ಶಿವಮೊಗ್ಗ: ಕಾನೂನು ವಿದ್ಯಾರ್ಥಿಗಳಿಗೆ ಮೂಟಿಂಗ್ ಕಾನೂನು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ವಕೀಲ ವೃತ್ತಿಯ ಹತ್ತಿರದ ಅನುಭವ ನೀಡಲಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಎಂ.ಎಸ್.ಸಂತೋಷ್ ಹೇಳಿದರು.

ನಗರದ ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಶನಿವಾರ ಮೂಟ್ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂಟ್ ಕೋರ್ಟ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಮೂಟಿಂಗ್ ಎನ್ನುವುದು ಶೈಕ್ಷಣಿಕ ತರಬೇತಿಯಾಗಿದ್ದು, ನ್ಯಾಯಾಲಯದ ನೀತಿ ಮತ್ತು ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಲು ಪೂರಕವಾಗಿದೆ. ಸಮಸ್ಯೆ ಮತ್ತು ಅಗತ್ಯ ಪರಿಹಾರಗಳನ್ನು ಗುರುತಿಸಿ,

ದೃಢವಾದ ಸಂವಹನ ಶೈಲಿಯನ್ನು ಬಳಸುವಂತಹ ವಕೀಲ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಮೂಟ್ ಕೋರ್ಟ್ ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎಂ.ಎಸ್.ಅನಂತದತ್ತಾ ಮಾತನಾಡಿ, ಪುಸ್ತಕಗಳ ಜೊತೆಗೆ ಇಂತಹ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಿದಾಗ ಮಾತ್ರ ಕಾನೂನಿನ ಸಂಪೂರ್ಣ ಅರಿವು ಪಡೆಯಬಹುದು. ವಕೀಲ ವೃತ್ತಿಯಲ್ಲಿ ಅಭ್ಯಾಸವೆಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಸೋಲುಗಳಿಂದ ಹೊಸತನಗಳನ್ನು ರೂಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಜ್ಯೋತಿ ಮಿರಾಜ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!