತೆ, ಮರಿಗೊಂಡನಹಳ್ಳಿ ಗ್ರಾಮಸ್ಥರ ಮನ ಒಲಿಸಿ ಕೋಣವನ್ನು ಜಂಬರಗಟ್ಟೆ ಗ್ರಾಮಸ್ಥರಿಗೆ ನೀಡುವ ಮೂಲಕ ಘಟನೆ ಸುಖಾಂತ್ಯ ಕಂಡಿದೆ.
ಸಾಸ್ವೆಹಳ್ಳಿ ಗ್ರಾಮದ ಮುಖಂಡ ನಾಗೇಂದ್ರಪ್ಪ, ಜಂಬರಗಟ್ಟೆ ದುರ್ಗಾದೇವಿ ದೇವಸ್ಥಾನದ ಕಮೀಟಿ ಅಧ್ಯಕ್ಷರಾದ ರಾಮಪ್ಪ, ಮರಿಗೊಂಡನಹಳ್ಳಿ ಗ್ರಾಮದ ಮುಖಂಡ ಶೇಖರಪ್ಪ, ಎಸ್‌ಐ ಬಸವನಗೌಡ ಬಿರಾದರ್, ಎಎಸ್‌ಐ ಪರಶುರಾಮ್.ಟಿ, ಮೂರು ಗ್ರಾಮದ ಗ್ರಾಮಸ್ಥರು ವಾರಗಟ್ಟಲೆ ನಡೆದ ಒಟ್ಟಾರೆ ಘಟನೆಯ ಮುಕ್ತಾಯದ ಸಮಯದವರೆಗೂ ಭಾಗಿಯಾಗಿದ್ದರು.

ದೇವರ ಕೋಣಕ್ಕಾಗಿ ಗ್ರಾಮಗಳ ಮದ್ಯೆ ಜಗಳ

By admin

ನಿಮ್ಮದೊಂದು ಉತ್ತರ

You missed

error: Content is protected !!